ಬುಧವಾರ, ಏಪ್ರಿಲ್ 21, 2021
29 °C

ಯುಗಾದಿಗೆ ಕಣಜ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಜ್ಞಾನ ಆಯೋಗವು ರೂಪಿಸಿರುವ ಕನ್ನಡ ಅಂತರ್ಜಾಲ ಕೋಶ ‘ಕಣಜ’ವು ನೂತನ ವಿನ್ಯಾಸದೊಂದಿಗೆ ಯುಗಾದಿ (ಏಪ್ರಿಲ್ 4)ಯಂದು ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ.ಕನ್ನಡಿಗರ ಕಲಿಕೆ, ಮಾಹಿತಿ ಹಂಚಿಕೆಗಾಗಿ ರೂಪುಗೊಂಡಿರುವ ಈ ವೆಬ್‌ಸೈಟ್‌ನ್ನು ಯೂನಿಕೋಡ್ ಫಾಂಟ್‌ಗಳನ್ನು ಬಳಸಿ ರೂಪುಗೊಳಿಸಲಾಗಿದೆ. ಹಿಂದಿಗಿಂತಲೂ ಹೆಚ್ಚು ಬಳಕೆದಾರ ಸ್ನೇಹಿ ವಿನ್ಯಾಸವನ್ನು ಹೊಂದಿದೆ ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.ಸರ್ಕಾರದ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಚಿರಂಜೀವಿಸಿಂಗ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಂಚಾಲನಾ ಸಮಿತಿಯ ಪ್ರಯತ್ನದಿಂದಾಗಿ 18 ಲಕ್ಷ ಪದಗಳ ಯೂನಿಕೋಡ್ ಡಾಟಾಬೇಸ್ ಸಿದ್ಧಗೊಂಡಿದೆ. ಮೊದಲ ಹಂತದಲ್ಲಿ ಕನ್ನಡ ಭಾಷೆ, ಸಾಹಿತ್ಯ, ವಿಜ್ಞಾನ-ತಂತ್ರಜ್ಞಾನ ಮತ್ತು ಕೃಷಿ ಸಂಗತಿಗಳ ಬಗ್ಗೆ ಆದ್ಯತೆ ನೀಡಲಾಗುತ್ತಿದೆ. ವಿವಿಧ ಅಕಾಡೆಮಿಗಳು, ಸಂಶೋಧನಾ ಸಂಸ್ಥೆಗಳು, ಪ್ರಕಾಶನ ಸಂಸ್ಥೆಗಳು ಮತ್ತು ವಿವಿಧ ಲೇಖಕರು ಸುಮಾರು 150ಕ್ಕೂ ಹೆಚ್ಚು ಪುಸ್ತಕಗಳು ಮತ್ತು ಲೇಖನಗಳು ಕಣಜ ಸಂಪಾದನಾ ಸಮಿತಿಗೆ ಬಂದಿವೆ.ಸಾಹಿತಿಗಳ ಕೃತಿಗಳು ಲಭ್ಯ: ಹಿರಿಯ ಸಾಹಿತಿಗಳಾದ ಡಾ.ಜಿ.ಎಸ್.ಶಿವರುದ್ರಪ್ಪ, ಡಾ.ಯು.ಆರ್.ಅನಂತಮೂರ್ತಿ ಅವರು ತಮ್ಮ ಎಲ್ಲ ಕೃತಿಗಳನ್ನು ಈ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಅನುಮತಿ ನೀಡಿದ್ದಾರೆ. ಕುವೆಂಪು ಅವರ ಕೃತಿಗಳನ್ನೂ ಪ್ರಕಟಿಸಲು ಅನುಮತಿ ಸಿಕ್ಕಿದೆ. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲದೇ, 75ಕ್ಕೂ ಹೆಚ್ಚು ಕೃಷಿ, ವಿಜ್ಞಾನ ಲೇಖಕರು ತಮ್ಮಲ್ಲಿರುವ ಮಾಹಿತಿ ಭಂಡಾರವನ್ನು ನೀಡಲು ಒಪ್ಪಿದ್ದಾರೆ ಎಂದು ಪ್ರಕಟಿಸಲಾಗಿದೆ.ಸಂಪರ್ಕ ವಿಳಾಸ: ಸಲಹಾ ಸಮನ್ವಯಕಾರ, ‘ಕಣಜ’ ಅಂತರ್ಜಾಲ ಜ್ಞಾನಕೋಶ, (ಕರ್ನಾಟಕ ಜ್ಞಾನ ಆಯೋಗದ ಯೋಜನೆ) ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ, 26/ಸಿ, ಎಲೆಕ್ಟ್ರಾನಿಕ್ಸ್ ಸಿಟಿ, ಹೊಸೂರು ರಸ್ತೆ, ಬೆಂಗಳೂರು-560100. ದೂರವಾಣಿ-4140 7777, 97419 76789.ಇಮೇಲ್projectmanager@kanaja.in, beluru@iiitb.ac.in.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.