ಬುಧವಾರ, ಏಪ್ರಿಲ್ 14, 2021
24 °C

ರಾಸುಗಳ ಸ್ಪರ್ಧೆ: ಬಹುಮಾನ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬನ್ನೂರು: ಬಿ. ಸೀಹಳ್ಳಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ನಡೆಯು ತ್ತಿದ್ದ ಆದಿಶಕ್ತಿ ಹುಚ್ಚಮ್ಮ ದೇವಿಯ ಜಾತ್ರೆಯಲ್ಲಿ  ವಿವಿಧೆಡೆಗಳಿಂದ ಬಂದಿದ್ದ ರಾಸುಗಳಿಗೆ ಗುರುವಾರ ಬಹುಮಾನ ವಿತರಣೆ ಮಾಡಲಾಯಿತು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುನೀತಾ ವೀರಪ್ಪ ಗೌಡ ಬಹುಮಾನ ವಿತರಿಸಿದರು.

 

ಹಾಲು ಹಲ್ಲಿನ ಎತ್ತುಗಳ ಸ್ಪರ್ಧೆಯಲ್ಲಿ ನಾಗರಾಜು, ಶಿವನಂಜೇಗೌಡ, ಜೆ. ರಮೇಶ, ಗಿರಿಯಪ್ಪ, ರಾಜುಗೌಡ ಬಹುಮಾನ ಪಡೆದರು. ಎರಡು ಹಲ್ಲುಗಳ ರಾಸುಗಳ ಸ್ಪರ್ಧೆಯಲ್ಲಿ ಲಿಂಗೇಗೌಡ,  ಬಿ. ಎಂ. ಸಿದ್ದೇಗೌಡ, ಪಟೇಲ್ ತಿಮ್ಮೇಗೌಡ, ಚಿಕ್ಕಸಣ್ಣಪ್ಪ, ಹುಚ್ಚೇಗೌಡ ಬಹುಮಾನ ಪಡೆದರು. 2 ಗ್ರಾಂ ಚಿನ್ನ ಮಂಚೇಗೌಡರ  ಪಾಲಾದರೆ, 1 ಗ್ರಾಂ ಚಿನ್ನ ಪಟೇಲ್ ನಿಂಗೇಗೌಡರ ಪಾಲಾಯಿತು.ನಾಲ್ಕು ಹಲ್ಲಿನ ರಾಸುಗಳಲ್ಲಿ ಚಿಕ್ಕಮಲ್ಲೇಗೌಡ, ಸಂಜಯ್, ರಮೇಶ್, ನಂಜೇಗೌಡರಿಗೆ ಸಮಾಧಾನಕರ ಬಹುಮಾನ ನೀಡಿದರೆ ಮೊದಲನೇ ಬಹುಮಾನ ಶಂಬಯ್ಯ ರಿಗೆ, ದ್ವಿತೀಯ ಬಹುಮಾನ ಹುಚ್ಚೇಗೌಡರಿಗೆ ಹಾಗೂ ತೃತೀಯ ಬಹುಮಾನ ಚಿಕ್ಕಹಿರೇಗೌಡರಿಗೆ ನೀಡಲಾಯಿತು. ಅಂತೆಯೆ 6 ಹಲ್ಲುಗಳ ರಾಸಿನಲ್ಲಿ ನಾಗಣ್ಣ, ರಾಜಣ್ಣ, ಸಿದ್ದೇಗೌಡ, ಚಿಕ್ಕಚೌಡೇ ಗೌಡ, ಮಲ್ಲೇಶ್‌ರಿಗೆ ಸಮಾಧಾನಕರ ಬಹುಮಾನ ಲಭ್ಯವಾದರೆ ಮೊದಲನೇ ಬಹುಮಾನ ಮಳವಳ್ಳಿಯ ರಾಜುರಿಗೆ, ದ್ವಿತೀಯ ಬಹುಮಾನ ನೆರಳೆಕೆರೆ ಜಿ. ರಮೇಶ್‌ರಿಗೆ ತೃತೀಯ  ಬಹುಮಾನ ಬೀಡನಹಳ್ಳಿ ಹೊನ್ನೇಗೌಡರಿಗೆ ನೀಡಲಾಯಿತು. ಬಾಯಿಗೂಡಿದ ಎತ್ತುಗಳ ವಿಭಾಗದಲ್ಲಿ ಸುಬ್ಬೇಗೌಡ, ದಾಸೇಗೌಡ,  ಕಾಂತರಾಜು, ಮಹೇಶ್, ಸ್ವಾಮಿಗೌಡರಿಗೆ ಸಮಾ ಧಾನಕರ ಬಹುಮಾನ ಲಭ್ಯವಾದರೆ ಅತ್ತಹಳ್ಳಿಯ ರವಿಗೆ ಪ್ರಥಮ ಬಹುಮಾನ,  ಪುಟ್ಟಸ್ವಾಮಿಗೆ ದ್ವಿತೀಯ ಬಹುಮಾನ ಹಾಗೂ ಕೆ. ಪಿ. ರವಿಕುಮಾರ್‌ಗೆ ತೃತೀಯ ಬಹುಮಾನ ನೀಡಲಾಯಿತು.ಜಿಲ್ಲಾ ಪಂಚಾಯ್ತಿ ಸದಸ್ಯ ಡಾ. ವೀರಪ್ಪಗೌಡ, ಸಮಾಜ ಸೇವಕ ಮಹೇಂದ್ರ ಸಿಂಗ್ ಕಾಳಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯ  ಶಂಕರೇಗೌಡ, ಸೀಹಳ್ಳಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಚೆಲುವಶೆಟ್ಟಿ, ಯಜಮಾನ್ ಕಾಳೇಗೌಡ, ಎಪಿಎಂಸಿ ಅಧಿಕಾರಿ ಮಂಜುನಾಥ್,  ಲೋಕೇಶ್, ಬಸವನ ಹಳ್ಳಿ ಸಿದ್ದೇಗೌಡ, ರಾಜು, ಮಹಾ ಲಿಂಗೇಗೌಡ, ಪಟೇಲ್ ತಿಮ್ಮೇಗೌಡ, ನಟರಾಜು, ಕಂಟ್ರಾಕ್ಟರ್ ಪೊನ್ನ ಸ್ವಾಮಿ, ಸಿದ್ದೇಗೌಡ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.