ಬೆಂಗಳೂರು: ಸಾಮಾನ್ಯವಾಗಿ ಐದು ಕಿ.ಮೀ. ಉದ್ದದ ರಸ್ತೆಯನ್ನು ಕ್ರಮಿಸಲು ಎಷ್ಟು ಸಮಯ ಬೇಕು? ಗಂಟೆಗೆ 40 ಕಿ.ಮೀ. ವೇಗ ಎಂದುಕೊಂಡರೂ ಏಳೂವರೆ ನಿಮಿಷ ಸಾಕು. ಆದರೆ, ಮೈಸೂರು ರಸ್ತೆಯಿಂದ ಹೊರವರ್ತುಲ ಮಾರ್ಗದ ಮೂಲಕ ಕನಕಪುರ ರಸ್ತೆವರೆಗೆ ಇಷ್ಟೇ ದೂರ ಕ್ರಮಿಸಲು (5 ಕಿ.ಮೀ) ಕನಿಷ್ಠ ಅರ್ಧ ಗಂಟೆ ಬೇಕೇಬೇಕು.

ಸಂಚಾರ ದಟ್ಟಣೆ ಸಮಯದಲ್ಲಿ ಇದೇ ದೂರವನ್ನು ಕ್ರಮಿಸಲು ಬರೊಬ್ಬರಿ ಒಂದು ಗಂಟೆ ಸಮಯ ಹಿಡಿಯುತ್ತದೆ. ಈ ಮಾರ್ಗದಲ್ಲಿ ಒಟ್ಟು ಏಳು ಟ್ರಾಫಿಕ್ ಸಿಗ್ನಲ್ಗಳಿದ್ದು, ಅವುಗಳೆಲ್ಲವೂ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಹಾಗೂ ಅದರ ಹಿಂದಿನ ಮೂರು ಕಿ.ಮೀ. ಉದ್ದದ ಮಾರ್ಗದಲ್ಲೇ ಇವೆ.

ಮೈಸೂರು ರಸ್ತೆ ಕಡೆಯಿಂದ ಹೊರಡುವ ಈ ಹೊರವರ್ತುಲ ರಸ್ತೆಯು ನೈಸ್ ಹೆದ್ದಾರಿ ಮೇಲಿನ ಸೇತುವೆಯನ್ನು ಇಳಿದರೆ ಸಾಕು, ಇಬ್ಬದಿಗಳಲ್ಲೂ ಕವಲು ದಾರಿಗಳು ಶುರುವಾಗುತ್ತವೆ. ಮೊದಲಿಗೆ ಸಿಗುವುದು ಕೆರೆಕೋಡಿ ರಸ್ತೆ. ಕೆರೆಕೋಡಿ ಸುತ್ತ ನಿರ್ಮಾಣವಾಗಿರುವ ಹಲವು ಬಡಾವಣೆಗಳ ಜನ ಇದೇ ರಸ್ತೆಯನ್ನು ಬಳಕೆ ಮಾಡುವುದರಿಂದ ಇಲ್ಲಿ ಸಂಚಾರ ದಟ್ಟಣೆ ಯಾವಾಗಲೂ ಇರುತ್ತದೆ.

ಪಿಇಎಸ್ ಇನ್ಸ್ಟಿಟ್ಯೂಟ್ ಬಳಿ ಮತ್ತೊಂದು ಕವಲು ದಾರಿಯು ಹೊರವರ್ತುಲ ರಸ್ತೆಯನ್ನು ಸೀಳಿಕೊಂಡು ಹೋಗುತ್ತದೆ. ಸುಮಾರು 300 ಮೀಟರ್ ಅಂತರದಲ್ಲಿ ಹೊಸಕೆರೆಹಳ್ಳಿ ಮುಖ್ಯ ರಸ್ತೆ ಬರುತ್ತದೆ. ವರ್ತುಲ ರಸ್ತೆಯನ್ನು ದಾಟಲು ಎರಡೂ ಬದಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಸುಮಾರು ಅಷ್ಟೇ ಅಂತರ ಕ್ರಮಿಸುವ ವೇಳೆಗೆ 80 ಅಡಿ ರಸ್ತೆ (ಬನಶಂಕರಿ ಕ್ರಾಸ್) ಸಿಗುತ್ತದೆ. ಅದಕ್ಕೂ ಪ್ರತಿ ಕ್ಷಣ ವರ್ತುಲ ರಸ್ತೆಯನ್ನು ದಾಟುವ ಹವಣಿಕೆ.

ವರ್ತುಲ ರಸ್ತೆಯಲ್ಲಿ ವೇಗವಾಗಿ ಹೋಗಲು ಮುಂದಾದವರಿಗೆ ತೊಡರುಗಾಲು ಹಾಕುವ ಸರದಿ ಈಗ 50 ಅಡಿ (ಕತ್ರಿಗುಪ್ಪೆ ಕ್ರಾಸ್) ರಸ್ತೆಯದು. ಎಡಬದಿಯಲ್ಲಿ ಇರುವ ಈ ರಸ್ತೆ, ಬಲಭಾಗದ ಇಟ್ಟಮಡು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಕಾರಣ, ಅಲ್ಲೂ ಸಂಚಾರ ದಟ್ಟಣೆ ಸಮಸ್ಯೆ. ಆಮೇಲೆ ಕಾಮಾಕ್ಯ ಕ್ರಾಸ್ ಸಹ ವಾಹನಗಳು ನಿಂತಲ್ಲೇ ನಿಲ್ಲುವಂತೆ ಮಾಡುತ್ತದೆ.

ಇಷ್ಟೆಲ್ಲ ಕ್ರಾಸ್ಗಳನ್ನು ದಾಟಿಕೊಂಡು ಬರುವ ವೇಳೆಗೆ ಸುಸ್ತು ಹೊಡೆದ ಚಾಲಕರು, ರಾಣಿ ಚೆನ್ನಮ್ಮ ವೃತ್ತದ ದಟ್ಟಣೆಗೆ ಇನ್ನಷ್ಟು ಹೈರಾಣಾಗುತ್ತಾರೆ. ಈ ಸಿಗ್ನಲ್ ದಾಟಿದ ಮೇಲೆ ಮಾತ್ರ ಯಾವುದೇ ಅಡೆ–ತಡೆ ಇಲ್ಲದಂತೆ ಸಂಚಾರ ಸುಗಮವಾಗಿ ಮುಂದುವರಿಯುತ್ತದೆ.

ಕದಿರೇನಹಳ್ಳಿ ಕ್ರಾಸ್ ಬಳಿ ಕೆಳಸೇತುವೆಯನ್ನು ನಿರ್ಮಾಣ ಮಾಡಿದ್ದರಿಂದ ಸಿಗ್ನಲ್ ಮುಕ್ತ ಸಂಚಾರ ಸೌಲಭ್ಯ ಸಿಕ್ಕಿದೆ. ಆದರೆ, ಪಕ್ಕದಲ್ಲೇ ಇರುವ ಸುಬ್ರಹ್ಮಣ್ಯಪುರ ಮುಖ್ಯ ರಸ್ತೆಯೂ ವರ್ತುಲ ರಸ್ತೆಯನ್ನು ದಾಟಲು ಹವಣಿಕೆ ನಡೆಸುತ್ತದೆ. ದಟ್ಟಣೆ ಮಾತ್ರ ಅಷ್ಟಾಗಿ ಇರುವುದಿಲ್ಲ. ಅಲ್ಲಿಂದ ಮುಂದೆ ಕನಕಪುರ ರಸ್ತೆ ಸೇರುವವರೆಗೆ ಬೇರೆ ಯಾವ ಅಡೆತಡೆಯೂ ಇಲ್ಲ.

ಮೈಸೂರು ರಸ್ತೆ ಕಡೆಯಿಂದ ಬರುವವರು ಆರಂಭದಲ್ಲೇ ಬಸವಳಿಯುತ್ತಾ ಬರಬೇಕಾದರೆ, ಕನಕಪುರ ರಸ್ತೆ ಕಡೆಯಿಂದ ಬರುವವರು ರಾಣಿ ಚೆನ್ನಮ್ಮ ವೃತ್ತದವರೆಗೆ ಭರ್ರ್ ಎಂದು ಬಂದು, ಅಲ್ಲಿಂದ ಮುಂದಕ್ಕೆ ಸಾಗಲು ಅಡಿ–ಅಡಿಗೂ ಹೆಣಗಾಡಬೇಕಾಗುತ್ತದೆ. ಬಿಬಿಎಂಪಿ ಈಗ ರಾಣಿ ಚೆನ್ನಮ್ಮ ವೃತ್ತದಲ್ಲಿ ಮೇಲ್ಸೇತುವೆ ನಿರ್ಮಿಸಲು ಮುಂದಾಗಿದೆ.

ವರ್ತುಲ ರಸ್ತೆಯಲ್ಲಿ ಚಲಿಸುವವರಿಗೆ ಇದರಿಂದ ಹೆಚ್ಚೇನೂ ಪ್ರಯೋಜನ ಆಗುವುದಿಲ್ಲ. ಏಕೆಂದರೆ, ಈ ವೃತ್ತದ ಹಿಂದೆ ಏಳು ಸಿಗ್ನಲ್ಗಳು ಸಂಚಾರದ ವೇಗಕ್ಕೆ ಬ್ರೇಕ್ ಹಾಕಲು ಸಜ್ಜಾಗಿ ನಿಂತಿರುತ್ತವೆ. ಪ್ರತಿಯೊಂದು ಸಿಗ್ನಲ್ನಲ್ಲಿ ಮ್ಯಾಜಿಕ್ ಬಾಕ್ಸ್್ ತಂತ್ರಜ್ಞಾನದ ಮೂಲಕ ಮೇಲ್ಸೇತುವೆ (ಬಿಡಿಎ ಕಚೇರಿ ಮುಂದಿರುವ ಸೇತುವೆ ರೀತಿ) ನಿರ್ಮಾಣ ಮಾಡಿದರೆ ಈ ರಸ್ತೆಯ ಸಂಚಾರ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ ಎನ್ನುವುದು ತಜ್ಞರ ಸಲಹೆಯಾಗಿದೆ. ಏಕೆಂದರೆ, ಸರಾಸರಿ ಶೇ 65ರಷ್ಟು ವಾಹನಗಳು ವರ್ತುಲ ರಸ್ತೆಯಲ್ಲೇ ಪ್ರಯಾಣ ಮುಂದುವರಿಸುತ್ತವೆ.

‘ಬಿಬಿಎಂಪಿ ಹಾಗೂ ಬಿಡಿಎ ನಿರ್ಮಿಸಿದ ಕೆಲವು ಮೇಲ್ಸೇತುವೆಗಳು ಕಿಷ್ಕಿಂಧೆಯಂತಿವೆ. ಸಮರ್ಪಕವಾದ ಯೋಜನೆ ರೂಪಿಸದ ಕಾರಣ, ಮೇಲ್ಸೇತುವೆಗಳು ಸಮಸ್ಯೆಯನ್ನು ಬಗೆಹರಿಸುವ ಬದಲು ಮತ್ತಷ್ಟು ಸಂಕೀರ್ಣಗೊಳಿಸಿವೆ. ಜಯದೇವ, ಲಿಂಗರಾಜಪುರ, ಆನಂದರಾವ್ ವೃತ್ತ, ಹೆಬ್ಬಾಳ ಮತ್ತು ಬಾಣಸವಾಡಿ ಮೇಲ್ಸೇತುವೆಗಳು ಅದಕ್ಕೆ ತಕ್ಕ ಉದಾಹರಣೆಯಾಗಿವೆ’ ಎನ್ನುತ್ತಾರೆ ಐಐಎಸ್ಸಿ ಸಾರಿಗೆ ಹಾಗೂ ನಗರ ಯೋಜನೆ ತಜ್ಞ ಡಾ. ಲೋಕೇಶ್ ಹೆಬ್ಬಾನಿ.

‘ರಾಣಿ ಚೆನ್ನಮ್ಮ ವೃತ್ತದ ಮೇಲ್ಸೇತುವೆಯನ್ನು ಕನಿಷ್ಠ ನಾಲ್ಕು ಸಿಗ್ನಲ್ ದಾಟುವವರೆಗೆ ಮುಂದುವರಿಸಬೇಕು. ಮಿಕ್ಕ ನಾಲ್ಕು ಸಿಗ್ನಲ್ಗಳಲ್ಲಿ (ವರ್ತುಲ ರಸ್ತೆಯನ್ನು ದಾಟುವ ವಾಹನಗಳ ಸಂಖ್ಯೆ ಇಲ್ಲಿ ಕಡಿಮೆ) ಮ್ಯಾಜಿಕ್ ಬಾಕ್ಸ್ ತಂತ್ರಜ್ಞಾನದ ಮೂಲಕ ಪುಟ್ಟ ಮೇಲ್ಸೇತುವೆಗಳ ನಿರ್ಮಾಣ ಮಾಡಬೇಕು. ಈ ಸೌಲಭ್ಯ ಕಲ್ಪಿಸಿದರೆ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ’ ಎಂದು ಅವರು ಸಲಹೆ ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.