ಬಾಗಲಕೋಟೆ: ಬಾದಾಮಿಯಲ್ಲಿ ಮಾರ್ಚ್ 26 ಹಾಗೂ 27ರಂದು ನಡೆಯಲಿರುವ 3ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಹಿರಿಯ ಸಾಹಿತಿ ಕಂಠಿ ಹನುಮಂತರಾಯ ಅವರನ್ನು ಕಸಾಪ ವತಿಯಿಂದ ಸಮ್ಮೇನಕ್ಕೆ ಅಧಿಕೃತವಾಗಿ ಆಹ್ವಾನಿಸಲಾಯಿತು. ಹನುಮಂತರಾಯರ ಸ್ವಗ್ರಾಮ ಬೀಳಗಿ ತಾಲ್ಲೂಕಿನ ನಾಗರಾಳಕ್ಕೆ ಇತ್ತೀಚೆಗೆ ತೆರಳಿದ ಜಿಲ್ಲಾ ಕಸಾಪ ಪದಾಧಿಕಾರಿಗಳು ಅಧಿಕೃತ ಆಹ್ವಾನ ನೀಡಿದರು.

ಸಮ್ಮೇಳನಾಧ್ಯಕ್ಷ ಹನುಮಂತರಾಯ ಅವರನ್ನು ಸತ್ಕರಿಸಿ ಮಾತಮಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ಜಿ.ಕೋಟಿ, ಜಿಲ್ಲೆಯ ಹಿರಿಯ ತಲೆಮಾರಿನ ಸಾಹಿತಿಗಳಲ್ಲಿ ಕಂಠಿ ಹನುಮಂತರಾಯರ ಹೆಸರು ಮೇಲಸ್ತರದಲ್ಲಿದೆ ಎಂದರು. “ಸಾಹಿತ್ಯ, ರಂಗಭೂಮಿ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದಿರುವ ಹನುಮಂತರಾಯರು ಬಹುಮುಖ ಪ್ರತಿಭೆಯಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡು ಜೀವನದುದ್ದಕ್ಕೂ ಸಾಂಸ್ಕೃತಿಕ ಕಾಳಜಿಯನ್ನು ಉಳಿಸಿಕೊಂಡು ಬಂದಿರುವ ಇಂತಹ ಹಿರಿಯರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಅಭಿಮಾನ ಸಂಗತಿಯಾಗಿದೆ” ಎಂದು ಕೋಟಿ ಹೇಳಿದರು.

ನ್ಯಾಯವಾದಿ ಪಿ.ಎಂ.ಬಾಂಗಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಪ್ರಕಾಶ ಖಾಡೆ, ಗೌರವ ಕೋಶಾಧ್ಯಕ್ಷ ಕೆ.ಎಂ.ಗುಡದಿನ್ನಿ, ಸಾಹಿತಿ ಡಾ.ಮೈನುದ್ದೀನ್ ರೇವಡಿಗಾರ, ಬೀಳಗಿ ಕಸಾಪ ಅಧ್ಯಕ್ಷ ಗುರುರಾಜ ಲೂತಿ, ಕವಿ ಸೋಮಲಿಂಗ ಬೇಡರ, ಜ್ಯೋತಿಬಾ ಅವತಾಡೆ, ಸುಭಾಸ್ ಸವದಿ, ಕೆ.ಎನ್.ಬಡಿಗೇರ, ಬಿ.ಬಿ.ನಾಯಕ, ಡಿ.ಕೆ.ಕರಡಿಗುಡ್ಡ, ಎಸ್.ಕೆ.ರಾಠೋಡ, ಶೇಖರ ಗೊಳಸಂಗಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.