ಬುಧವಾರ, ಜನವರಿ 29, 2020
27 °C

ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ಪಂಕ್ತಿ ಭೇದ, ಮಡೆ ಸ್ನಾನ ಆಚರಣೆ ವಿರೋಧಿಸಿ ಹಾಗೂ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ಒತ್ತಾಯಿಸಿ ತಾಲ್ಲೂಕು ಸಿಪಿಎಂ ವತಿಯಿಂದ ನಗರದ ಸಿದ್ದಲಿಂಗಯ್ಯ ವೃತ್ತದ ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಬಿ.ಜಿ.ಹೇಮಂತರಾಜು, ‘ಸಮಾಜದಲ್ಲಿ ಇಂದಿಗೂ ಜಾತಿ ಪದ್ಧತಿ, ಅಸ್ಪೃಷ್ಯತೆಯ ಆಚರಣೆಗಳು ಜೀವಂತವಾಗಿದ್ದು, ಮೇಲ್ವರ್ಗದವರು ಕೆಳವರ್ಗದ ಜನರನ್ನು ಶೋಷಿಸುತ್ತಿದ್ದಾರೆ ಎಂದು ದೂರಿದರು.ಮಡೆ ಸ್ನಾನವೆಂಬ ಅನಿಷ್ಟ ಪದ್ಧತಿ  ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ರಾಜ್ಯದ ೧೧ ಕಡೆ ನಡೆಯುತ್ತಿದೆ. ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಪಂಕ್ತಿ ಭೇದ ನಡೆ ಯುತ್ತಿದ್ದು, ಜಾತಿವಾದಗಳನ್ನು ಪೋಷಿಸ ಲಾಗುತ್ತಿದೆ. ಸರ್ಕಾರ ಇಂತಹ ಮೌಢ್ಯ ಆಚರಣೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು.ಸಮಾಜದಲ್ಲಿನ ಅನಿಷ್ಟ ಪದ್ಧತಿ, ಮೂಢನಂಬಿಕೆ, ಕಂಚಾಚಾರಗಳನ್ನು ನಿಷೇಧಿಸುವ ದಿಸೆಯಲ್ಲಿ ತರಲಾಗು ತ್ತಿರುವ ಮೌಢ್ಯನಿಷೇಧ ಕಾಯ್ದೆ ಶೀಘ್ರವೇ ಜಾರಿಯಾಗಲಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರ ತೇಜಸ್ವಿ, ಸಿಐಟಿಯು ತಾಲ್ಲೂಕು ಅಧ್ಯಕ್ಷ ಪಿ.ಎ.ವೆಂಕಟೇಶ್, ವಕೀಲರಾದ ರುದ್ರಾರಾಧ್ಯ, ರೇಣುಕಾ ರಾಧ್ಯ, ಸಿಪಿಎಂ ದಲಿತ ಹಕ್ಕುಗಳ ಸಮಿತಿಯ ತಾ.ಅಧ್ಯಕ್ಷ ಅಂಜನಾ ಮೂರ್ತಿ ಮತ್ತಿತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)