ಶನಿವಾರ, ಮೇ 28, 2022
26 °C

ರಂಗತೋರಣ ವಿದ್ಯಾರ್ಥಿ ನಾಟಕೋತ್ಸವ: ನಾಳೆಯಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ರಂಗತೋರಣ ಸಂಸ್ಥೆಯ ವತಿಯಿಂದ ಇದೇ 14ರಿಂದ ಮೂರು ದಿನಗಳ ಕಾಲ ನಗರದ ರಾಘವ ಕಲಾಮಂದಿರದಲ್ಲಿ ನಡೆಯಲಿರುವ ರಾಜ್ಯಮಟ್ಟದ ವಿದ್ಯಾರ್ಥಿ ನಾಟಕೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಉದ್ಘಾಟಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ ತಿಳಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅಂದು ಸಂಜೆ 5ಕ್ಕೆ ನಡೆಯಲಿರುವ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಜಿ. ಸೋಮಶೇಖರ ರೆಡ್ಡಿ ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಡಾ.ಮಂಜಪ್ಪ ಹೊಸಮನೆ, ಚಲನಚಿತ್ರ ನಿರ್ದೇಶಕ ಬಿ. ಸುರೇಶ್, ರಂಗಭೂಮಿ ಕಲಾವಿದೆ ಮಾಲತಿ ಸುಧೀರ ಹಾಗೂ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.ನಾಟಕೋತ್ಸವದಲ್ಲಿ ಪ್ರದರ್ಶನ ಗೊಳ್ಳಲಿರುವ `ಕಲಾತೋರಣ~ವನ್ನು ಚಕ್ರವರ್ತಿ ಸೂಲಿಬೆಲೆ ಉದ್ಘಾಟಿಸು ವರು. `ನುಡಿ ತೋರಣ~ ಗೋಡೆ ಪತ್ರಿಕೆಯನ್ನು ಪತ್ರಕರ್ತ ಸಿ.ಜಿ. ಹಂಪಣ್ಣ ಬಿಡುಗಡೆ ಮಾಡುವರು. ಅ. 15ರಂದು ಸಂಜೆ ನಡೆಯಲಿರುವ  ರಂಗ ಶೋಭಾ ಯಾತ್ರೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅರುಣಾ ತಿಪ್ಪಾರೆಡ್ಡಿ ಚಾಲನೆ ನೀಡು ವರು. ನಂತರ ನಡೆಯುವ ಕಾರ್ಯ ಕ್ರಮದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜು ಉಪನ್ಯಾಸಕ ರೋಹಿಣಾಕ್ಷ ಶಿರ್ಲಾಲು `ಭ್ರಷ್ಟಾಚಾರ ಮತ್ತು ಜೀವನ ಮೌಲ್ಯಗಳ ಸಂಘರ್ಷ~ ವಿಷಯ  ಕುರಿತು ವಿಶೇಷ ಭಾಷಣ ಮಾಡಲಿದ್ದಾರೆ ಎಂದರು.ಅ.16ರಂದು ಬೆಳಿಗ್ಗೆ 11.45ಕ್ಕೆ ನಡೆಯಲಿರುವ `ರಂಗಚಾವಡಿ~ಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಯುವಕ ರೊಂದಿಗೆ ರಂಗಕಲಾವಿದ ಏಣಗಿ ನಟರಾಜ್ ಸಂವಾದ ನಡೆಸಲಿದ್ದಾರೆ.ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಸದೆ ಜೆ. ಶಾಂತಾ, ವಿಧಾನ ಪರಿಷತ್ ಸದಸ್ಯರಾದ ಮೃತ್ಯುಂಜಯ ಜಿನಗಾ, ಮನೋಹರ ಮಸ್ಕಿ, ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಬಸವರಾಜ ಪಾಟೀಲ್ ಸೇಡಂ, ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಕುಲಸಚಿವ ಡಾ.ಯಶವಂತ ಡೋಂಗ್ರೆ ಭಾಗವಹಿಸುವರು ಎಂದು ಅವರು ವಿವರಿಸಿದರು.20 ತಂಡಗಳು: ರಾಜ್ಯ ಮಟ್ಟದ ವಿದ್ಯಾರ್ಥಿ ನಾಟಕೋತ್ಸವದಲ್ಲಿ ರಾಜ್ಯದ 18 ಜಿಲ್ಲೆಗಳಿಂದ 14 ಪ್ರಥಮ ದರ್ಜೆ ಕಾಲೇಜು, 2 ಪದವಿಪೂರ್ವ ಕಾಲೇಜು, 1 ಮಹಿಳಾ ಕಾಲೇಜು, 1 ಲಲಿತ ಕಲಾ ಕಾಲೇಜು, 1 ಡಿಪ್ಲೊಮಾ ಕಾಲೇಜು, ಕರ್ನಾಟಕ ವಿವಿ ಮತ್ತು ಕೃಷಿ ವಿಶ್ವವಿದ್ಯಾಲಯ ತಂಡಗಳು ಸೇರಿದಂತೆ ಒಟ್ಟು 20 ತಂಡಗಳು ಭಾಗವಹಿಸಿ, ನಾಟಕ ಪ್ರದರ್ಶಿಸಲಿವೆ ಎಂದು ಅವರು ಹೇಳಿದರು.ಈ ಬಾರಿಯ ನಾಟಕೋತ್ಸವದಲ್ಲಿ ವಿಶೇಷವಾಗಿ ರಾಷ್ಟ್ರಕವಿ ಕುವೆಂಪು ಅವರ `ಬಿರುಗಾಳಿ~, ವೈದೇಹಿ ಅವರ `ಅತ್ರು ಅಂದ್ರೆ ಸತ್ರಾ?~, ಮೂಡ್ನಾಕೂಡು ಚಿನ್ನಸ್ವಾಮಿ ಅವರ `ಕೆಂಡಾಮಂಡಲ~, ವೇಣುಗೊಪಾಲ ಕಾಸರಗೋಡು ಅವರ  `ಮಹಾಭಾರತ~, ಭಾಸಕವಿಯ `ಧರ್ಮಕ್ರಷಿ~ , ಜಯಪ್ರಕಾಶ ಮಾವಿನಕುಳಿ ಅವರ `ನಿರಾಕರಣ~, `ಕೆಂಪು ಹೂ~, `ಮಯೂರ ವರ್ಮ~, `ನಮಗೆ ಬೆಳಕು ಬೇಕು~, `ಏಕಲವ್ಯ~, `ರೈತನ ಜೀವಾಳ~ ಮತ್ತಿತರ ನಾಟಕಗಳು ಬೆಳಗ್ಗೆ 9ರಿಂದ ರಾತ್ರಿ 10ರ ವರೆಗೆ ನಿರಂತರವಾಗಿ ಪ್ರದರ್ಶನಗೊಳ್ಳಲಿವೆ ಎಂದರು.`ಪ್ರಜಾವಾಣಿ~ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕಾ ಸಮೂಹ ಈ ನಾಟಕೋತ್ಸವದ ಮಾಧ್ಯಮ ಸಹಯೋಗ ಇದೆ ಎಂದು ಅವರು ತಿಳಿಸಿದರು.ಸ್ವಾಗತ ಸಮಿತಿ ಅಧ್ಯಕ್ಷ ಡಾ.ಯಶವಂತ ಭೂಪಾಲ, ಪ್ರಧಾನ ಕಾರ್ಯದರ್ಶಿ ಕೆ. ಕಿಶೋರ್, ಅಡವಿಸ್ವಾಮಿ, ರಾಜಶೇಖರ ಹೂಗಾರ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.