ಗುರುವಾರ , ಏಪ್ರಿಲ್ 22, 2021
30 °C

ವಿಜ್ಞಾನಿಗಳ ಸಂಖ್ಯೆ ಕಡಿಮೆ: ಸಂಕನೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ದೇಶದಲ್ಲಿರುವ ವಿಜ್ಞಾನಿಗಳ ಸಂಖ್ಯೆ ಬೇರೆ ದೇಶಗಳಿಗೆ ಹೋಲಿಸಿದರೆ ಬಹಳ ಕಡಿಮೆ ಇದೆ. ವಿದ್ಯಾರ್ಥಿಗಳಲ್ಲಿ ಸಂಶೋಧನಾತ್ಮಕ ಮನೋಭಾವ ಬೆಳಸಿ ಕಿರಿಯ ವಿಜ್ಞಾನಿಗಳನ್ನಾಗಿ ಮಾಡುವುದು ರಾಷ್ಟ್ರೀಯ ಮಕ್ಕಳ ವಿಜ್ಞಾನ  ಸಮಾವೇಶದ ಪ್ರಭಂದ ಸ್ಪರ್ಧೆಯ ಗುರಿಯಾಗಿದೆ ಎಂದು ರಾಜ್ಯ ವಿಜ್ಞಾನ ಪರಿಷತ್ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಪ್ರಾ.ಎಸ್.ವಿ.ಸಂಕನೂರ ಹೇಳಿದರು.ನಗರದ ಸಿ.ಎಸ್.ಪಾಟೀಲ ಬಾಲಕಿಯರ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಪ್ರಬಂಧ ಮಂಡನೆ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಪ್ರಭಾರಿ ಉಪನಿರ್ದೇಶಕ ಬಿ.ಎಸ್.ರಘುವೀರ, ಶಿಕ್ಷಣಾಧಿಕಾರಿ ಸಿ.ವಿ.ಮ್ಯೋಗೇರಿ, ಜೆ.ಡಿ.ದಾಸರ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಗೌರವಿಸಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿ.ಎಲ್.ಪಾಟೀಲ ಮಾತನಾಡಿ, ದೇಶ ಸ್ವಾವಲಂಬಿಯಾಗಲು ವಿಜ್ಞಾನ ತಂತ್ರಜ್ಞಾನದಲ್ಲಿ ಮುಂದುವರೆದಾಗ ಮಾತ್ರ ಸಾಧ್ಯ ಎಂದರು.ನಿರ್ಣಾಯಕರಾಗಿ ಪ್ರೊ. ಎಂ.ಎಫ್.ಬಡಿಗೇರಿ, ಪ್ರೊ. ಐ.ಐ.ಪಟ್ಟಣಶೆಟ್ಟಿ ಕಾರ್ಯನಿರ್ವಹಿಸಿದರು. ಜಿಲ್ಲಾ ಸಂಚಾಲಕ ಎಸ್.ಆಯ್.ದಿಂಡೂರ ಸ್ವಾಗತಿಸಿದರು. ಶೈಕ್ಷಣಿಕ ಸಯೋಜಕ ಶ್ರೀಎಸ್.ಎಸ್.ಗಂಜಿ ವಂದಿಸಿದರು. ಎನ್.ವಿ. ಜೋಶಿ ನಿರೂಪಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.