ಮೈಸೂರು: ‘ಸಿಂಹ ಶ್ರೀಮಂತರ ಮನೆ ಮುಂದೆ ಮಲಗಿದೆ. ಹುಲಿ ಬಡವರ ಮನೆ ಬಾಗಿಲ ಮುಂದೆ ಇದೆ. ಈ ಚುನಾವಣೆ ಸಿಂಹ–ಹುಲಿ ನಡುವಣ ಕದನವಲ್ಲ; ಸಿದ್ಧಾಂತಗಳ ನಡುವಣ ಸಂಘರ್ಷ’ ಎಂದು ಕೊಡಗು–ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಸಂಸದ ಅಡಗೂರು ಎಚ್. ವಿಶ್ವನಾಥ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪತ್ರಕರ್ತ ಪ್ರತಾಪ ಸಿಂಹ ಅವರು ಬಿಜೆಪಿಯಿಂದ ನಿಮ್ಮ ವಿರುದ್ಧ ಸ್ಪರ್ಧಿಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.

‘ನಾನು ನಾಲ್ಕು ಪುಸ್ತಕ ಬರೆದಿದ್ದೇನೆ. ಚುನಾವಣೆ ಮುಗಿದ ನಂತರ ಮತ್ತೊಂದು ಪುಸ್ತಕ ಹೊರತರುತ್ತೇನೆ. ಅಲ್ಪಸ್ವಲ್ಪ ಅಕ್ಷರ ನನಗೂ ಗೊತ್ತಿದೆ. ನಾನು ಬದುಕನ್ನು ಅರಳಿಸುವ ಅಕ್ಷರ ಬರೆಯುತ್ತೇನೆ. ಪ್ರತಾಪ ಸಿಂಹ ಬದುಕನ್ನು ಕೆರಳಿಸುವ ಅಕ್ಷರ ಬರೆಯುತ್ತಾರೆ. ನಮ್ಮಿಬ್ಬರ ನಡುವಣ ವ್ಯತ್ಯಾಸ ಇಷ್ಟೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.