ಸರಗೂರು (ಮೈಸೂರು ಜಿಲ್ಲೆ): ಶನಿವಾರ ಆತ್ಮಹತ್ಯೆ ಮಾಡಿಕೊಂಡ ಎಚ್.ಡಿ.ಕೋಟೆ ತಾಲ್ಲೂಕಿನ ಸಾಗರೆ ಗ್ರಾಮದ ರೈತ ಶೇಖರ್ ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹಿಸಿ ಭಾನುವಾರ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ಇದರಿಂದ ಮೂವರು ರೈತರು ಗಾಯಗೊಂಡು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಟಾವು ಮಾಡಿಟ್ಟ ಕಬ್ಬನ್ನು ಕಾರ್ಖಾನೆಯವರು ಸಾಗಿಸಲಿಲ್ಲ ಎಂಬ ಕಾರಣಕ್ಕೆ ಪುಟ್ಟೇಗೌಡರ ಮೂರನೇ ಮಗ ಶೇಖರ್ (28) ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ತನ್ನ ಸಾವಿಗೆ ಕಾರ್ಖಾನೆಯವರೇ ಕಾರಣ ಎಂದು ಚೀಟಿ ಬರೆದು ಜೇಬಿನಲ್ಲಿ ಇಟ್ಟುಕೊಂಡಿದ್ದ.

ಈ ಹಿನ್ನೆಲೆಯಲ್ಲಿ ಶೇಖರ್ ಸಾವಿಗೆ ಪರಿಹಾರವಾಗಿ ಕಾರ್ಖಾನೆ 10 ಲಕ್ಷ ರೂಪಾಯಿ ಹಾಗೂ ಸರ್ಕಾರ 5 ಲಕ್ಷ ರೂಪಾಯಿ ನೀಡಬೇಕು, ಅಲ್ಲದೇ ಶೇಖರ್ ಹೆಸರಿನಲ್ಲಿ ಎಸ್ಬಿಐನಲ್ಲಿ 4 ಲಕ್ಷ ರೂಪಾಯಿ ಸಾಲವಿದ್ದು ಅದನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ಆಗ್ರಹಿಸಿದರು.

ಈ ಪರಿಹಾರ ನೀಡಲು ಕಾರ್ಖಾನೆ ಮಾಲೀಕರು ಸಮ್ಮತಿಸದ ಕಾರಣ ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಶವ ಇರಿಸಿ ಪ್ರತಿಭಟನೆ ನಡೆಸಲು ರೈತರು ಶೇಖರ್ ದೇಹವನ್ನು ತರುತ್ತಿದ್ದರು. ಇದನ್ನು ಪೊಲೀಸರು ಮಾದಾಪುರ ಬಳಿ ತಡೆದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ರೈತ ಮುಖಂಡರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತನ ಶವ ಇಟ್ಟು ಪ್ರತಿಭಟನೆ ಮಾಡಿಯೇ ಸಿದ್ಧ ಎಂದು ಪಟ್ಟು ಹಿಡಿದರು. ಜನಸಂದಣಿ ಹೆಚ್ಚುತ್ತಿರುವುದನ್ನು ಕಂಡ ಪೊಲೀಸರು ರೈತರ ಮೇಲೆ ಲಘು ಲಾಠಿ ಪ್ರಹಾರ ಮಾಡಿದರು. ಘಟನೆಯಲ್ಲಿ ರೇವಣ್ಣ, ಮಂಜುನಾಥ ಹಾಗೂ ಶ್ರೀನಿವಾಸ್ಗೆ ಪೆಟ್ಟು ಬಿದ್ದಿದ್ದು, ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿಸಲಾಯಿತು.

ಪಟ್ಟು ಬಿಡದ ರೈತರು ಮಾದಾಪುರ ಗ್ರಾಮದಲ್ಲೇ ಶವ ಇಟ್ಟು ಧರಣಿ ಆರಂಭಿಸಿದರು. ಸ್ವತಃ ಜಿಲ್ಲಾಧಿಕಾರಿ ಹಾಗೂ ಕಾರ್ಖಾನೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಹಾರ ಕಲ್ಪಿಸಬೇಕು ಎಂದು ಘೋಷಣೆ ಕೂಗಿದರು.

ಒತ್ತಡಕ್ಕೆ ಮಣಿದರು: ರೈತರ ಆಕ್ರೋಶಕ್ಕೆ ಮಣಿದ ಬನ್ನಾರಿಯಮ್ಮ ನ್ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು ಕಡೆಗೆ ರೂ 4 ಲಕ್ಷ ಪರಿಹಾರ ನೀಡಲು ಒಪ್ಪಿಕೊಂಡರು.

ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿದ ಕಾರ್ಖಾನೆಯ ಕಾನೂನು ಸಲಹೆಗಾರ ಮುತ್ತುಸ್ವಾಮಿ ನಾಯ್ಡು, ಮೂರು ದಿನಗಳ ಒಳಗೆ ರೈತನ ಮನೆಗೆ ತೆರಳಿ ಪೂರ್ಣ ಪರಿಹಾರ ಹಣ ನೀಡುವುದಾಗಿ ಭರವಸೆ ಕೊಟ್ಟರು.
ನಂತರ ರೈತರು ಶವವನ್ನು ಸಾಗರೆ ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಿದರು. ಪ್ರತಿಭಟನೆ ವೇಳೆ ಜಿಲ್ಲಾ ಸಶಸ್ತ್ರ ಪಡೆಯ ಐದು ತುಕಡಿಗಳನ್ನು ನಿಯೋಜಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.