ಬೆಂಗಳೂರು: ಇಲ್ಲಿನ ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ವಕೀಲರು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳು, ಪೊಲೀಸರು ಮತ್ತು ಕಾಲೇಜು ವಿದ್ಯಾರ್ಥಿಗಳ ಮೇಲೆ ಕಲ್ಲು ತೂರಾಟ ನಡೆಸಿ ಗೂಂಡಾಗಿರಿ ಪ್ರದರ್ಶಿಸಿದ್ದು ಘಟನೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಕೇಂದ್ರ ವಿಭಾಗದ ಡಿಸಿಪಿ ಡಾ.ಜಿ.ರಮೇಶ್ ಸೇರಿದಂತೆ 50ಕ್ಕೂ ಹೆಚ್ಚು ಪೊಲೀಸರು, ಸುಮಾರು 15 ಮಂದಿ ಮಾಧ್ಯಮ ಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಗಾಯವಾಗಿದೆ. ಪೊಲೀಸ್ ಇಲಾಖೆ, ಮಾಧ್ಯಮಗಳು, ವಕೀಲರ ಹಾಗೂ ಸಾರ್ವಜನಿಕರ 60ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ.

ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಅವರನ್ನು ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿನ ಸಿಬಿಐ ನ್ಯಾಯಾಲಯದಲ್ಲಿ ಶುಕ್ರವಾರ ವಿಚಾರಣೆಗೆ ಹಾಜರುಪಡಿಸುವ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ.

ಜನಾರ್ದನರೆಡ್ಡಿ ಅವರನ್ನು ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಬೆಳಿಗ್ಗೆ 10.45ರ ಸುಮಾರಿಗೆ ನ್ಯಾಯಾಲಯದ ಆವರಣಕ್ಕೆ ಕರೆತರಲಾಯಿತು. ಈ ವೇಳೆ ಸ್ಥಳದಲ್ಲಿದ್ದ ಮಾಧ್ಯಮ ಪ್ರತಿನಿಧಿಗಳು ನ್ಯಾಯಾಲಯದ ಪ್ರವೇಶದ್ವಾರದ ಬಳಿ ತೆರಳಿ, ರೆಡ್ಡಿ ಅವರು ವಾಹನದಿಂದ ಕೆಳಗಿಳಿದು ನ್ಯಾಯಾಲಯದೊಳಗೆ ಹೋಗುವ ದೃಶ್ಯವನ್ನು ಚಿತ್ರೀಕರಿಸಲು ಮುಂದಾದರು.

ಇದಕ್ಕೆ ಅಡ್ಡಿಪಡಿಸಿದ ವಕೀಲರು ಮಾಧ್ಯಮ ಪ್ರತಿನಿಧಿ ಗಳು ನ್ಯಾಯಾಲಯದ ಆವರಣ ಪ್ರವೇಶಿಸದಂತೆ ತಡೆದರು. ಅಲ್ಲದೇ ಕೆಲ ಮಾಧ್ಯಮಗಳ ಕ್ಯಾಮೆರಾಮೆನ್ಗಳು ಮತ್ತು ವರದಿಗಾರರನ್ನು ನ್ಯಾಯಾಲಯದ ಆವರಣಕ್ಕೆ ಎಳೆದೊಯ್ದು ಬಟ್ಟೆ ಕಳಚಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದರು. ಕ್ಯಾಮೆರಾಗಳನ್ನೂ ಒಡೆದು ಹಾಕಿದರು.

ವಕೀಲರ ವರ್ತನೆಯಿಂದ ಆಕ್ರೋಶಗೊಂಡ ಮಾಧ್ಯಮ ಪ್ರತಿನಿಧಿಗಳು ನ್ಯಾಯಾಲಯದ ಮುಂಭಾಗದ ರಸ್ತೆಯಲ್ಲಿ ಪ್ರತಿಭಟನೆ ನಡೆಸಲು ಮುಂದಾದರು. ಇದರಿಂದ ಕೆರಳಿದ ವಕೀಲರು ಪ್ರತಿಭಟನಾನಿರತರ ಮೇಲೆ ಕಲ್ಲು ತೂರಾಟ ನಡೆಸಿದರು. ಅಲ್ಲದೇ ನ್ಯಾಯಾಲಯದ ಕಟ್ಟಡದ ಮೇಲ್ಭಾಗದಿಂದ ಬಾಟಲಿ, ಹೆಲ್ಮೆಟ್, ಕುರ್ಚಿ, ಮೇಜು, ಚಪ್ಪಲಿ ಹೀಗೆ ಕೈಗೆ ಸಿಕ್ಕ ವಸ್ತುಗಳನ್ನು ಎಸೆದು ದಾಂದಲೆ ನಡೆಸಿದರು.

ಇಷ್ಟೆಲ್ಲ ಅಹಿತಕರ ಘಟನೆಗಳು ನಡೆಯುತ್ತಿದ್ದರೂ ಘಟನಾ ಸ್ಥಳದಲ್ಲಿದ್ದ ಪೊಲೀಸರು ವಕೀಲರನ್ನು ನಿಯಂತ್ರಿಸಲು ಪ್ರಯತ್ನಿಸಲಿಲ್ಲ. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ರೆಡ್ಡಿ ಅವರ ವಿಚಾರಣೆ ಪೂರ್ಣಗೊಂಡು ಸಿಬಿಐ ಅಧಿಕಾರಿಗಳು ಅವರನ್ನು ನ್ಯಾಯಾಲಯ ಕಟ್ಟಡದಿಂದ ಹೊರಗೆ ಕರೆದೊಯ್ಯುತ್ತಿದ್ದಂತೆ ವಕೀಲರ ಅಟಾಟೋಪ ಮತ್ತಷ್ಟು ಮೇರೆ ಮೀರಿತು. ನ್ಯಾಯಾಲಯದ ಬಳಿ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆಸಿದರು.

ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಮನಗಂಡ ಪೊಲೀಸರು ಲಾಠಿ ಪ್ರಹಾರ ನಡೆಸಿ ವಕೀಲರನ್ನು ಚದುರಿಸಲು ಯತ್ನಿಸಿದರು. ಆದರೂ ಪುಂಡಾಟ ಮುಂದುವರೆಸಿದ ವಕೀಲರು ಸಮೀಪದ ಸರ್ಕಾರಿ ಕಲಾ ಕಾಲೇಜು ಮೈದಾನಕ್ಕೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದರು. ಇದರಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿತು.
ಪೊಲೀಸರು ಈ ಹಂತದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಮತ್ತು ವಕೀಲರ ಮೇಲೆ ಹಲವು ಬಾರಿ ಅಶ್ರುವಾಯು ಷೆಲ್ ಸಿಡಿಸಿ ಪರಿಸ್ಥಿತಿಯನ್ನು ತಹಬದಿಗೆ ತರಲು ಯತ್ನಿಸಿದರು. ಪೊಲೀಸರ ಈ ಕ್ರಮದಿಂದ ಆಕ್ರೋಶಗೊಂಡ ವಕೀಲರು ಪೊಲೀಸ್ ಇಲಾಖೆಯ ಹಾಗೂ ಮಾಧ್ಯಮಗಳ ವಾಹನಗಳ ಮೇಲೆ ಕಲ್ಲು ತೂರಿ ಗಾಜುಗಳನ್ನು ಒಡೆದು ಹಾಕಿದರು.

ಜತೆಗೆ ನ್ಯಾಯಾಲಯದ ಆವರಣದಲ್ಲಿ ನಿಂತಿದ್ದ ಸಾರ್ವಜನಿಕರ ವಾಹನಗಳಿಗೂ ಬೆಂಕಿ ಹಚ್ಚಿದರು. ಪೊಲೀಸ್ ವಾಹನಗಳನ್ನೂ ಸುಟ್ಟರು.

ಒತ್ತೆಯಾಳು: ಪೊಲೀಸರಿಗೆ ಬೆದರಿದ ಕೆಲ ವಕೀಲರು ನ್ಯಾಯಾಲಯದ ಕಟ್ಟಡದ ಒಳಗಿದ್ದ 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಸಂಜೆವರೆಗೂ ಒತ್ತೆಯಾಳಾಗಿ ಇಟ್ಟುಕೊಂಡರು.

ಯಾವುದೇ ತೊಂದರೆ ಮಾಡದೆ ಕಟ್ಟಡದಿಂದ ಹೊರ ಹೋಗಲು ಅವಕಾಶ ನೀಡಿದರೆ ಮಾತ್ರ ಪೊಲೀಸರನ್ನು ಬಿಡುಗಡೆಗೊಳಿಸುವುದಾಗಿ ಬೇಡಿಕೆ ಇಟ್ಟ ವಕೀಲರು ಸಂಜೆ ಆರು ಗಂಟೆವರೆಗೂ ಹೊರ ಬರಲೇ ಇಲ್ಲ.
ಸಂಜೆಯಾಗುತ್ತಲೇ ವಕೀಲರು ಒಬ್ಬೊಬ್ಬರಾಗಿ ನ್ಯಾಯಾಲಯ ಕಟ್ಟಡದಿಂದ ಹೊರ ಬಂದು ಮನೆಗಳಿಗೆ ಹೋಗಲು ಮುಂದಾದರು.

ಈ ವೇಳೆ ಮೈಸೂರು ಬ್ಯಾಂಕ್ ವೃತ್ತ ಮತ್ತು ಕೆ.ಆರ್.ವೃತ್ತದ ಬಳಿ ನಾಕಾಬಂದಿ ಹಾಕಿಕೊಂಡು ಕಾಯುತ್ತಿದ್ದ ಪೊಲೀಸರು ವಕೀಲರಿಗೆ ಲಾಠಿ ರುಚಿ ತೋರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.