ಗುರುವಾರ , ಜೂನ್ 17, 2021
26 °C

ವಾಂತಿ- ಭೇದಿ ನಿಯಂತ್ರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸವಣೂರ: ನಗರದ ನಿವಾಸಿಗಳನ್ನು ಕಾಡಿದ ವಾಂತಿ-ಬೇಧಿ ಪ್ರಕರಣವನ್ನು ಈ ಬಾರಿ ತಕ್ಷಣಕ್ಕೆ ನಿಯಂತ್ರಿಸಲಾಗಿದ್ದು, ಯಾವುದೇ ರೋಗಿಗಳು ಆಸ್ಪತ್ರೆಗೆ ದಾಖಲಾಗಿಲ್ಲ.ಗುರುವಾರ ಸರ್ಕಾರಿ ಆಸ್ಪತ್ರೆಯಲ್ಲಿ ವಾಂತಿ-ಭೇದಿಯಿಂದ ಬಳಲಿದ ಯಾವದೇ ರೋಗಿಗಳು ದಾಖಲಾಗಿಲ್ಲ. ಸಾಮಾನ್ಯ ದಿನದ ರೀತಿಯಲ್ಲಿ ಆಸ್ಪತ್ರೆಯ ಹೊರರೋಗಿಗಳ ವಿಭಾಗ ದಲ್ಲಿ 40-50 ರೋಗಿಗಳನ್ನು ತಪಾಸಣೆ ಮಾಡಿ ಅಗತ್ಯ ಚಿಕಿತ್ಸೆ ನೀಡ ಲಾಗಿದೆ ಎಂದು ತಾಲ್ಲೂಕು ಆರೋಗ್ಯಾ ಧಿಕಾರಿ ಡಾ. ಚಂದ್ರಕಲಾ ಹಾಗೂ  ಆಸ್ಪತ್ರೆಯ ವೈದ್ಯಾಧಿಕಾರಿ ಗಳಾದ ಡಾ. ಸುಮಾ ತಿಳಿಸಿದ್ದಾರೆ.  ತಕ್ಷಣದ ಕ್ರಮಗಳು:  ನಗರದಲ್ಲಿ ಮಾಂಸ ಮಾರಾಟ ವನ್ನು ಸ್ಥಗಿತ ಸೇರಿದಂತೆ ಪರಿಶುದ್ಧ  ನೀರು ಪೂರೈಕೆ  ಹಲವು ಮುಂಜಾಗ್ರತಾ ಕ್ರಮಗಳನ್ನು ಆಡಳಿತ ವ್ಯವಸ್ಥೆ ಕೈಗೊಳ್ಳಲಾಗಿದೆ. 5 ಲಕ್ಷ ರೂಪಾಯಿ ಅನುದಾನ ನೀಡಲಾಗಿದ್ದು, ಉಳಿದ 3 ಲಕ್ಷ ರೂ ಅನುದಾನ ವನ್ನು ಪುರಸಭೆ ಭರಿಸಲಿದೆ ಎಂದು ತಹಶೀಲ್ದಾರರು ತಿಳಿಸಿದ್ದಾರೆ.ನಗರದ ಚರಂಡಿಗಳಲ್ಲಿರುವ ಅನಧಿಕೃತ ನಳದ ಸಂಪರ್ಕ ವನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾ ಗುತ್ತಿದೆ. ಚರಂಡಿ ಗಳಲ್ಲಿರುವ ನಳದ ಸಂಪರ್ಕವನ್ನು ಸಾರ್ವಜನಿಕರೇ ಸ್ವಯಂ ಪ್ರೇರಣೆಯಿಂದ ತೆರವು ಗೊಳಿಸಬೇಕು ಎಂದು ಅವರು ಕೋರಿದ್ದಾರೆ.

 

ಸಾರ್ವಜನಿಕ ಆಸ್ಪತ್ರೆಯಲ್ಲಿ ಈಗ ರೋಗಿಗಳ ದಾಖಲಾತಿ ಕಡಿಮೆಯಾಗಿದ್ದು, ರೋಗಿಗಳಿಗೆ ಅಗತ್ಯವಾದ ಎಲ್ಲ ವೈದ್ಯಕೀಯ ಸೌಲಭ  ಕಲ್ಪಿಸಲಾಗಿದೆ. ಗ್ರಾಮೀಣ ಭಾಗದಿಂದ ಹೆಚ್ಚುವರಿ ವೈದ್ಯರ ಸೇವೆಯನ್ನು ಪಡೆಯಲಾಗುತ್ತಿದೆ. ಆಸ್ಪತ್ರೆಯಲ್ಲಿ ಅವಶ್ಯಕವಾದ ಔಷಧಿಗಳ ಲಭ್ಯತೆ ಇದೆ ಎಂದು ತಹಶೀಲ್ದಾರ ಡಾ. ನಾಗೇಂದ್ರ ಹೊನ್ನಳ್ಳಿ ತಿಳಿಸಿದ್ದಾರೆ.ಸವಣೂರ ನಗರದಲ್ಲಿ ಮೀನು ಸೇರಿದಂತೆ ಇತರೇ ಮಾಂಸಾಹಾರಿ ಪದಾರ್ಥಗಳ ಮಾರಾಟವನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಕುಡಿಯುವ ನೀರನ್ನು ಕುದಿಸಿ ಆರಿಸಿ ಕುಡಿಯುವದರೊಂದಿಗೆ, ತಮ್ಮ ವಯಕ್ತಿಕ ಶುಚಿತ್ವ ಹಾಗೂ ಪರಿಸರದ ನೈರ್ಮಲ್ಯ ಕಾಯ್ದುಕೊಳ್ಳುವಂತೆ ತಹ ಶೀಲ್ದಾರರು ಸಾರ್ವಜನಿಕರಲ್ಲಿ ಕೋರಿಕೊಂಡಿದ್ದಾರೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.