ಹೈದರಾಬಾದ್ (ಪಿಟಿಐ): ಸವಾಲಿನ ಗುರಿಯ ಮುಂದೆ ಅಬ್ಬರದ ಬ್ಯಾಟಿಂಗ್ ತೋರಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆರು ವಿಕೆಟ್ಗಳ ಅಮೋಘ ಗೆಲುವು ತನ್ನದಾಗಿಸಿಕೊಂಡಿತು.

ಉಪ್ಪಳದಲ್ಲಿರುವ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಎರಡೂ ತಂಡಗಳಿಂದ ರನ್ ಹೊಳೆಯೇ ಹರಿಯಿತು. ಕೊನೆಗೆ ಗೆಲುವು ಲಭಿಸಿದ್ದು ಪ್ರೀತಿ ಜಿಂಟಾ ಒಡೆತನದ ಪಂಜಾಬ್ ತಂಡಕ್ಕೆ.

ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ 20 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 205 ರನ್ ಕಲೆ ಹಾಕಿತು. ಸವಾಲಿನ ಗುರಿಯನ್ನು ಪಂಜಾಬ್ 18.4 ಓವರ್ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ತಲುಪಿತು.

ಉತ್ತಮ ಆರಂಭ: ಆ್ಯರನ್ ಫಿಂಚ್ (20), ಶಿಖರ್ ಧವನ್ (45) ಮೊದಲ ವಿಕೆಟ್ಗೆ 65 ರನ್ ಕಲೆ ಹಾಕಿ ಉತ್ತಮ ಆರಂಭ ಒದಗಿಸಿಕೊಟ್ಟರು. ನಂತರ ಅಬ್ಬರಿಸಿದ ನಮನ್ ಓಜಾ (ಔಟಾಗದೆ 79, 36ಎಸೆತ, 4 ಬೌಂಡರಿ, 7 ಸಿಕ್ಸರ್) ತಂಡ ಸವಾಲಿನ ಮೊತ್ತ ಗಳಿಸಲು ಕಾರಣರಾದರು.

ಓಜಾ ಆಟಕ್ಕೆ ತಕ್ಕ ಬೆಂಬಲ ನೀಡಿದ ಡೇವಿಡ್ ವಾರ್ನರ್ 23 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್ ಸೇರಿದಂತೆ 44 ರನ್ ಕಲೆ ಹಾಕಿದರು. ಮೊದಲ 15 ಓವರ್ಗಳು ಕೊನೆಗೊಂಡಾಗ ಸನ್ರೈಸರ್ಸ್ 127 ರನ್ ಮಾತ್ರ ಗಳಿಸಿತ್ತು. ಕೊನೆಯ 30 ಎಸೆತಗಳಲ್ಲಿ ಕಲೆ ಹಾಕಿದ್ದು 78 ರನ್. ಓಜಾ ಅಬ್ಬರ ಹೇಗಿತ್ತು ಎನ್ನುವುದಕ್ಕೆ ಈ ಅಂಕಿಅಂಶಗಳೇ ಸಾಕ್ಷಿ. ಆದರೆ, ಪಂಜಾಬ್ ಗೆಲುವು ಪಡೆದ ಕಾರಣ ಓಜಾ ಆಟದ ವೈಭವ ಮಂಕಾಯಿತು.

ಪಂಜಾಬ್ ಅಬ್ಬರ: ಸವಾಲಿನ ಗುರಿಯಿದ್ದರೂ ಪಂಜಾಬ್ ಬ್ಯಾಟ್ಸ್ಮನ್ಗಳು ಅಬ್ಬರಿಸಿ ಗೆಲುವು ತಂದುಕೊಟ್ಟರು. ವೀರೇಂದ್ರ ಸೆಹ್ವಾಗ್ (4) ಅವರನ್ನು ಹೊರೆತು ಪಡಿಸಿದರೆ, ಉಳಿದ ಎಲ್ಲಾ ಬ್ಯಾಟ್ಸ್ಮನ್ಗಳು ರನ್ ಮಳೆ ಸುರಿಸಿದರು.

ಮನನ್ ವೊಹ್ರಾ (47, 20ಎ., 5ಬೌಂ., 2 ಸಿ.,), ವೃದ್ಧಿಮಾನ್ ಸಹಾ (54, 26ಎ., 8ಬೌಂ., 2 ಸಿ.,) ಮತ್ತು ಗ್ಲೇನ್ ಮ್ಯಾಕ್ಸ್ವೆಲ್ (43, 22ಎ., 2ಬೌಂ., 5ಸಿ.) ಅವರನ್ನು ಕಟ್ಟಿ ಹಾಕಲು ಸನ್ರೈಸರ್ಸ್ ಬೌಲರ್ಗಳನ್ನು ಇನ್ನಿಲ್ಲದಂತೆ ಪರದಾಡಿದರು. ಕೊನೆಗೂ ಅದು ಸಾಧ್ಯವಾಗಲಿಲ್ಲ.

ಅಪಾಯಕಾರಿ ಬ್ಯಾಟ್ಸ್ಮನ್ ಮ್ಯಾಕ್ಸ್ವೆಲ್ 10.2ನೇ ಓವರ್ನಲ್ಲಿ ಔಟ್ ಆಗಿದ್ದರು. ಆದರೆ, ಅಮಿತ್ ಮಿಶ್ರಾ ಓವರ್ನ ಆ ಎಸೆತ ನೋ ಬಾಲ್ ಆಗಿತ್ತು! ಔಟ್ ಆದ ವೇಳೆ 23 ರನ್ ಗಳಿಸಿದ್ದ ಆಸ್ಟ್ರೇಲಿಯಾದ ಆಟಗಾರ ಸಿಕ್ಕ ಅವಕಾಶ ಬಳಸಿಕೊಂಡು ಪಂಜಾಬ್ ಜಯದ ಹಾದಿಯನ್ನು ಸುಗಮ ಮಾಡಿದರು. ಡೇವಿಡ್ ಮಿಲ್ಲರ್ (ಔಟಾಗದೆ 24) ಮತ್ತು ಜಾರ್ಜ್ ಬೇಲಿ (ಔಟಾಗದೆ 35) ತಂಡವನ್ನು ಗೆಲುವಿನ ಸೇರಿಸಿದರು.

ರನ್ ಹೊಳೆ: ‘ಮುತ್ತಿನ ನಗರಿ’ ಖ್ಯಾತಿಯ ಹೈದರಾಬಾದ್ನಲ್ಲಿ ರನ್ ಹೊಳೆಯೇ ಹರಿಯಿತು. ಎರಡೂ ತಂಡಗಳಿಂದ 38.4 ಓವರ್ಗಳಲ್ಲಿ 416 ರನ್ ಹರಿದು ಬಂದವು. ಒಟ್ಟು 24 ಸಿಕ್ಸರ್ಗಳು ಸಿಡಿದವು!

ಸ್ಕೋರ್ ವಿವರ
ಸನ್ರೈಸರ್ಸ್ ಹೈದರಾಬಾದ್ 20 ಓವರ್ಗಳಲ್ಲಿ 5 ವಿಕೆಟ್ಗೆ 205

ಆ್ಯರನ್ ಫಿಂಚ್ ಬಿ ಶಿವಮ್ ಶರ್ಮ 20
ಶಿಖರ್ ಧವನ್ ಸಿ ಶಿವಮ್ ಶರ್ಮ ಬಿ ರಿಷಿ ಧವನ್ 45
ನಮನ್ ಓಜಾ ಔಟಾಗದೆ 79
ಡೇವಿಡ್ ವಾರ್ನರ್ ರನ್ ಔಟ್ (ಮನನ್ ವೊಹ್ರಾ/ ಸಂದೀಪ್ ಶರ್ಮ) 44
ಮೊಯ್ಸಿಸ್ ಹೆನ್ರಿಕ್ಸ್ ಸಿ ಡೇವಿಡ್ ಮಿಲ್ಲರ್ ಬಿ ಸಂದೀಪ್ ಶರ್ಮ 00
ಇರ್ಫಾನ್ ಪಠಾಣ್ ಸಿ ಡೇವಿಡ್ ಮಿಲ್ಲರ್ ಬಿ ರಿಷಿ ಧವನ್ 01
ಕರಣ್ ಶರ್ಮ ಔಟಾಗದೆ 01
ಇತರೆ: (ಲೆಗ್ ಬೈ–1, ವೈಡ್–11, ನೋಬಾಲ್–3) 15
ವಿಕೆಟ್ ಪತನ: 1–65 (ಫಿಂಚ್; 8.1), 2–88 (ಧವನ್; 11.1), 3–169 (ವಾರ್ನರ್; 18.1), 4–183 (ಹೆನ್ಸಿಕ್ಸ್; 18.4), 5–196 (ಪಠಾಣ್; 19.2)
ಬೌಲಿಂಗ್: ಸಂದೀಪ್ ಶರ್ಮ 4–0–65–1, ಮಿಷೆಲ್ ಜಾನ್ಸನ್ 4–0–26–0, ಶಿವಮ್ ಶರ್ಮ 4–0–31–1, ಅಕ್ಷರ್ ಪಟೇಲ್ 4–0–40–0, ರಿಷಿ ಧವನ್ 4–0–42–2.
ಕಿಂಗ್ಸ್ ಇಲೆವೆನ್ ಪಂಜಾಬ್ 18.4 ಓವರ್ಗಳಲ್ಲಿ
4 ವಿಕೆಟ್ಗೆ 211
ವೀರೇಂದ್ರ ಸೆಹ್ವಾಗ್ ಸಿ ಮತ್ತು ಬಿ ಭುವನೇಶ್ವರ್ ಕುಮಾರ್ 04
ಮನನ್ ವೊಹ್ರಾ ರನ್ ಔಟ್ (ಭುವನೇಶ್ವರ್ ಕುಮಾರ್) 47
ವೃದ್ಧಿಮಾನ್ ಸಹಾ ಸ್ಟಂಪ್ಡ್ ನಮನ್ ಓಜಾ ಬಿ ಕರಣ್ ಶರ್ಮ 54
ಗ್ಲೇನ್ ಮ್ಯಾಕ್ಸ್ವೆಲ್ ಸಿ ಡೇಲ್ ಸ್ಟೇನ್ ಬಿ ಅಮಿತ್ ಮಿಶ್ರಾ 43
ಡೇವಿಡ್ ಮಿಲ್ಲರ್ ಔಟಾಗದೆ 24
ಜಾರ್ಜ್ ಬೇಲಿ ಔಟಾಗದೆ 35
ಇತರೆ: (ಲೆಗ್ ಬೈ–3, ನೋ ಬಾಲ್–1) 04
ವಿಕೆಟ್ ಪತನ: 1–4 (ಸೆಹ್ವಾಗ್; 0.2), 2–95 (ಸಹಾ; 7.1), 3–125 (ವೊಹ್ರಾ; 9.1), 4–159 (ಮ್ಯಾಕ್ಸ್ವೆಲ್; 13.1).
ಬೌಲಿಂಗ್: ಭುವನೇಶ್ವರ್ ಕುಮಾರ್ 3.4–0–38–1, ಡೇಲ್ ಸ್ಟೇನ್ 4–0–51–0, ಮೊಯ್ಸಿಸ್ ಹೆನ್ರಿಕ್ಸ್ 2–0–36–0, ಕರಣ್ ಶರ್ಮ 4–0–46–1, ಅಮಿತ್ ಮಿಶ್ರಾ 4–0–32–1, ಇರ್ಫಾನ್ ಪಠಾಣ್ 1–0–5–0.
ಫಲಿತಾಂಶ: ಕಿಂಗ್ಸ್ ಇಲೆವೆನ್ ಪಂಜಾಬ್ಗೆ 6 ವಿಕೆಟ್ ಗೆಲುವು ಹಾಗೂ ಎರಡು ಪಾಯಿಂಟ್. ಪಂದ್ಯ ಶ್ರೇಷ್ಠ: ವೃದ್ಧಿಮಾನ್ ಸಹಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.