ಗುರುವಾರ , ಏಪ್ರಿಲ್ 15, 2021
23 °C

ರಾಜ್ಯಮಟ್ಟದ ತಾಂತ್ರಿಕ ಉತ್ಸವ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ನಗರದ ಬಸವೇಶ್ವರ ಎಂಜನಿಯರಿಂಗ್ ಕಾಲೇಜಿನ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ರಾಜ್ಯಮಟ್ಟದ ತಾಂತ್ರಿಕ ಉತ್ಸವಕ್ಕೆ ವಿಜಾಪುರ ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಶುಕ್ರವಾರ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಂಜಿನಿಯರ್‌ಗಳ ಮೇಲೆ ಸಾಮಾಜಿಕ ಹೊಣೆಗಾರಿಕೆ ಇದ್ದು, ಅದನ್ನು ಅರಿತು ಸಮಾಜಕ್ಕೆ ಉಪಯೋಗವಾಗುವಂತ ಸಂಶೋಧನೆಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.ಆತ್ಮ ವಿಶ್ವಾಸದಿಂದ ವೈಜ್ಞಾನಿಕ ಸವಾಲುಗಳನ್ನು ಎದುರಿಸುವ ಛಾತಿ ಬೆಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಳಸದ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ  ಪ್ರಾಂಶುಪಾಲ ಡಾ.ಆರ್.ಎನ್.ಹೆರಕಲ್, ಎಂಜಿನಿಯರಿಂಗ್ ಕ್ಷೇತ್ರದ ಅವಿಷ್ಕಾರಗಳು ಸಮಾಜದ ಅಭಿವೃದ್ಧಿಗೆ ಬಳಕೆಯಾಗಬೇಕು ಮತ್ತು ಪೂರಕವಾಗಿರಬೇಕು ಎಂದು ಅಭಿಪ್ರಾಯಪಟ್ಟರು.ಮುಂಬೈನ ಆರ್ಕ್ ಟೆಕ್ನೋ ಸಲ್ಯೂಶನ್ ಕಂಪೆನಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಂತ್ರಿಕ ಕಾರ್ಯಾಗಾರದಲ್ಲಿ   ಬೆಂಗಳೂರಿನ ಡಾ.ಸುಧೀರ ಕೌಶಿಕ ಉಪನ್ಯಾಸ ನೀಡಿದರು.

ಡಾ. ಡಿ.ಎಸ್. ಜಂಗಮಶೆಟ್ಟಿ ತಾಂತ್ರಿಕ ಉತ್ಸವದ ಪರಿಚಯ ಮಾಡಿಕೊಟ್ಟರು.

ರಾಜ್ಯದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳಿಂದ ಆಗಮಿಸಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿವಿಧ ವೈಜ್ಞಾನಿಕ ಆಯಾಮಗಳ ಬಗ್ಗೆ ಮತ್ತು ಅವುಗಳನ್ನು ರೋಬೋಟೊಗಳಲ್ಲಿ ಬಳಸುವ ವಿಧಾನಗಳ ಕುರಿತು ಉಪನ್ಯಾಸ ಹಾಗೂ ತರಬೇತಿ ನೀಡಲಾಯಿತು.  ಅನಿರುದ್ಧ ಮತ್ತು ಪ್ರಿಯಾಂಕಾ ನಿರೂಪಿಸಿದರು. ಎನ್.ಜೆ. ಜಗದೀಶ ಸ್ವಾಗತಿಸಿದರು. ಶೃತಿ ಶಾಂತಗಿರಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.