ಬೆಂಗಳೂರು: ಬೆಂಗಳೂರು ವಿಶ್ವ ವಿದ್ಯಾಲಯದ ವ್ಯಾಪ್ತಿಯ ಕಾಲೇಜು ಗಳಲ್ಲಿ ಬಿ.ಇಡಿ ಸೆಮಿಸ್ಟರ್ ಪರೀಕ್ಷೆಗಳು ಸೋಮವಾರದಿಂದ ಆರಂಭವಾಗಲಿದೆ. ಈ ನಡುವೆ, ಎಲ್ಲ ಕಾಲೇಜುಗಳು ಏಳು ಗಂಟೆಯೊಳಗೆ ಆಂತರಿಕ ಮೌಲ್ಯ ಮಾಪನದ (ಇಂಟರ್ನಲ್ ಅಸೆಸ್ಮಂಟ್) ಅಂಕಗಳನ್ನು ಒದಗಿಸುವಂತೆ ವಿಶ್ವವಿದ್ಯಾಲಯದ ಅಧಿಕಾರಿಗಳು ಆದೇಶಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.

ಕಳೆದ ಮೂರು ತಿಂಗಳಲ್ಲಿ ನಾಲ್ಕು ಬಾರಿ ಪರೀಕ್ಷಾ ವೇಳಾಪಟ್ಟಿ ಬದಲಾವಣೆ ಆಗಿತ್ತು. ಕೊನೆಗೆ ವಿಶ್ವ ವಿದ್ಯಾಲಯದ ಅಧಿಕಾರಿಗಳು ಜೂನ್ 10ರಂದು ಬಿ.ಇಡಿ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ನಿರ್ಧರಿ ಸಿದ್ದರು. ಆದರೆ, ಕೊನೆಯ ಕ್ಷಣದ ವರೆಗೂ ಸೂಕ್ತ ಪರೀಕ್ಷಾ ಸಿದ್ಧತೆಗಳನ್ನು ನಡೆಸದೆ ಇರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಶುಲ್ಕ ಸಂಗ್ರಹ ಸೇರಿದಂತೆ ಯಾವುದೇ ಪರೀಕ್ಷಾ ಸಿದ್ಧತೆ ಗಳನ್ನು ವಿವಿ ನಡೆಸಿರಲಿಲ್ಲ ಎಂಬ ಆಕ್ಷೇಪವೂ ಕೇಳಿಬಂದಿದೆ.

ಪರೀಕ್ಷಾ ಪ್ರವೇಶಪತ್ರಗಳನ್ನು ಶನಿವಾರ ನೀಡಲಾಗಿದೆ. ಇದನ್ನು ವಿದ್ಯಾರ್ಥಿಗಳಿಗೆ ಸೋಮವಾರ ನೀಡುವಂತೆ ಸೂಚಿಸಲಾಗಿದೆ. ಸಂಗ್ರಹಿ ಸಿದ ಪರೀಕ್ಷಾ ಶುಲ್ಕಗಳು ಕಾಲೇಜಿನ ಬಳಿಯೇ ಇವೆ. ಕೊನೆಯ ಕ್ಷಣದ ವರೆಗೂ ವಿಶ್ವವಿದ್ಯಾಲಯ ಪರೀಕ್ಷಾ ದಿನವನ್ನು ಘೋಷಣೆ ಮಾಡದ ಕಾರಣ ಇಂತಹ ಸ್ಥಿತಿ ನಿರ್ಮಾಣವಾಗಿದೆ.

ಈ ನಡುವೆ, ಏಕಾಏಕಿಯಾಗಿ ಮುಂದಿನ ಏಳು ಗಂಟೆಗಳೊಳಗೆ ಎಲ್ಲ ಅಭ್ಯರ್ಥಿಗಳ ಆಂತರಿಕ ಮೌಲ್ಯ ಮಾಪನದ ಅಂಕಗಳನ್ನು ಒದಗಿಸಬೇಕು ಎಂದು ಎಲ್ಲ ಸಂಯೋಜಿತ ಕಾಲೇಜು ಗಳಿಗೆ ಭಾನುವಾರ ಮಧ್ಯಾಹ್ನ ಸೂಚನೆ ನೀಡಲಾಯಿತು. ಮಧ್ಯಾಹ್ನ 1 ಗಂಟೆಗೆ ವಿಶ್ವವಿದ್ಯಾಲಯದ ವೆಬ್ಸೈಟ್ನಲ್ಲಿ ಈ ಬಗ್ಗೆ ನೋಟಿಸ್ ಪ್ರಕಟಿಸಿದ ಪರೀಕ್ಷಾಂಗ ಕುಲಸಚಿವ ಪ್ರೊ.ಆರ್.ಕೆ. ಸೋಮ ಶೇಖರ್, ಅಂಕಗಳ ಮಾಹಿತಿಯನ್ನು 8 ಗಂಟೆಯೊಳಗೆ ಒದಗಿಸಬೇಕು ಎಂಬ ಗಡುವು ವಿಧಿಸಿದರು. ಗಡುವಿನೊಳಗೆ ಮಾಹಿತಿ ಒದಗಿಸದ ಪಕ್ಷದಲ್ಲಿ ಕಾಲೇಜುಗಳಿಗೆ ದಂಡ ವಿಧಿಸಲಾಗು ವುದು ಎಂಬ ಎಚ್ಚರಿಕೆಯನ್ನೂ ನೀಡಲಾಯಿತು.

`ಇದೊಂದು ವಿಚಿತ್ರ ಆದೇಶ. ಭಾನುವಾರ ಮಧ್ಯಾಹ್ನ ನೋಟಿಸ್ ನೀಡಿ ರಾತ್ರಿಯೊಳಗೆ ಮಾಹಿತಿ ಒದಗಿಸ ಬೇಕು ಎಂದು ಆದೇಶಿಸಿದ್ದಾರೆ. ಈ ಮಾಹಿತಿಯನ್ನು ರಜಾ ದಿನದಂದು ಹೇಗೆ ಒದಗಿಸಲು ಸಾಧ್ಯ? ಮುಂಚಿತವಾಗಿ ತಿಳಿಸಿದ್ದರೆ ಸಿಬ್ಬಂದಿಯನ್ನು ಭಾನು ವಾರವೂ ಬರ ಹೇಳಿ ಅಗತ್ಯ ಮಾಹಿತಿ ಯನ್ನು ಒದಗಿಸಬಹುದಿತ್ತು' ಎಂದು ಆರ್.ವಿ. ಟೀಚರ್ಸ್ ಕಾಲೇಜಿನ ಎಸ್. ವಿಜಯಲಕ್ಷ್ಮಿ ಅಸಹಾಯಕತೆ ವ್ಯಕ್ತ ಪಡಿಸಿದರು.

`ಕಪ್ಪುಪಟ್ಟಿಗೆ ಸೇರಿದ ಬಿ.ಇಡಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರೀಕ್ಷಾ ಅವಕಾಶ ನೀಡದಿರಲು ವಿಶ್ವ ವಿದ್ಯಾಲಯ ನಿರ್ಧರಿಸಿತ್ತು. ಇದರಿಂದ ಪರೀಕ್ಷಾ ಪ್ರಕ್ರಿಯೆ ವಿಳಂಬವಾಗಿದೆ. ಆದರೆ, ಕೊನೆಯ ಕ್ಷಣದಲ್ಲಿ ಬಹುತೇಕ ಮಂದಿಗೆ ಪರೀಕ್ಷೆ ಬರೆಯಲು ಅನುಮತಿ ಸಿಕ್ಕಿದೆ. ಹಾಗಾದರೆ ವಿಳಂಬ ಮಾಡಿದ್ದು ಏಕೆ' ಎಂದು ಪ್ರಾಧ್ಯಾಪಕರೊಬ್ಬರು ಪ್ರಶ್ನಿಸಿದರು.

ಸಂಜಯ್ ಗಾಂಧಿ ಕಾಲೇಜು ಆಫ್ ಎಜುಕೇಶನ್ನ ಆರ್.ಲತಾ ಕುಮಾರಿ ಪ್ರತಿಕ್ರಿಯಿಸಿ ತಮ್ಮ ಕಾಲೇಜಿನಲ್ಲಿ ಕೊನೆಯ ಕ್ಷಣದಲ್ಲಿ ಮಾಹಿತಿಯನ್ನು ಪರಿಷ್ಕರಿಸಲಾಯಿತು ಎಂದರು. `ದಂಡದ ಮೊತ್ತ ್ಙ 25,000 ಈ ಮೊತ್ತ ಕೇಳಿ ಆತಂಕಕ್ಕೆ ಈಡಾದೆವು. ಇದು ವಿಶ್ವವಿದ್ಯಾಲಯ ಮಾಡುವ ಅನ್ಯಾಯ. ಮುಂಚಿತವಾಗಿ ಮಾಹಿತಿ ನೀಡಬೇಕಿತ್ತು. ಕನಿಷ್ಠ ಪಕ್ಷ ದೂರವಾಣಿ ಮೂಲಕವಾದರೂ ಈ ಬಗ್ಗೆ ತಿಳಿಸ ಬೇಕಿತ್ತು' ಎಂದು ಅವರು ಅಭಿಪ್ರಾಯ ಪಟ್ಟರು. `ಕೆಲವು ಕಾಲೇಜುಗಳು ಕೊನೆಯ ಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿಯನ್ನು ವಿತರಿಸಿವೆ. ಈ ವಿದ್ಯಾರ್ಥಿ ಗಳು ಒಂದೇ ಒಂದು ತರಗತಿಗೆ ಹಾಜರಾಗಿಲ್ಲ' ಎಂದು ಶಿಕ್ಷಣ ತಜ್ಞರು ಆಕ್ಷೇಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.