ಶುಕ್ರವಾರ, ಏಪ್ರಿಲ್ 3, 2020
19 °C

ವಿಜೃಂಭಣೆಯ ಕಡಲೇಕಾಯಿ ಪರಿಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ: ಪಟ್ಟಣಕ್ಕೆ ಸಮೀಪದ ಸೊಂಡೆಕೊಪ್ಪ ರಸ್ತೆಯ ಪುರಾತನ ಬಯಲು ಉದ್ಭವ ವಿನಾಯಕ ಸ್ವಾಮಿ ಬ್ರಹ್ಮ ರಥೋತ್ಸವ (ಕಡಲೇಕಾಯಿ ಪರಿಷೆ) ಸಾವಿರಾರು ಭಕ್ತರ ಸಮ್ಮುಖ­ದಲ್ಲಿ ಮಂಗಳವಾರ ವಿಜೃಂಭಣೆ­ಯಿಂದ ನಡೆಯಿತು.ಮಧ್ಯಾಹ್ನ 12.30ರಿಂದ 1.30ರ ಅಭಿಜಿನ್‌ ಲಗ್ನದಲ್ಲಿ ನಡೆದ ರಥೋ­ತ್ಸವ­ದಲ್ಲಿ ವಿನಾಯಕನಿಗೆ ಭಕ್ತರು ಸೂರು ಬಾಳೆಹಣ್ಣು ಮತ್ತು ಕಡಲೆ­ಕಾಯಿ ಎಸೆದು ಭಕ್ತಿ ಸಮರ್ಪಿಸಿದರು. ವಿವಿಧ ಜನಪದ ಕಲಾ ತಂಡಗಳು ಕಲಾ ಪ್ರದರ್ಶನ ನೀಡಿದವು. ತಾಲ್ಲೂಕಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದ್ದ ಪರಿಷೆಗೆ ಪೂರ್ವ ಒಂದು ವಾರದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ­ಗಳನ್ನು ಹಮ್ಮಿಕೊಳ್ಳಲಾಗಿತ್ತು.ಮಾಗಡಿ, ರಾಮನಗರ ಭಾಗಗ­ಳಿಂದ ಸಾವಿರಾರು ಭಕ್ತರು ಬಂದಿದ್ದರು. ಬೆಳಗ್ಗಿನಿಂದ ರಾತ್ರಿವರೆಗೂ ಸೊಂಡೆ­ಕೊಪ್ಪ ರಸ್ತೆಯಲ್ಲಿ ಭಕ್ತರ ಪ್ರವಾಹ ನೆರೆದಿತ್ತು. ತಾಲ್ಲೂಕಿನ ಸುತ್ತಮುತ್ತಲ ಹಳ್ಳಿಗಳ ಗ್ರಾಮಸ್ಥರು ಅರವಟಿಕೆಗಳನ್ನು ಹಾಕಿಕೊಂಡು ಪಾನಕ, ಮಜ್ಜಿಗೆ, ಕೋಸಂಬರಿಗಳನ್ನು ವಿತರಿಸಿದರು. ದೇವಸ್ಥಾನ ಸಮಿತಿ­ಯಿಂದ ಅನ್ನ­ಸಂತರ್ಪಣೆ ಮಾಡಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)