ಬೆಂಗಳೂರು: ರಾಜ್ಯದ ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಮೂರ್ನಾಲ್ಕು ದಿನಗಳಲ್ಲಿ ಈಡೇರಿಸುವುದಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಟ್ಟಿರುವುದಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ರಾಜ್ಯದ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾದ ಬಾಕಿ ಹಣಕ್ಕಾಗಿ ಒತ್ತಾಯಿಸಿ ಗುರುವಾರ ನಗರದ ಕಾವೇರಿ ಭವನದಲ್ಲಿನ ಸಕ್ಕರೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ರೈತರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಆಡುಗೋಡಿ ಪೊಲೀಸ್ ಮೈದಾನದಲ್ಲಿ ಅವರನ್ನು ಇರಿಸಿದ್ದರು.

ಸರ್ಕಾರದ ಈ ಕ್ರಮವನ್ನು ಖಂಡಿಸಿ ಆಡುಗೋಡಿ ಪೊಲೀಸ್ ಮೈದಾನದಲ್ಲೇ ರೈತರು ಉಪವಾಸ ಸತ್ಯಾಗ್ರಹ ನಡೆಸಿದ್ದರು.

`ರಾಜ್ಯದಲ್ಲಿ ಕಬ್ಬು ಬೆಳೆದ ರೈತರಿಗೆ ಸಕ್ಕರೆ ಕಾರ್ಖಾನೆಗಳಿಂದ 1500 ಕೋಟಿ ಬಾಕಿ ಹಣ ಬರಬೇಕಾಗಿದ್ದು, ಈ ಹಣವನ್ನು ಮಾರ್ಚ್ 30 ರೊಳಗೆ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳುವುದು ಹಾಗೂ ಕಬ್ಬಿಗೆ ಎಸ್.ಎ.ಪಿ. ಶಾಸನ ಕಾಯ್ದೆ ಜಾರಿ ಮಾಡಿ ಎಸ್.ಎ. ಪಾಟೀಲ್ ವರದಿಯನ್ವಯ ಬೆಲೆ ನಿಗದಿ ಮಾಡಲಾಗುವುದು ಎಂದು ಸಕ್ಕರೆ ಆಯುಕ್ತರು ಭರವಸೆ ನೀಡಿದ್ದರು.

ಈ ಸಂಬಂಧ ಇದೇ 8 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು, ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳ ಸಭೆ ನಡೆಸುವುದಾಗಿ ಭರವಸೆ ನೀಡಿದ್ದ ಆಯುಕ್ತರು ಮಾತು ಮರೆತಿದ್ದಾರೆ. ಪ್ರತಿಭಟನೆಗೆ ಮುಂದಾಗುವ ರೈತರಿಗೆ ರಾಜ್ಯ ಸರ್ಕಾರ ಪೋಲಿಸರ ಮೂಲಕ ಬಂಧನದ ಭೀತಿ ತೋರುತ್ತದೆ~ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.

`ಕಬ್ಬಿನ ಬಾಕಿ ಪಾವತಿ ವಿಳಂಬದಿಂದ ಸರಿಯಾದ ಸಮಯಕ್ಕೆ ಬ್ಯಾಂಕ್ನ ಬೆಳೆ ಸಾಲ ತೀರಿಸಲು ಸಾಧ್ಯವಾಗದ ಕಾರಣ ರೈತರು ಶೇ. 1 ರಷ್ಟು ಬಡ್ಡಿಗೆ ಬದಲಾಗಿ ಶೇ. 13 ರಷ್ಟು ಬಡ್ಡಿ ಕಟ್ಟಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಇದು ರೈತರಿಗೆ ಅನವಶ್ಯಕ ಹೊರೆಯಾಗಿದೆ. ರಾಜ್ಯ ಸಂಪುಟದಲ್ಲಿರುವ ಮಂತ್ರಿಗಳ ಸಕ್ಕರೆ ಕಾರ್ಖಾನೆಗಳೇ ಬಾಕಿ ಉಳಿಸಿಕೊಂಡಿರುವುದರಿಂದ ಸರ್ಕಾರ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ~ ಎಂದು ಆರೋಪಿಸಿದರು.

`ಈ ವರ್ಷ ರೈತರಿಗೆ ಕಬ್ಬಿನ ಇಳುವರಿಯೂ ಶೇ. 5 ರಷ್ಟು ಕಡಿಮೆಯಾಗಿದೆ. ಕಾರ್ಮಿಕರ ಸಮಸ್ಯೆಯಿಂದ ಕಟಾವು ವೆಚ್ಚ ಹೆಚ್ಚಾಗಿದೆ. ಪ್ರತಿ ಟನ್ ಕಬ್ಬು ಬೆಳೆಯಲು ರೂ. 400 ರಿಂದ 500 ವೆಚ್ಚವಾಗಿದೆ. ಆದರೆ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರ ಬಾಕಿ ನೀಡದೇ ವಿನಾ ಕಾರಣ ವಿಳಂಬ ಮಾಡುತ್ತಿವೆ. ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕಿದ್ದ ಸರ್ಕಾರ ಪೊಲೀಸರ ಮೂಲಕ ದೌರ್ಜನ್ಯಕ್ಕೆ ಮುಂದಾಗುತ್ತದೆ~ ಎಂದು ದೂರಿದರು.

`ಗುರುವಾರ ರಾತ್ರಿ ಆಡುಗೋಡಿ ಪೊಲೀಸ್ ಮೈದಾನದಲ್ಲಿ ನಡೆಸಿದ ಉಪವಾಸ ಸತ್ಯಾಗ್ರಹದಿಂದ ಕೆಲವು ರೈತರು ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಅಲ್ಲದೇ, ನಮ್ಮ ಸಮಸ್ಯೆಗಳಿಗೆ ಮುಖ್ಯಮಂತ್ರಿಗಳು ಸ್ಪಂದಿಸುವುದಾಗಿ ಹೇಳಿದ್ದಾರೆ~ ಎಂದು ಶಾಂತಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.