ಶುಕ್ರವಾರ, ಮೇ 20, 2022
24 °C

ಯುವಕರು ಕ್ರಿಯಾಶೀಲವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಟೋಕರಿ ಕೋಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ, ತಾಲ್ಲೂಕು ಪಂಚಾಯಿತಿ ಸದಸ್ಯರು, ನಿಜಶರಣ ಅಂಬಿಗರ ಚೌಡಯ್ಯನವರ ವಿವಿಧೋದ್ದೇಶ ಸಂಘದ              ಪದಾಧಿಕಾರಿಗಳ ಸ್ವಾಗತ ಸಮಾರಂಭ ಇತ್ತೀಚೆಗೆ ತಾಲ್ಲೂಕಿನ ಅಲ್ಲಿಪೂರದಲ್ಲಿ ನಡೆಯಿತು. ಅಂಬೇಡ್ಕರ್ ವೃತ್ತದಿಂದ ಭಾಗಮ್ಮ ದೇವಸ್ಥಾನದವರೆಗೆ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಹೊಸದಾಗಿ ರಚಿತವಾದ ಸಂಘದ ಪದಾಧಿಕಾರಿಗಳ ಪರವಾಗಿ ತಾಲ್ಲೂಕು ಪಂಚಾಯಿತಿ ಸದಸ್ಯ ಹಂಪಯ್ಯ ಅವರು, ಟೋಕರಿ ಕೋಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ ಮುದ್ನಾಳ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹಂಪಯ್ಯ, ಇಂತಹ ಸಂಘಗಳು ರಚನೆ ಆಗುವುದರಿಂದ ಗ್ರಾಮದ ಯುವಕರು ಜಾಗೃತರಾಗುವರಲ್ಲದೇ, ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮ ವಹಿಸಲು ಹೆಚ್ಚಿನ ಮಹತ್ವ ಬರಲಿದೆ ಎಂದು ತಿಳಿಸಿದರು.ಟೋಕರೆ ಕೋಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ ಮುದ್ನಾಳ ಮಾತನಾಡಿ, ಯುವ ಜನತೆ ದೇಶದ ನಿಜವಾದ ಆಸ್ತಿ. ಅವರು ಮಾಡುವ ವಿವಿಧೋದ್ದೇಶ ಸಂಘದ ವತಿಯಿಂದ ಸಮಾಜಕ್ಕೆ ಆದರ್ಶಪ್ರಾಯ ಆಗಬೇಕು ಎಂದು ಸಲಹೆ ಮಾಡಿದರು. ನಿಜಶರಣ ಅಂಬಿಗರ ಚೌಡಯ್ಯ ನವರ ಜನ್ಮದಿನೋತ್ಸವವನ್ನು ಸರ್ಕಾರವೇ ಆಚರಿಸಬೇಕು. ಈ ನಿಟ್ಟಿನಲ್ಲಿ ಹೋರಾಟ ಮಾಡಬೇಕಾಗಿದೆ ಎಂದು ತಿಳಿಸಿದರು.ಜಿ. ವೆಂಕಟೇಶ ಮಾತನಾಡಿದರು. ಗ್ರಾಮದ ಪ್ರಮುಖರು, ಸಮಾಜ ಬಾಂಧವರು ಭಾಗವಹಿಸಿದ್ದರು. ಸಾಹೇಬಗೌಡ ಹುಟ್ಟಿನೋರ್, ಸುಭಾಷಚಂದ್ರ ತಳವಾರ, ವಿಜಯ ಕುಮಾರ ತಳವಾರ, ಹಣಮಂತ ನಾಟೇಕಾರ, ಸಾಬಣ್ಣ ನಾಟೇಕಾರ, ನಾಗಪ್ಪ ಬಡಿಗೇರ, ಚಂದ್ರಪ್ಪ ಹುಲಿ, ಹನುಮಂತ ಹುಲಿ, ವೆಂಕಟೇಶ  ಜಿನಕೇರಾ ಮುಂತಾದವರು ಹಾಜ ರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.