ನವದೆಹಲಿ (ಪಿಟಿಐ): ದೇಶದಲ್ಲಿ ಪರಿಣಾಮಕಾರಿ ವಿಪತ್ತು ನಿರ್ವಹಣೆಗಾಗಿ ಪಂಚಾಯಿತಿ, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಹೊಸ `ಪ್ರಕೃತಿ ವಿಕೋಪ ನಿರ್ವಹಣಾ~ ವ್ಯವಸ್ಥೆಯನ್ನು ಸರ್ಕಾರ ರೂಪಿಸುತ್ತಿದ್ದು, ಅದಕ್ಕಾಗಿ 23ಸಾವಿರ ಕೋಟಿ ರೂ ಹಣವನ್ನು ತೆಗೆದಿರಿಸಿದೆ.

ವಿಪತ್ತು ನಿರ್ವಹಣಾ ಸೇವೆಯ ಮಾರ್ಗಸೂಚಿ ಬಿಡುಗಡೆ ಮಾಡಿ ಮಾತನಾಡಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಎಂ.ಶಶಿಧರ್ ರೆಡ್ಡಿ, 13ನೇ ಹಣಕಾಸು ಆಯೋಗ ಈ ಸೌಲಭ್ಯದ ಅಭಿವೃದ್ಧಿಗಾಗಿ ಬೃಹತ್ ಪ್ರಮಾಣದ ಹಣ ಮೀಸಲಿಟ್ಟಿದ್ದು, ವಿಪತ್ತನ್ನು ಸಮರ್ಪಕವಾಗಿ ನಿರ್ವಹಿಸಲು ಇದು ಸಹಕಾರಿಯಾಗಲಿದೆ ಎಂದು ಹೇಳಿದರು. 23 ಸಾವಿರ ಕೋಟಿ ಯಲ್ಲಿ 15 ಸಾವಿರ ಕೋಟಿ ಯನ್ನು ಸ್ಥಳೀಯ ಸಂಸ್ಥೆಗಳಿಗೆ ನೇರವಾಗಿ ಅನುದಾನ ರೂಪದಲ್ಲಿ ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.