ಭಾನುವಾರ, ಜೂನ್ 20, 2021
25 °C

ಯಾರೂ ರಾಜೀನಾಮೆ ಕೇಳಿಲ್ಲ: ತ್ರಿವೇದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

 ನವದೆಹಲಿ, (ಐಎಎನ್ಎಸ್): ~ನಾನು ಕರ್ತವ್ಯದಿಂದ ವಿಮುಖನಾಗುವುದಿಲ್ಲ. ಪ್ರಧಾನಿ ಮನಮೋಹನ್ ಸಿಂಗ್ ಆಗಲಿ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಆಗಲಿ ನನ್ನ ರಾಜೀನಾಮೆ ಕೇಳಿಲ್ಲ~ ಎಂದು ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಬೆಳಿಗ್ಗೆ ಪಾರ್ಲಿಮೆಂಟ್ ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಈ ಸ್ಪಷ್ಟನೆ ನೀಡಿದ್ದಾರೆ. ಇದಕ್ಕೂ ಮೊದಲು ಸರ್ಕಾರ ತ್ರಿವೇದಿ ಅವರು ರಾಜೀನಾಮೆ ನೀಡಿಲ್ಲ ಎಂದು ಎರಡೂ ಸದನಗಳಲ್ಲಿ ಸ್ಪಷ್ಟನೆ ನೀಡಿತ್ತು.

ತೃಣಮೂಲ ಕಾಂಗ್ರೆಸ್ ಸದಸ್ಯರಾಗಿರುವ ದಿನೇಶ್ ತ್ರಿವೇದಿ ಅವರು, ~ಪ್ರಸಕ್ತ ವರ್ಷದ ರೈಲ್ವೆ ಬಜೆಟ್ ಮಂಡಿಸಿರುವ ನಾನು ಅದನ್ನು ಸಮರ್ಥಿಸಿಕೊಳ್ಳುವೆ~ ಎಂದರು.

ಬುಧವಾರ ಮಂಡಿಸಿದ ರೈಲ್ವೆ ಬಜೆಟ್ ನಲ್ಲಿ ಸಚಿವ ತ್ರಿವೇದಿ ಅವರು ಹತ್ತು ವರ್ಷಗಳಲ್ಲಿ ಮೊದಲ ಬಾರಿ ಪ್ರಯಾಣ ದರ ಹೆಚ್ಚಿಸಲು ಪ್ರಸ್ತಾವ ಮಂಡಿಸಿರುವುದಕ್ಕೆ ಅವರು ಪ್ರತಿನಿಧಿಸುವ ಪಕ್ಷ ತೃಣಮೂಲ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ನಾನೊಬ್ಬ ಗಡಿ ರಕ್ಷಣೆಯಲ್ಲಿರುವ ಯೋಧ. ನನ್ನ ಬದಲು ಇನ್ನೊಬ್ಬ ಬರುವವರೆಗೆ ನಾನಿರುವೆ. ಶಿಸ್ತಿನ ಸಿಪಾಯಿಯಾಗಿರುವ ನಾನು  ಪ್ರಧಾನಿ ಆಗಲಿ, ನನ್ನ ನಾಯಕಿ (ಮಮತಾ ಬ್ಯಾನರ್ಜಿ) ಆಗಲಿ ನನ್ನ ರಾಜೀನಾಮೆ ಕೇಳಿದರೆ ನಾನು ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವೆ ಎಂದು ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

~ನನಗೆ ಕುರ್ಚಿಯ ಮೇಲೆ ಯಾವೂದೇ ವ್ಯಾಮೋಹವೂ ಇಲ್ಲ~ ಎಂದೂ ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.