ಭಾನುವಾರ, ಮೇ 22, 2022
22 °C

ರಾಷ್ಟ್ರೀಯ ಜೂನಿಯರ್ ವಾಲಿಬಾಲ್‌ಗೆ ರಾಜ್ಯ ತಂಡಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿಖಿಲ್ ಗೌಡ ಹಾಗೂ ಕೆ.ವಿ.ಮೇಘಾ ಅವರು ವಿಜಾಪುರದಲ್ಲಿ ಫೆಬ್ರುವರಿ 10ರಿಂದ 17ರವರೆಗೆ ನಡೆಯಲಿರುವ 37ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಕರ್ನಾಟಕದ ಬಾಲಕರ ಹಾಗೂ ಬಾಲಕಿಯರ ತಂಡದ ನೇತೃತ್ವ ವಹಿಸಲಿದ್ದಾರೆ.ಬಾಲಕ ಹಾಗೂ ಬಾಲಕಿಯರ ತಂಡಗಳನ್ನು ಕರ್ನಾಟಕ ವಾಲಿಬಾಲ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಕೆ.ನಂದಕುಮಾರ್ ಅವರು ಸೋಮವಾರ ಇಲ್ಲಿ ಪ್ರಕಟಿಸಿದರು.

ತಂಡಗಳು ಇಂತಿವೆ: ಬಾಲಕರು: ನಿಖಿಲ್ ಗೌಡ (ನಾಯಕ), ಬಿ.ಭರತ್, ಚಂದನ್ ಕುಮಾರ್, ಸುದೀಪ್ ಶೆಟ್ಟಿ (ಉಪನಾಯಕ), ಎಲ್.ವಿನಾಯಕ್, ಕೆ.ಸುದೀಪ್, ಕೆ.ಎನ್.ಗೋವಿಂದ ಸ್ವಾಮಿ, ಚೇತನ್ ಡಿ. ತಿಗಡಿ, ಮೊಹಮ್ಮದ್ ಅಕೀಬ್, ಜೋಹಿತ್ ಜೋಯಿಸ್, ಬಿ.ಮನೋಜ್, ಎನ್.ವಿನೋದ್; ಕಾಯ್ದಿರಿಸಿದ ಆಟಗಾರರು:ಕ್ಲೆಮೆಂಟನ್, ಸಬೀರ್, ಕೆ.ಆರ್.ಭರತ್, ಕಾರ್ತಿಕ್, ಮಾರುತಿ ರೆಡ್ಡಿ; ಕೋಚ್: ಬಸವರಾಜ್ ಹೊಸಮಠ, ಸಹಾಯಕ ಕೋಚ್: ಪರಶುರಾಮ್ ಬಿ. ದಾಗೀನ್‌ದಾರ್; ಮ್ಯಾನೇಜರ್: ಸಂತೋಷ್ ರಜಪೂತ್.ಬಾಲಕಿಯರು: ಕೆ.ವಿ.ಮೇಘಾ (ನಾಯಕಿ), ಎಸ್.ಪಿ.ಗಣವಿ, ಟಿ.ಬಿ. ಅಭಿಲಾಶಾ, ಎಸ್.ಕಾವ್ಯಾ, ಎಂ.ಮೇಘನಾ, ಅನಿತಾ ವಿ.ಪಾಟೀಲ್ (ಉಪನಾಯಕಿ), ಎಂ.ಎಸ್.ವರ್ಷಿತಾ, ಎಚ್.ಆರ್.ಅನುಷಾ, ಆರ್.ನಿವೇದಿತಾ, ಎಂ.ಲತಾ, ಬಿ.ಎ.ಸಿಂಧುಶ್ರೀ, ವೈ.ಜಿ.ಯಶಸ್ವಿನಿ; ಕೋಚ್: ಎಸ್.ಎಂ.ರಮೇಶ್, ಸಹಾಯಕ ಕೋಚ್: ಎಸ್.ಕೆ.ಪಾಟೀಲ್, ಮ್ಯಾನೇಜರ್: ಸುನಿಲ್ ಕೆ.ನಾಡಕಟ್ಟ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.