ಮಂಗಳವಾರ, ಮೇ 18, 2021
22 °C

ವಿಶಿಷ್ಟ ವೇಣು ವಾದನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಹುತೇಕ ಹಿಂದುಸ್ತಾನಿ ಕೊಳಲು ವಾದನ ಕಛೇರಿಯನ್ನೇ ನೆನಪಿಸಿದ ವೇಣುವಾದನ ಕಛೇರಿಯನ್ನು ಕೂಡಮಲೂರು ಜನಾರ್ದನನ್ ಅವರು ಶ್ರೀ ಟೆಕ್ನಾಲಜೀಸ್‌ನ ಆಶ್ರಯದಲ್ಲಿ ಭಾರತೀಯ ವಿದ್ಯಾಭವನದಲ್ಲಿ ಪ್ರಸ್ತುತ ಪಡಿಸಿದರು.ವಿವಿಧ ಆಕಾರಗಳ ಕೊಳಲುಗಳ ಬಳಕೆ, ಸುಸಂಸ್ಕರಿತ ತುತ್ತುಕ್ಕಾರಗಳು, ಶ್ರವಣ ಮಧುರತೆ, ಅಗಾಧವಾದ ಮನೋಧರ್ಮ, ವಾದ್ಯದ ಮೇಲೆ ಸುಭಗವಾದ ಹಿಡಿತ ಮುಂತಾದ ವಿಶೇಷತೆಗಳಿಂದ ಸಂಚಯಗೊಂಡಿದ್ದ ಅವರ ಕಛೇರಿ ಕೆಲವು ವಿವಾದಾಸ್ಪದ ಹೇಳಿಕೆಗಳು, ಪ್ರದರ್ಶನದಲ್ಲಿ ಅನಾವಶ್ಯಕ ಸೋಗು ಮತ್ತು ನಾಟಕೀಯತೆಗಳಿಂದ ರಸಿಕರ ಹುಬ್ಬೇರುವಂತೆ ಮಾಡಿತು.ಅಶೋಕ್ ಅವರ ಮೃದಂಗದೊಂದಿಗೆ ಹರಿಕಷ್ಣಮೂರ್ತಿ ಅವರ ತಬಲಾ ಸಾಥನ್ನೂ ಅವರು ಹೊಂದಿದ್ದುದ್ದು ಮತ್ತೊಂದು ಅಚ್ಚರಿ ಮೂಡಿಸಿದ ಸಂಗತಿ. ಬೇಹಾಗ್ ವರ್ಣದ ನಾಂದಿ.

 

ಬೃಂದಾವನ ಸಾರಂಗ ರಾಗದ ಸ್ವಾತಿ ತಿರುನಾಳರ ಕೃತಿ, ಮೋಹನ, ಹಿಂದೋಳ, ಅಮತವರ್ಷಿಣಿ ಇತ್ಯಾದಿ ರಾಗಗಳ ಹಿನ್ನೆಲೆಯೊಂದಿಗೆ ನುಡಿಸಲಾದ ಕಲ್ಯಾಣಿ ರಾಗದ ಸ್ವರಪಲ್ಲವಿ, ಕಾನಡಾ, ಯಮುನಾಕಲ್ಯಾಣಿ (ಕಷ್ಣಾ ನೀ ಬೇಗನೆ ಬಾರೋ) ರಾಗಗಳು ಕ್ರಮೇಣ ಹೆಚ್ಚು ಹೆಚ್ಚು ವಿಕಸನವಾಗುತ್ತಾ ಹೆಚ್ಚು ಹೆಚ್ಚು ಆಳಕ್ಕೆ ಮತ್ತು ಎತ್ತರಕ್ಕೆ ಜಿನುಗಿಕೊಳ್ಳುತ್ತಾ ಕಲಾವಿದರ ಸಂಪೂರ್ಣ ಕಲೆಯನ್ನು  ಆವರಿಸಿತು. ಒಟ್ಟಾರೆ ಅದೊಂದು ಮಿಶ್ರ ಪರಿಣಾಮ ಉಂಟು ಮಾಡಿದ ಕಛೇರಿ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.