ಸೋಮವಾರ, ಜೂನ್ 14, 2021
24 °C

ಶ್ರೀರಾಮುಲುವಿನ 108 ಪ್ರಶ್ನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಇಲ್ಲಿನ ವಿದ್ಯಾದಾನ ಸಮಿತಿ ಮೈದಾನದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಮಂಗಳವಾರ ಆರಂಭಿಸಿ ರುವ 48 ಗಂಟೆಗಳ ಉಪವಾಸ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ 108 ಪ್ರಶ್ನೆಗಳನ್ನು ಕೇಳಿದ್ದಾರೆ.ಸರ್ಕಾರಗಳು ಇವುಗಳಿಗೆ ಉತ್ತರ ನೀಡುವುದರ ಜೊತೆಗೆ ಯೋಜನೆಗಳನ್ನು ಸಕಾಲದಲ್ಲಿ ಅನುಷ್ಟಾನಕ್ಕೆ ತರಬೇಕು ಎಂದು ಆಗ್ರಹಿಸಿದ್ದಾರೆ.ಕೆಲವು ಮುಖ್ಯ ಪ್ರಶ್ನೆಗಳು ಈ ಕೆಳಗಿನಂತಿವೆ.

*ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ರಚನೆಗೊಂಡ ಡಾ.ಡಿ.ಎಂ. ನಂಜುಡಪ್ಪ ನೇತತ್ವದ ಸಮಿತಿ ಸಲ್ಲಿಸಿದ ವರದಿಯ ಸಮಗ್ರ ಜಾರಿ ಯಾವಾಗ?*ನಂಜುಂಡಪ್ಪ ವರದಿಯನ್ನು ಜಾರಿ ತರುವ ನೆಪದಲ್ಲಿ ಯೋಜನಾ ವೆಚ್ಚ ಕಡಿತಗೊಳಿಸುತ್ತಿದೆ. ಇದರಿಂದ ಹಿಂದುಳಿದ ಪ್ರದೇಶಗಳು ಅಭಿವದ್ಧಿ ಹೊಂದುವುದು ಸಾಧ್ಯವಿದೆಯೇ?* ಹೈ-ಕ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಸಂವಿಧಾನದ 371 ನೇ ಪರಿಚ್ಛೇದವನ್ನು ಇಲ್ಲಿಗೆ ಜಾರಿ ಬರುವಂತೆ ಮಾಡಿಸುವುದು ಯಾವಾಗ ?*ಉತ್ತರ ಕರ್ನಾಟಕದ ಹತ್ತಾರು ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿರುವುದು ಏಕೆ ?*ಜಲಾಶಯ, ಕಾಲುವೆ ನಿರ್ಮಾಣದ ವಿಚಾರದಲ್ಲಿ ದಕ್ಷಿಣ ಕರ್ನಾಟಕ ಭಾಗದಲ್ಲಿ ನೀಡಿದ ಆಸಕ್ತಿಯನ್ನು ಉತ್ತರ ಕರ್ನಾಟಕದಲ್ಲಿ ಏಕೆ ತೋರಿಸಿಲ್ಲ ?*ಉತ್ತರ ಕರ್ನಾಟಕ ಭಾಗದ ಶಿಕ್ಷಣ ವ್ಯವಸ್ಥೆ ತೀರಾ ಕಳಪೆಯಾಗಲು ಕಾರಣ ಏನು ಎಂಬುವುದರ ವೈಜ್ಞಾನಿಕ ವಿಮರ್ಶೆ ನಡೆದಿದೆಯೇ ?*ಗಡಿ ತಕರಾರಿನಿಂದ ಮಾತ್ರ ಬೆಳಗಾವಿ ಸದಾ ಗಮನ ಸೆಳೆಯುತ್ತಿರಬೇಕೆ ? ಅಲ್ಲಿ ಒಂದು ಪ್ರತ್ಯೇಕ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಶಾಶ್ವತ ಯೋಜನೆಗಳನ್ನು ರೂಪಿಸುವುದಿಲ್ಲವೇ ?*ಉದ್ಯಮಗಳಿಗಾಗಿ ರೈತರ ಜಮೀನನ್ನು ಸ್ವಾಧಿನ ಪಡೆಸುವಾಗ ಯಾವ ಮಾರ್ಗ ಸೂಚಿ ಅನುಸರಿಸಿದ್ದೀರಿ ? ರೈತರ ತ್ಯಾಗಕ್ಕೆ ಸರಿಯಾಗಿ ಅವರಿಗೆ ಪರಿಹಾರ ನೀಡುವ ವ್ಯವಸ್ಥೆ ಮಾಡಬೇಡವೇ ?*ಉತ್ತರ ಕರ್ನಾಟಕ ಹಲವಾರು ಜಿಲ್ಲೆಗಳಲ್ಲಿ ಪ್ರವಾಹದಿಂದ ಸಂತ್ರಸ್ತರಾದವರಿಗೆ ಇಲ್ಲಿವರೆಗೆ ಪೂರ್ಣವಾಗಿ ಆಶ್ರಯ ನೀಡಿಲ್ಲ, ಅದು ನೆರವೇರುವುದು ಯಾವಾಗ ?* ತುಂಗಭದ್ರಾ ನೀರು ಬಳಕೆಯಲ್ಲಿ ತೀವ್ರ ಸಮಸ್ಯೆ ಇದ್ದು, ಇದರ ನಿವಾರಣೆ ಯಾವಾಗ ?*ವಿಜಾಪುರ ಒಂದು ಐತಿಹಾಸಿಕ ಸ್ಥಳ, ಇಲ್ಲಿಗೆ ಬರುವ ಪ್ರವಾಸಿಗರು ಸಂಖ್ಯೆಯೂ ದೊಡ್ಡದು. ಈ ಪ್ರದೇಶದ ಅಭಿವೃದ್ಧಿ ಯಾವಾಗ ?*ಹೈ - ಕ ಭಾಗದಲ್ಲಿ ಶೇ. 20 ರಷ್ಟು ಮಕ್ಕಳು ಶಾಲೆಯಿಂದ ದೂರವೇ ಉಳಿದಿರುವುದು ಗೊತ್ತಾಗಿಲ್ಲವೇ ?* ರಾಯಚೂರ ಜಿಲ್ಲೆಯ ತುಂಗಭದ್ರಾ ಎಡದಂಡೆ ನಾಲೆಯ ಕೊನೆಯ ರೈತರ ಗೋಳು ಕೇಳಿದ್ದೀರಾ ?* ಎನ್‌ಆರ್‌ಬಿಸಿ ವಿಸ್ತರಣೆ ಇನ್ನೂ ನೆನಗುದಿಗೆ ಬಿದ್ದಿರುವುದು ಏಕೆ ?* ನೆನೆಗುದಿಗೆ ಬಿದ್ದಿರುವ ಕೊಪ್ಪಳ-ಮೆಹಬೂಬ್‌ನಗರ ರೈಲ್ವೆ ಯೋಜನೆ ಆರಂಭಗೊಳ್ಳುವುದು ಯಾವಾಗ ?* ಕೊಪ್ಪಳ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ನಿರಂತರವೆಂಬುದು ಮನವರಿಕೆಯಾಗಿದೆಯೇ ?* ತುಂಗಭದ್ರಾ ನೀರು ಬಳಕೆಯಲ್ಲಿ ತೀವ್ರ ಸಮಸ್ಯೆ ಇದ್ದು, ಇದರ ನಿವಾರಣೆ ಯಾವಾಗ ?*ಹರಿಹರ - ಕೊಟ್ಟೂರ ರೈಲು ಮಾರ್ಗ ಪೂರ್ಣಗೊಳ್ಳುವುದು ಯಾವಾಗ ?* ಗಣಿ ಲಾರಿಗಳ ಸಂಚಾರದಿಂದಾಗಿ ಸೊಂಡೂರ-ಬಳ್ಳಾರಿ ಮತ್ತು ಸೊಂಡೂರ-ಹೊಸಪೇಟೆ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ, ಈ ರಸ್ತೆಗಳ ಅಭಿವೃದ್ಧಿಗಾಗಿ ಜನಾರ್ಧನ ರೆಡ್ಡಿ ಉಸ್ತುವಾರಿ ಸಚಿವರಾಗಿದ್ದಾಗ ಕಾಮಗಾರಿ ಪ್ರಾರಂಭವಾಗಿತ್ತು, ಅದನ್ನು ಪೂರ್ತಿಗೊಳಿಸುವುದು ಯಾವಾಗ ?* ಗಣಿಗಾರಿಕೆ ನಿಷೇಧದಿಂದಾಗಿ ಸೊಂಡೂರ, ಬಳ್ಳಾರಿ, ಹೊಸಪೇಟೆಗಳಲ್ಲಿ ಜನರು ಗುಳೆ ಹೋಗುತ್ತಿದ್ದಾರೆ, ಅವರಿಗೆ ಪರ್ಯಾಯ ಉದ್ಯೋಗ ದೊರಕಿಸುವುದಿಲ್ಲವೇ ?* ಬಳ್ಳಾರಿ ಮತ್ತು ಸಿರಗುಪ್ಪ ತಾಲ್ಲೂಕುಗಳ ನೀರಿನಲ್ಲಿ ಪ್ಲೋರೈಡ್ ಇರುವ ವಿಷಯ ಗೊತ್ತೆ ?

*ಪ್ರವಾಸೋದ್ಯಮ ಆಭಿವದ್ಧಿಗಾಗಿ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಉತ್ತರ ಕರ್ನಾಟಕಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದ್ದರೂ, ಅದನ್ನು ಮುಂದುವರಿಸುವ ಇಚ್ಛಾಶಕ್ತಿ ಇಲ್ಲವೇ?  ಎಂಬ ಪ್ರಶ್ನೆ ಸೇರಿದಂತೆ 108 ಪ್ರಶ್ನೆಗಳನ್ನು ಶ್ರೀರಾಮುಲು ಕೇಳಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.