ನವದೆಹಲಿ (ಪಿಟಿಐ): ಪೊಲೀಸರ ಎದುರು ತನಿಖೆಗೆ ಹಾಜರಾಗಿ ಬಂದ ನಂತರ ರಾಜ್ ಕುಂದ್ರಾ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.

`ಪೊಲೀಸರು ನನ್ನಿಂದ ಕೆಲ ವಿಷಯಗಳನ್ನು ತಿಳಿದುಕೊಳ್ಳುವ ಕಾರಣಕ್ಕಾಗಿ ಬರ ಹೇಳಿದ್ದರು. ವಿಚಾರಣೆಗೆ ಹಾಜರಾಗಿ ನನಗೆ ಗೊತ್ತಿದ್ದ ಮಾಹಿತಿ ನೀಡಿದೆ. ಇದನ್ನೇ ಮಾಧ್ಯಮಗಳು ಅತಿರಂಜಕವಾಗಿ ವರದಿ ಮಾಡಿ ಇಲ್ಲಸಲ್ಲದ ಸುದ್ದಿಗಳನ್ನು ನೀಡುತ್ತಿವೆ' ಎಂದು ಕುಂದ್ರಾ ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪತ್ನಿ ಶಿಲ್ಪಾ ಶೆಟ್ಟಿ ಕೂಡಾ ದನಿಗೂಡಿಸಿದ್ದಾರೆ.

`ಪೊಲೀಸರು ನನಗೇನು ಬಂಧನದ ವಾರೆಂಟ್ ಕಳುಹಿಸಿದ್ದರೇ' ಎಂದು ಖಾರವಾಗಿ ಪ್ರಶ್ನಿಸಿರುವ ರಾಯಲ್ಸ್ ಮಾಲೀಕ `ಮಾಧ್ಯಮಗಳು ಇಲ್ಲಸಲ್ಲದ ಸುದ್ದಿಗಳನ್ನು ನೀಡುವುದನ್ನು ಮೊದಲು ನಿಲ್ಲಿಸಬೇಕು' ಎಂದು ಬರೆದಿದ್ದಾರೆ.

* ಬೆಟ್ಟಿಂಗ್ ಆಡಿ ನಾನು ಸಾಕಷ್ಟು ಹಣ ಕಳೆದುಕೊಂಡಿದ್ದೇನೆ. ಐಪಿಎಲ್ನಲ್ಲಿ ಬೆಟ್ಟಿಂಗ್ ನಡೆಯುತ್ತಿದೆ ಎಂದು ರಾಜ್ ಕುಂದ್ರಾ ವಿಚಾರಣೆ ವೇಳೆ ಹೇಳಿದ್ದಾರೆ  - ನೀರಜ್ ಕುಮಾರ್, ದೆಹಲಿ ಪೊಲೀಸ್ ಕಮೀಷನರ್

* ಕುಂದ್ರಾ ಬೆಟ್ಟಿಂಗ್ ನಡೆಸುತ್ತಿದ್ದರು ಎನ್ನುವ ವಿಷಯವೇ ನಾಚಿಕೆಗೇಡು. ಬೆಟ್ಟಿಂಗ್ ಕಾನೂನು ಬದ್ಧ ಮಾಡಲು ಇದು ಸೂಕ್ತ ಸಮಯ -ಜಯವಂತ ಲೇಲೆ, ಬಿಸಿಸಿಐ ಮಾಜಿ ಕಾರ್ಯದರ್ಶಿ

* ಸ್ಪಾಟ್ ಫಿಕ್ಸಿಂಗ್ ಪ್ರಕರಣವನ್ನು ಇಬ್ಬರು ನಿವೃತ್ತ ನ್ಯಾಯಮೂರ್ತಿಗಳನ್ನೊಳಗೊಂಡ ಸಮಿತಿಯೇ ತನಿಖೆ ನಡೆಸಲಿದೆ. ಸಮಿತಿಯಲ್ಲಿ ಬಿಸಿಸಿಐ ಸದಸ್ಯರು ಇರುವುದಿಲ್ಲ - ಜಗಮೋಹನ್ ದಾಲ್ಮಿಯ, ಬಿಸಿಸಿಐ ಹಂಗಾಮಿ ಅಧ್ಯಕ್ಷ

*ಉಮೇಶ್ ಗೊಯಂಕಾ ಅವರು ತಂಡ ಹಾಗೂ ಪಿಚ್ಗೆ ಸಂಬಂಧಿಸಿದಂತೆ ನನ್ನ ಬಳಿ ಮಾಹಿತಿ ಕೇಳುತ್ತಿದ್ದರು  -ಸಿದ್ಧಾರ್ಥ್ ತ್ರಿವೇದಿ, ರಾಜಸ್ತಾನ ರಾಯಲ್ಸ್ ವೇಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.