ಸೋಮವಾರ, ಮಾರ್ಚ್ 8, 2021
31 °C

ವಿಜಯ್ ಬ್ರಾಂಡ್‌ಗೆ ಹೊಸ ರೂಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯ್ ಬ್ರಾಂಡ್‌ಗೆ ಹೊಸ ರೂಪ

ಗೃಹಬಳಕೆ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದಲ್ಲಿ ಹೆಸರುವಾಸಿಯಾಗಿ 50 ವಸಂತಗಳನ್ನು ಯಶಸ್ವಿಯಾಗಿ ಪೂರೈಸಿರುವ ಸಂಸ್ಥೆ ವಿಜಯ್ ಹೋಮ್ ಅಪ್ಲಯನ್ಸಸ್ ಲಿಮಿಟೆಡ್ ತನ್ನ ಬ್ರಾಂಡನ್ನು ಮತ್ತೆ ಹೊಸ ರೂಪದಲ್ಲಿ ಪರಿಚಯಿಸುವ ಮೂಲಕ ವಹಿವಾಟು ಕ್ಷೇತ್ರವನ್ನು ವಿಶಾಲ ಶ್ರೇಣಿಗೆ ವಿಸ್ತರಿಸಿಕೊಳ್ಳುತ್ತಿದೆ.ಈ ಮೂಲಕ ಗೃಹ, ಅಡುಗೆ ಮನೆ ಮತ್ತು ಕಚೇರಿ ಪರಿಕರಗಳನ್ನೂ ತನ್ನ ಗ್ರಾಹಕರಿಗೆ ತಲುಪಿಸಲು ಮುಂದಾಗಿದೆ. ಈ ಮೂರೂ ವಿಭಾಗಗಳಲ್ಲಿ ಹೊಸ ಮತ್ತು ವಿಭಿನ್ನ ಶ್ರೇಣಿಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ.ವಿಜಯ್ ಹೋಮ್ ಅಪ್ಲಯನ್ಸಸ್ ವಿಭಾಗದಲ್ಲಿ ಫ್ಯಾನ್, ವಾಟರ್ ಹೀಟರ್, ಐರನ್ ಬಾಕ್ಸ್ ಉತ್ಪನ್ನಗಳಿದ್ದರೆ, ಇಂಡಕ್ಷನ್ ಕುಕ್ ಟಾಪ್ಸ್, ಎಲೆಕ್ಟ್ರಿಕ್ ರೈಸ್ ಕುಕ್ಕರ್, ಜ್ಯೂಸರ್, ಮಿಕ್ಸರ್ ಗ್ರೈಂಡರ್ ಮತ್ತಿತರ ಪರಿಕರಗಳನ್ನು ಅಡುಗೆ ವಿಭಾಗದಲ್ಲಿ ಸಂಸ್ಥೆ ತಯಾರಿಸಿ ಮಾರಾಟ ಮಾಡುತ್ತಿದೆ.  ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಸೇರಿದಂತೆ ಮಹಾರಾಷ್ಟ್ರ, ಛತ್ತೀಸ್‌ಗಢ ಮತ್ತು ಭುವನೇಶ್ವರದಲ್ಲಿಯೂ ವಿಜಯ್ ವಹಿವಾಟು ವ್ಯಾಪ್ತಿ ವಿಸ್ತರಿಸಿಕೊಂಡಿದೆ.`ಬೆಂಗಳೂರು ಸೇರಿದಂತೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಸಂಸ್ಥೆಯ ವಹಿವಾಟು ಜಾಲವನ್ನು ಇನ್ನಷ್ಟು ವಿಸ್ತರಿಸಿ ಮಾರುಕಟ್ಟೆ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲಾಗುವುದು. ಸದ್ಯ ಕರ್ನಾಟಕದಲ್ಲಿ 750 ಮಂದಿ ವಿತರಕರಿದ್ದು, ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ವಿಸ್ತರಿಸಲಾಗುವುದು.ಮುಂದಿನ ಮೂರು ವರ್ಷಗಳಲ್ಲಿ ದೇಶದಾದ್ಯಂತ ನಮ್ಮ ಮಾರುಕಟ್ಟೆ ಸಾಮರ್ಥ್ಯ ವಿಸ್ತರಣೆಗೆ ಹೊಸ ಯೋಜನೆ ರೂಪಿಸಲಾಗುವುದು~ ಎನ್ನುತ್ತಾರೆ ವಿಜಯ್ ಸಂಸ್ಥೆಯ ಪ್ರಧಾನ ಕಾರ್ಯತಂತ್ರ ಅಧಿಕಾರಿ ಡಾ. ಕೃಷ್ಣಸಾಗರ್ ರಾವ್.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.