ರಾಜ್ ಹುಟ್ಟುಹಬ್ಬಕ್ಕೆ ಹುಡುಗರು

7

ರಾಜ್ ಹುಟ್ಟುಹಬ್ಬಕ್ಕೆ ಹುಡುಗರು

Published:
Updated:
ರಾಜ್ ಹುಟ್ಟುಹಬ್ಬಕ್ಕೆ ಹುಡುಗರು

ಪುನೀತ್ ರಾಜಕುಮಾರ್ ಅಭಿನಯದ ‘ಹುಡುಗರು’ ಚಿತ್ರದ ರೀರಿಕಾರ್ಡಿಂಗ್ ಸಂಗೀತ ನಿರ್ದೇಶಕ ಹರಿಕೃಷ್ಣ ನೇತೃತ್ವದಲ್ಲಿ ನಡೆಯುತ್ತಿದ್ದು, ರಾಜಕುಮಾರ್ ಹುಟ್ಟುಹಬ್ಬದ ಕೊಡುಗೆಯಾಗಿ ಏಪ್ರಿಲ್ ಮೂರನೇ ವಾರದಲ್ಲಿ ತೆರೆಕಾಣಲಿದೆ. ಯುಗಾದಿ ಸಂದರ್ಭದಲ್ಲಿ ಚಿತ್ರದ ಬಿಡುಗಡೆ ಅಭಿಮಾನಿಗಳಿಗೆ ಹೊಸ ವರ್ಷದ ಕೊಡುಗೆಯೂ ಹೌದು ಎಂದು ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ತಿಳಿಸಿದ್ದಾರೆ.ಮಾದೇಶ ನಿರ್ದೇಶನದ ಈ ಚಿತ್ರಕ್ಕೆ ಗುರುಪ್ರಸಾದ್ ಸಂಭಾಷಣೆ ಬರೆದಿದ್ದಾರೆ. ಯೋಗರಾಜ್ ಭಟ್ ಸಾಹಿತ್ಯ, ಸತ್ಯ ಹೆಗಡೆ ಛಾಯಾಗ್ರಹಣ ಚಿತ್ರಕ್ಕಿದೆ.ತಾರಾಗಣದಲ್ಲಿ ಪುನೀತ್ ಅವರೊಂದಿಗೆ ರಾಧಿಕಾ ಪಂಡಿತ್, ಯೋಗೀಶ್, ಶ್ರೀನಗರ ಕಿಟ್ಟಿ, ಅಭಿನಯ, ಸಾಧು ಕೋಕಿಲಾ, ವನಿತಾವಾಸು, ತಬಲಾ ನಾಣಿ ಮುಂತಾದವರಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry