ಭಾನುವಾರ, ಜನವರಿ 19, 2020
26 °C

ಯಲಹಂಕದಲ್ಲಿ ಕನ್ನಡ ರಾಜ್ಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ಅಂತರರಾಷ್ಟ್ರೀಯ ವಿಮಾನ­ನಿಲ್ದಾಣ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗ ನೀಡುವುದರ ಜತೆಗೆ  ಅಂತರರಾಷ್ಟ್ರೀಯ ವಿಮಾನನಿಲ್ದಾಣ ಪ್ರಾಧಿಕಾರದ ಹುದ್ದೆಗಳಲ್ಲಿ ಶೇ.90­ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ ಮೀಸಲಿಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.­ನಾರಾಯಣಗೌಡ ಒತ್ತಾಯಿಸಿದರು.ಕರ್ನಾಟಕ ರಕ್ಷಣಾ ವೇದಿಕೆಯ ಬ್ಯಾಟರಾಯನಪುರ ಕ್ಷೇತ್ರಘಟಕದ ವತಿ­ಯಿಂದ ಅಂತರರಾಷ್ಟ್ರೀಯ ವಿಮಾನ­ನಿಲ್ದಾಣ ರಸ್ತೆಯ ವಿದ್ಯಾನಗರ ಕ್ರಾಸ್‌ ಬಳಿ ಆಯೋಜಿಸಿದ್ದ ಕನ್ನಡ ರಾಜ್ಯೋ­ತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡುವುದರ ಜೊತೆಗೆ ಹೊರರಾಜ್ಯ ಹಾಗೂ ದೇಶಗಳಿಂದ ವಿಮಾನ ನಿಲ್ದಾಣಕ್ಕೆ ಆಗಮಿಸುವ ಜನರಿಗೆ ಕೆಂಪೇ­ಗೌಡರ ಬಗ್ಗೆ ತಿಳಿಸಲು, ನಿಲ್ದಾಣ­ದೊಳಗೆ ಅವರ ಇತಿಹಾಸ ಸಾರುವ ನಾಮಫಲಕಗಳನ್ನು ಹಾಕಬೇಕು ಎಂದು ಸಲಹೆ ನೀಡಿದರು.

ಪ್ರತಿಕ್ರಿಯಿಸಿ (+)