ಬೆಂಗಳೂರು: ಐಪಿಎಲ್ ಟೂರ್ನಿ ಹಿನ್ನೆಲೆಯಲ್ಲಿ `ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್' ಬಳಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ ಆಯೋಜಿಸಿದ್ದ `ಕ್ರಿಕೆಟ್ ಮೇನಿಯಾ' ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಸ್ಪರ್ಧಿಗಳಿಗೆ ಶನಿವಾರ ಬಹುಮಾನ ಪ್ರದಾನ ಮಾಡಲಾಯಿತು.

ಈ ಕಾರ್ಯಕ್ರಮ ಆರಂಭಕ್ಕೂ ಮುನ್ನ ಹಾಸ್ಯ ಕಲಾವಿದ ಮೈಸೂರು ಆನಂದ್ ಹಾಸ್ಯ ಚಟಾಕಿಯ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸಿದರು. ನಟಿ ಶ್ವೇತಾ ಶ್ರೀವಾತ್ಸವ, ಪತ್ರಿಕೆಯ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಶಿವರಾಮಕೃಷ್ಣ ಹಾಗೂ ಉಪ ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮೊದಲ ನಾಲ್ಕು ಸುತ್ತುಗಳು ಪ್ರಾಥಮಿಕ ಹಂತದ ಸ್ಪರ್ಧೆಗಳಾಗಿದ್ದವು. ಇದರಲ್ಲಿ ಪ್ರತಿ ಸುತ್ತುಗಳಿಂದಲೂ 15 ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ಇದರ ಜೊತೆಗೆ 5, 6 ಮತ್ತು 7ನೇ ಸುತ್ತಿನಲ್ಲಿ ಸರಿ ಉತ್ತರ ನೀಡಿದ 20 ಅದೃಷ್ಟಶಾಲಿಗಳಿಗೂ ಸಮಾಧಾನಕರ ಬಹುಮಾನ ಲಭಿಸಿತು. ಬಂಪರ್ ಬಹುಮಾನ ಪಡೆದ ಬೆಂಗಳೂರಿನ ಕೆ.ರಮೇಶ್ ಅವರು ಐ ಫೋನ್ ಪಡೆದರು.

`ಕ್ರಿಕೆಟ್ ಮೇನಿಯಾ' ಸ್ಪರ್ಧೆಯಲ್ಲಿ ಒಟ್ಟು 120 ಸಮಾಧಾನಕರ ಬಹುಮಾನ ಹಾಗೂ 5, 6 ಮತ್ತು 7ನೇ ಸುತ್ತಿನ ಸ್ಪರ್ಧಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಯಿತು.

ಸ್ಪರ್ಧೆಯ ವಿಜೇತರು:
5ನೇ ಸುತ್ತು:  ಸುಭಾಷ್ಗೌಡ ಜಿ. (ಸವದತ್ತಿ), ಡಿ.ಇ.ಐ. ಅರುಣ್ (ಬೆಂಗಳೂರು), ಸಂಪದಾ ಆರ್.ಬಿ. (ಬೆಂಗಳೂರು), ಆದಿತ್ಯ ಕೆ.ಆರ್. (ದಾವಣಗೆರೆ), ದೀಪಕ್ ಜಿ. (ಬೆಂಗಳೂರು), ವಿಜೇತ (ಕೆಜಿಎಫ್),

6ನೇ ಸುತ್ತು: ಸಿ.ಡಿ. ಹನುಮೇಗೌಡ (ಬೆಂಗಳೂರು), ಆನಂದಪ್ಪ (ಕೊಪ್ಪಳ), ಕೆ. ಈರೇಶ್ (ಚಿತ್ರದುರ್ಗ), ಸಂಜಯ್ ವಿ.ಎನ್. (ಬೀಳಗಿ), ವಸುಧಾ ಪಿ. ದೇಸಾಯಿ (ಧಾರವಾಡ), ಶ್ರೇಯಾ ಎಲ್. (ಬೆಂಗಳೂರು),

7ನೇ ಸುತ್ತು: ಬಾಲಾಜಿ ಡಿ. (ಬೆಂಗಳೂರು), ಉಮೇಶ್ ಸಿ. ಕುಲಕರ್ಣಿ (ಗೋಕಾಕ್), ಎನ್. ಸಿ. ರಾಜಣ್ಣ (ಬೆಂಗಳೂರು), ಸ್ಕಂದ ಕುಮಾರ್ ಎನ್.ಎನ್. (ಬೆಂಗಳೂರು), ಶ್ರೀನಿಧಿ (ಬೆಂಗಳೂರು) ಮತ್ತು ಹುಸೇನ್ ಬಾಷಾ (ದಾವಣಗೆರೆ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.