ಶುಕ್ರವಾರ, ಜೂನ್ 25, 2021
29 °C
ಮಾರ್ಚ್‌ 26ಕ್ಕೆ ಲೂಸಾನ್‌ನಲ್ಲಿ...

ರಾಮಚಂದ್ರನ್‌–ಬಾಕ್‌ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ/ ಐಎಎನ್‌ಎಸ್‌): ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಅಧ್ಯಕ್ಷ ಥಾಮಸ್‌ ಬಾಕ್‌ ಮಹತ್ವದ ಬೆಳವಣಿಗೆಯೊಂದರಲ್ಲಿ  ಐಒಎಯ ಮುಂದಿನ ನಡೆಯ ಕುರಿತು ಚರ್ಚಿಸಲು ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ಅಧ್ಯಕ್ಷ ಎನ್‌.ರಾಮಚಂದ್ರನ್‌ಗೆ  ಆಹ್ವಾನ ನೀಡಿದ್ದಾರೆ.ಮಾರ್ಚ್‌ 26ರಂದು ಲುಸಾನ್‌ನಲ್ಲಿ ಇಬ್ಬರ ಭೇಟಿ ನಿಗದಿಯಾಗಿದೆ. ಹೀಗಾಗಿ  ಮಾರ್ಚ್‌ 27ರಂದು ನಡೆಯಬೇಕಿದ್ದ ಐಒಎ ಕಾರ್ಯ ಕಾರಿ ಮಂಡಳಿಯ ಮೊದಲ ಸಭೆಯನ್ನು ಏಪ್ರಿಲ್‌ 3ಕ್ಕೆ ಮುಂದೂಡಲಾಗಿದೆ.ಐಒಸಿ ನೀಡಿದ್ದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ನಿಷೇಧ ಶಿಕ್ಷೆಯಿಂದ ಪಾರಾಗಿದ್ದ ಐಒಎ 14 ತಿಂಗಳ ಬಳಿಕ ಇತ್ತೀಚೆಗೆ ಮತ್ತೆ ಒಲಿಂಪಿಕ್‌ ಕುಟುಂಬಕ್ಕೆ ಮರಳಿತ್ತು. ಈ ಎಲ್ಲಾ ಬೆಳವಣಿಗೆಗಳ ನಂತರ  ಐಒಸಿ ಮುಖ್ಯಸ್ಥ ಬಾಕ್‌ ಅವರು  ರಾಮಚಂದ್ರನ್‌ ಭೇಟಿಗೆ ಆಹ್ವಾನ ನೀಡಿರುವುದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.‘ಮಾರ್ಚ್‌ 26ರಂದು ಲುಸಾನ್‌ನಲ್ಲಿ ನಿಗಧಿಯಾಗಿರುವ ಸಭೆಯಲ್ಲಿ ಪಾಲ್ಗೊಳ್ಳುವಂತೆ ಐಒಸಿ ಮುಖ್ಯಸ್ಥ ಬಾಕ್‌ ಅವರು ನನಗೆ ಆಹ್ವಾನ ನೀಡಿದ್ದಾರೆ. ಸಭೆಯಲ್ಲಿ ಐಒಎಯ ಮುಂದಿನ ಬೆಳವಣಿಗೆಗಳ ಕುರಿತು      ಚರ್ಚೆ ನಡೆಯಲಿದೆ’ ಎಂದು ರಾಮಚಂದ್ರನ್‌  ಮಂಗಳವಾರ ತಿಳಿಸಿದ್ದಾರೆ.‘ಏಪ್ರಿಲ್‌ 3ರಂದು ನಡೆಯುವ ಐಒಎ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಐಒಸಿ ಮುಖ್ಯಸ್ಥರ  ಭೇಟಿಯ ಸಾರಾಂಶವನ್ನು ನಾನು ಸಭೆಗೆ ವಿವರಿಸಲಿದ್ದೇನೆ’   ಎಂದು ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.