ಮಂಗಳವಾರ, ಮೇ 11, 2021
24 °C

ಮೊದಲು ಚಿಕಿತ್ಸೆ ಕೊಡಿಸಬೇಕಿತ್ತು: ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: `ಯುವತಿಯೊಬ್ಬರನ್ನು ಗೃಹ ಬಂಧನದಲ್ಲಿಡಲಾಗಿತ್ತು ಎಂದು ವರದಿ ಪ್ರಕಟಿಸಿದ ನಂತರ ಮಾನವೀಯತೆ ದೃಷ್ಟಿಯಿಂದ ಆಕೆಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಬೇಕಿತ್ತು' ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅಭಿಪ್ರಾಯಪಟ್ಟರು.`ಮಾಳಮಡ್ಡಿ ಬಡಾವಣೆಯ ಮನೆಯಲ್ಲಿ ತಾಯಿಯೇ ಕೂಡಿಹಾಕಿದ್ದರು ಎನ್ನಲಾದ ಯುವತಿಯನ್ನು ಆಸ್ಪತ್ರೆಗೆ ಸೇರಿಸುವ ಬದಲು ಸಂದರ್ಶನಕ್ಕೆ ಬೆಂಗಳೂರಿಗೆ ಕರೆದುಕೊಂಡು ಹೋದುದು ಎಷ್ಟರ ಮಟ್ಟಿಗೆ ಸರಿ. ನಮಗೂ ಮಾಹಿತಿ ನೀಡದೇ ಸುದ್ದಿ ವಾಹಿನಿ ವರದಿಗಾರರು ಈ ರೀತಿ ಮಾಡಿದ್ದು ಸರಿಯಲ್ಲ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಘಟನೆಯ ವಿವರ: ಕರ್ನಾಟಕ ವಿ.ವಿ.ಯ ಸ್ನಾತಕೋತ್ತರ ವಿಭಾಗವೊಂದರಿಂದ ಚಿನ್ನದ ಪದಕದೊಂದಿಗೆ ಪದವಿ ಪೂರೈಸಿದ್ದ ಸಂಧ್ಯಾ ವಿಲಾಸರಾವ್ ಗಾಡಗೋಳಿ (27) ಎಂಬ ಯುವತಿ ಎರಡು ವರ್ಷಗಳಿಂದ ಮಾಳಮಡ್ಡಿಯ ಮೂರನೇ ಅಡ್ಡರಸ್ತೆಯ ಮನೆಯೊಂದರಲ್ಲಿ ವಾಸವಾಗಿದ್ದಾರೆ. ಪದವಿ ಶಿಕ್ಷಣ ಮುಗಿದ ಬಳಿಕ ಗದಗ ಪಟ್ಟಣದ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕಿಯಾಗಿಯೂ ಅವರು ಕೆಲಸ ಮಾಡಿದ್ದರು.ತಹಶೀಲ್ದಾರ್ ಆಗಿ ನಿವೃತ್ತಿ ಹೊಂದಿದ್ದ ತಂದೆ ವಿಲಾಸರಾವ್ ಅವರು ಕೆಲಕಾಲದ ಹಿಂದೆ ತೀರಿಕೊಂಡಿದ್ದರು. ಇದರಿಂದ ಆಕೆಯ ತಾಯಿ ಖಿನ್ನತೆಗೆ ಒಳಗಾಗಿದ್ದರು. ಮಗಳಿಗೆ ಮಾನಸಿಕ ಕಾಯಿಲೆ ಇರುವ ಬಗ್ಗೆ ಸಂದೇಹ ಬಂದದ್ದರಿಂದ ಕೆಲ ತಿಂಗಂದ ಮನೋವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿತ್ತು.ಮಗಳ ರಕ್ಷಣೆಯ ಉದ್ದೇಶದಿಂದ, ತಾಯಿ ಮನೆಯಿಂದ ಹೊರಹೋಗುವಾಗ ಮನೆಗೆ ಬೀಗ ಹಾಕಿಕೊಂಡು ಹೋಗುತ್ತಿದ್ದರು ಎಂದು ಆ ಮನೆಯ ಪಕ್ಕದ ನಿವಾಯೊಬ್ಬರು ನೀಡಿದ ಮಾಹಿತಿ ಆಧರಿಸಿ ಸುದ್ದಿ ವಾಹಿನಿಯ ವರದಿಗಾರರೊಬ್ಬರು ಗುರುವಾರ ಬೆಳಿಗ್ಗೆ ತಾಯಿ ಉಷಾ ಹಾಗೂ ಸಂಧ್ಯಾ ಅವರನ್ನು ಬೆಂಗಳೂರಿಗೆ ಕರೆದೊಯ್ದರು ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.