ಭಾನುವಾರ, ಜೂನ್ 13, 2021
26 °C

ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ: ಭಾರತ ಹಿಂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತ, ಮಹಿಳಾ ರಾಜಕಾರಣಿಗಳ ಪ್ರಾತಿನಿಧ್ಯದ ವಿಷಯದಲ್ಲಿ ಇತರ ದೇಶಗಳಿಗಿಂತ ಸಾಕಷ್ಟು ಹಿಂದಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಯಾದ ಅಂತರ ಸಂಸದೀಯ ಒಕ್ಕೂಟದ ಅಂಕಿ ಅಂಶ ಸ್ಪಷ್ಟಪಡಿಸಿದೆ.ವಿಶ್ವದೆಲ್ಲೆಡೆ ಗುರುವಾರ ಅಂತರ ರಾಷ್ಟ್ರೀಯ ಮಹಿಳಾ ದಿನ ಆಚರಿಸಿದ ಹಿನ್ನೆಲೆಯಲ್ಲಿ ಈ ಅಂಶಗಳತ್ತ ಗಮನಹರಿಸಲಾಗಿದ್ದು, ಭಾರತ ತನ್ನ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾ ದೇಶ ಮತ್ತು ನೇಪಾಳಕ್ಕಿಂತಲೂ ಕಡಿಮೆ ಪ್ರಾತಿನಿಧ್ಯ ಹೊಂದಿದೆ.ವಿಶ್ವ ಪಟ್ಟಿಯಲ್ಲಿ ಭಾರತ 105ನೇ ಸ್ಥಾನ ಪಡೆದಿದ್ದರೆ, ಚೀನಾ 60 ಹಾಗೂ ಬಾಂಗ್ಲಾ ದೇಶ 65ನೇ ಸ್ಥಾನದಲ್ಲಿವೆ. ಶ್ರೀಲಂಕಾ ಮತ್ತು ಮ್ಯಾನ್ಮಾರ್ ಭಾರತಕ್ಕಿಂತ ಕೆಳಗಿನ ಸ್ಥಾನದಲ್ಲಿವೆ.  ಅಂದರೆ ಕ್ರಮವಾಗಿ 129 ಮತ್ತು 134ನೇ ಸ್ಥಾನವನ್ನು ಪಡೆದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.