ಮೂಡಲಗಿ: ಇಲ್ಲಿಯ ಪವಾಡ ಪುರುಷ ಗವಿಮಠದ ರೇವಣಸಿದ್ಧೇಶ್ವರ ಜಾತ್ರೆಯ ಪಾಲಕಿ ಮತ್ತು ರಥೋತ್ಸವವು ಸೋಮವಾರ ಸಂಭ್ರಮದಿಂದ ಜರುಗಿತು.

ಬೆಳಿಗ್ಗೆ ಗವಿಮಠದ ಮೂಲ ಗದ್ದುಗೆಗೆ ಅಭಿಷೇಕ, ವಿಶೇಷ ಪೂಜೆ ಜರುಗಿತು. ಭಕ್ತರು ದೇವರಿಗೆ ಬೆಳಿಗ್ಗೆಯಿಂದ ನೈವೇದ್ಯ, ಆರತಿ ಸೇವೆ ಮಾಡಿದರು. ಸಂಜೆ ಹನಮಂತ ದೇವರ ದೇವಸ್ಥಾನದಿಂದ ಪ್ರಾರಂಭಗೊಂಡ ರಥದ ಉತ್ಸವ ಬಸವೇಶ್ವರ ವೃತ್ತದ ಮೂಲಕ ಬಸವ ಕಲ್ಯಾಣ ಮಂಟಪದವರೆಗೆ ಸಾಗಿ ಮರಳಿ ಮೂಲ ಸ್ಥಳಕ್ಕೆ ಸಾಗಿತು. ಸೇರಿದ ಭಕ್ತರು ಪರಸ್ಪರ ಗುಲಾಲು ಎರಚಿ ಸಂಭ್ರಮಪಟ್ಟರು. ದಾರಿ ಇಕ್ಕೆಲಗಳಲ್ಲಿ ನಿಂತ ಭಕ್ತರು ಕಾರೀಖು, ಬತ್ತಾಸು, ಹೂವುಗಳನ್ನು ರಥಕ್ಕೆ ಅರ್ಪಿಸಿ ತಮ್ಮ ಭಕ್ತಿ ಸಮರ್ಪಿಸಿದರು.

ವಿವಿಧ ವಾದ್ಯಗಳು, ಕೀಲುಕುದರೆ, ನವಿಲು ಜನರ ಗಮನ ಸೆಳೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.