ವಿಶ್ವ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಆರಂಭಕ್ಕೆ ಎರಡು ತಿಂಗಳು ಬಾಕಿ ಉಳಿದಿವೆ. ತವರಿನ ನೆಲದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟೂರ್ನಿಯಲ್ಲಿ ಆತಿಥೇಯ ಭಾರತ ತಂಡ ಪ್ರಶಸ್ತಿ ಗೆಲ್ಲುವ ಹೆಗ್ಗುರಿ ಹೊಂದಿದೆ. ಇದಕ್ಕಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶಕ್ತಿಯುತ ತಂಡ ಕಟ್ಟಲು ಮುಂದಾಗಿದೆ.

ಈ ಉದ್ದೇಶವನ್ನು ಮುಂದಿಟ್ಟುಕೊಂಡು ಬಿಸಿಸಿಐ ಫೆಬ್ರುವರಿಯಲ್ಲಿ ನೆರೆಯ ರಾಷ್ಟ್ರ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಚುಟುಕು ಸರಣಿಯನ್ನು ಆಯೋಜಿಸಿದೆ.ಈ ಸರಣಿ ಕೇವಲ ಭಾರತಕ್ಕೆ ಮಾತ್ರವಲ್ಲ. ಸಿಂಹಳೀಯ ತಂಡಕ್ಕೂ ತುಂಬಾ ಮಹತ್ವದ್ದು. ಏಕೆಂದರೆ ಎರಡೂ ತಂಡಗಳು ಈಗ ಸಂಕಷ್ಟದ ಹಾದಿಯಲ್ಲಿವೆ.

ಆಸ್ಟ್ರೇಲಿಯಾದಲ್ಲಿ ಹೋದ ವಾರ ಕೊನೆಗೊಂಡ ಏಕದಿನ ಕ್ರಿಕೆಟ್ ಸರಣಿಯಲ್ಲಿ ದೋನಿ ಬಳಗ ಕಾಂಗರೂಗಳ ನಾಡಿನ ತಂಡದ ಎದುರು ಹೀನಾಯವಾಗಿ ಸರಣಿ ಸೋತಿತ್ತು. ಈ ಸೋಲು ಮಹಿ ಬಳಗದ ವಿಶ್ವಾಸಕ್ಕೆ ದೊಡ್ಡ ಪೆಟ್ಟು ನೀಡಿದೆ. ಈ ಆಘಾತದಿಂದ ಚೇತರಿಸಿಕೊಳ್ಳಲು ಭಾರತಕ್ಕೆ ಈಗ ಸರಣಿ ಗೆಲುವಿನ ಅಗತ್ಯವಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಅಷ್ಟೇನು ಬಲಿಷ್ಠವಲ್ಲದ ಲಂಕಾ ತಂಡಕ್ಕೆ ಸರಣಿ ಆಡಲು ಆಹ್ವಾನ ನೀಡಿದೆ.

ಸಿಂಹಳೀಯ ತಂಡದ ಸ್ಥಿತಿಯೂ ಭಾರತಕ್ಕಿಂತ ಭಿನ್ನವಾಗಿಲ್ಲ. ಈ ತಂಡ ಈ ತಿಂಗಳ ಆರಂಭದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟ್ವೆಂಟಿ–20 ಸರಣಿಗಳಲ್ಲಿ ಪರಾಭವ ಗೊಂಡಿತ್ತು. ಈ ಸೋಲುಗಳು ಲಂಕಾ ತಂಡದ ಜಂಗಾ ಬಲವೇ ಹುದುಗಿಹೋಗುವಂತೆ ಮಾಡಿರುವುದು ಸುಳ್ಳಲ್ಲ.

ವಿಶ್ವ ಟ್ವೆಂಟಿ–20ಯಂತಹ ಮಹತ್ವದ ಟೂರ್ನಿಗೂ ಮುನ್ನ ರಾಷ್ಟ್ರೀಯ ತಂಡಗಳನ್ನು ಬಲಪಡಿಸಲು ಉಭಯ ಕ್ರಿಕೆಟ್ ಮಂಡಳಿಗಳು ಪಣತೊಟ್ಟಿವೆ. ಹೀಗಾಗಿ ಕಳೆದುಕೊಂಡಿರುವ ವಿಶ್ವಾಸವನ್ನು ಮರಳಿ ಗಳಿಸಲು ಎರಡೂ ತಂಡಗಳಿಗೆ ಈ ಸರಣಿಯ ಮೂಲಕ ವೇದಿಕೆ ಕಲ್ಪಿಸಿಕೊಟ್ಟಿವೆ.

ಮುಜುಗರದಿಂದ ಪಾರಾಗುವ ಉಪಾಯ
ಬಿಸಿಸಿಐ ಏನೇ ಮಾಡಿದರೂ ಅದರ ಹಿಂದೆ ಒಂದಲ್ಲ ಒಂದು ತಂತ್ರ ಇದ್ದೇ ಇರುತ್ತದೆ. ಲಂಕಾ ವಿರುದ್ಧದ ಸರಣಿಯ ಆಯೋಜನೆಯ ಹಿಂದೆಯೂ ಅಂತಹ ದ್ದೊಂದು ಅಂಶ ಅಡಕವಾಗಿದೆ. ತವರಿನಲ್ಲಿ ವಿಶ್ವಕಪ್, ವಿಶ್ವ ಟ್ವೆಂಟಿ–20ಯಂತಹ ಪ್ರಮುಖ ಟೂರ್ನಿಗಳು ಆಯೋಜನೆಗೊಂಡಾಗ ಆತಿಥೇಯ ರಾಷ್ಟ್ರದ ತಂಡಗಳು ಪ್ರಶಸ್ತಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕುವುದು ಸಹಜ.

ಒಂದು ವೇಳೆ ತಂಡ ಪರಿಣಾಮಕಾರಿ ಆಟ ಆಡದೆ ಲೀಗ್ ಹಂತದಲ್ಲೆ ಹೊರಬಿದ್ದರೆ ಟೀಕಾ ಪ್ರಹಾರವೇ ಹರಿದುಬರುತ್ತದೆ.
ಸದ್ಯ ಆಸ್ಟ್ರೇಲಿಯಾ ನೆಲದಲ್ಲಿ ಏಕದಿನ ಸರಣಿ ಸೋತು ಟೀಕಾಕಾರರ ಬಾಯಿಗೆ ಆಹಾರವಾಗಿರುವ ಭಾರತ ತಂಡ ವಿಶ್ವ ಟ್ವೆಂಟಿ–20ಯಲ್ಲೂ ಮುಗ್ಗರಿಸದಿರಲಿ ಎಂಬ ಮುಂದಾಲೋಚನೆ ಇಟ್ಟುಕೊಂಡು ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ ಎಂಬುದು ಗಮನಿಸಬೇಕಾದ ಅಂಶ.

ಇಲ್ಲದೇ ಹೋಗಿದ್ದರೆ ವಿಶ್ವದ ಶ್ರೀಮಂತ ಮಂಡಳಿ ತುರ್ತಾಗಿ ಸರಣಿ ಆಯೋಜಿಸಲು ಖಂಡಿತಾ ಮುಂದಾಗು ತ್ತಿರಲಿಲ್ಲ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ.

ಗಾಯಗೊಂಡಿರುವ ಸಿಂಹಗಳು..
ಕುಮಾರ ಸಂಗಕ್ಕಾರ, ಮಾಹೇಲ ಜಯವರ್ಧನೆ ಅವರಂತಹ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ನಿವೃತ್ತಿಯ ಬಳಿಕ ಲಂಕಾ ತಂಡ ಅಕ್ಷರಶಃ ತನ್ನ ಛಾಪು ಕಳೆದುಕೊಂಡಿದೆ. ಇತ್ತೀಚಿನ ಸರಣಿಗಳಲ್ಲಿ ಲಂಕಾದಿಂದ ಮೂಡಿಬಂದಿರುವ ಪ್ರದರ್ಶನವೇ ಇದಕ್ಕೆ ಸಾಕ್ಷಿ.
ಇದರ ಜತೆಗೆ ಸ್ಪಾಟ್ ಫಿಕ್ಸಿಂಗ್ ಪಿಡುಗು ಈ ತಂಡವನ್ನು ಜರ್ಜರಿತವನ್ನಾಗಿಸಿದೆ. ಆರಂಭಿಕ ಆಟಗಾರ ಕುಶಾಲ್ ಪೆರೇರಾ ಮತ್ತು ಅನುಭವಿ ಬೌಲರ್ ರಂಗನಾ ಹೆರಾತ್ ಫಿಕ್ಸಿಂಗ್ನಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ. ಈ ಹಗರಣ ದ್ವೀಪ ರಾಷ್ಟ್ರದ ಕ್ರಿಕೆಟ್ ಚಟುವಟಿಕೆಗಳ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ.

ಈ ಹಗರಣ ಆಟಗಾರರನ್ನು ಮಾನಸಿಕವಾಗಿ ಕುಗ್ಗಿಹೋಗುವಂತೆ ಮಾಡಿರುವ ಜತೆಗೆ ತಂಡದ ಪ್ರದರ್ಶನದ ಮೇಲೂ ಕೆಟ್ಟ ಪರಿಣಾಮ ಬೀರಿದೆ. 2014ರಲ್ಲಿ ಬಾಂಗ್ಲಾದೇಶದಲ್ಲಿ ನಡೆದಿದ್ದ ವಿಶ್ವ ಟ್ವೆಂಟಿ–20 ಟೂರ್ನಿಯ ಫೈನಲ್ನಲ್ಲಿ ಭಾರತವನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಎತ್ತಿಹಿಡಿದಿದ್ದ ಲಂಕಾ ತಂಡದ ಮುಂದೆ ಈಗ ಪ್ರಶಸ್ತಿ ಉಳಿಸಿಕೊಳ್ಳುವ ಬಹುದೊಡ್ಡ ಸವಾಲಿದೆ. ಸತತ ಸೋಲು ಹಾಗೂ ಫಿಕ್ಸಿಂಗ್ ಕಳಂಕದಿಂದ ಮೈಕೊಡವಿ ನಿಲ್ಲಲು ದ್ವೀಪ ರಾಷ್ಟ್ರದ ತಂಡಕ್ಕೆ ಈ ಸರಣಿ ಒಂದು ಉತ್ತಮ ಅವಕಾಶ.

ಸಂಬಂಧ ವೃದ್ಧಿಗೂ ಸಹಕಾರಿ...
ಈ ಸರಣಿ ಕೇವಲ ಉಭಯ ರಾಷ್ಟ್ರಗಳ ತಂಡಗಳಿಗೆ ಅಭ್ಯಾಸದ ವೇದಿಕೆ ಯಾಗಿ ಮಾತ್ರವಲ್ಲದೆ ಎರಡೂ ಕ್ರಿಕೆಟ್ ಮಂಡಳಿಗಳ ನಡುವೆ ಉತ್ತಮ ಬಾಂಧವ್ಯ ಏರ್ಪಡಲೂ ಸಹಕಾರಿಯಾಗಲಿದೆ. ಹೋದ ವರ್ಷ ಭಾರತ ಪ್ರವಾಸ ಕೈಗೊಂಡಿದ್ದ ವೆಸ್ಟ್ ಇಂಡೀಸ್ ತಂಡ ಸರಣಿಯನ್ನು ಅರ್ಧಕ್ಕೆ ಮೊಟಕು ಗೊಳಿಸಿ ತವರಿಗೆ ಹಿಂದಿರುಗಿತ್ತು. ಇದರಿಂದ ಬಿಸಿಸಿಐಗೆ ಭಾರೀ ಮುಜುಗರವಾಗಿತ್ತು. ಇದರಿಂದ ಪಾರಾಗಲು ಬಿಸಿಸಿಐ ಕೂಡಲೇ ಲಂಕಾ ಮಂಡಳಿಗೆ ಸರಣಿ ಆಡಲು ಆಹ್ವಾನ ನೀಡಿತ್ತು. ಭಾರತದ ಮನವಿಗೆ ಸ್ಪಂದಿಸಿದ್ದ ಲಂಕಾ ಸರಣಿಯಲ್ಲಿ ಭಾಗವಹಿಸಿತ್ತು.

ಇದಕ್ಕೆ ಪ್ರತಿಯಾಗಿ ಭಾರತ ಹೋದ ವರ್ಷದ ಸೆಪ್ಟೆಂಬರ್ನಲ್ಲಿ ಲಂಕಾ ಪ್ರವಾಸ ಕೈಗೊಂಡು ಅಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿತ್ತು. ಇದರ ಮುಂದುವರಿದ ಭಾಗವಾಗಿ ಎರಡೂ ರಾಷ್ಟ್ರಗಳ ಕ್ರಿಕೆಟ್ ಮಂಡಳಿಗಳು ಈಗ ಟ್ವೆಂಟಿ–20 ಸರಣಿ ಆಯೋಜಿಸಿವೆ. ಈ ಮೂಲಕ ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲು ಮುಂದಾಗಿರುವುದು ಗಮನಾರ್ಹ.

ಭಾರತದ ಜತೆ ಯಾವ ತಂಡವೇ ಸರಣಿ ಆಡಿದರೂ ಪ್ರಾಯೋಜಕತ್ವ ಸೇರಿದಂತೆ ಇತರೆ ಹಲವು ಮೂಲಗಳಿಂದ ಹಣದ ಹೊಳೆಯೇ ಹರಿದುಬರುತ್ತದೆ. ಈ ದೃಷ್ಟಿಯಲ್ಲಿ ಭಾರತಕ್ಕಿಂತಲೂ ಈಗಾಗಲೇ ಆರ್ಥಿಕ ಸಂಕಷ್ಟದಿಂದ ನಲುಗಿರುವ ಸಿಂಹಳೀಯ ನಾಡಿನ ತಂಡದ ಪಾಲಿಗೆ ಈ ಸರಣಿ ಹೆಚ್ಚು ಪ್ರಯೋಜನಕಾರಿ ಎಂಬುದು ಸತ್ಯ.

ಕಾಡುತ್ತಿರುವ ಆ ಸೋಲು..
2014ರ ವಿಶ್ವ ಟ್ವೆಂಟಿ–20 ಟೂರ್ನಿಯ ಫೈನಲ್ ಪಂದ್ಯವನ್ನು ಯಾರೂ ಅಷ್ಟು ಸುಲಭವಾಗಿ ಮರೆತಿರಲಿಕ್ಕಿಲ್ಲ. ಬಾಂಗ್ಲಾದೇಶದ ಢಾಕಾದಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಭಾರತ ತಂಡ ಲಂಕಾ ವಿರುದ್ಧ 6 ವಿಕೆಟ್ಗಳಿಂದ ಸೋತು ಎರಡನೇ ಬಾರಿ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು.

ಮೊದಲು ಬ್ಯಾಟ್ ಮಾಡಿದ್ದ ಭಾರತ 20 ಓವರ್ಗಳಲ್ಲಿ 4 ವಿಕೆಟ್ಗೆ 130ರನ್ ಪೇರಿಸಿತ್ತು. ವೇಗದ ಆಟಕ್ಕೆ ಹೆಸರಾಗಿರುವ ಭಾರತದ ಯುವರಾಜ್ ಸಿಂಗ್ ಆ ಪಂದ್ಯದಲ್ಲಿ 21 ಎಸೆತಗಳಲ್ಲಿ 11ರನ್ ಗಳಿಸಿ ಟೀಕೆಗೆ ಗುರಿಯಾಗಿದ್ದರು. ಅನುಭವಿ ಸಂಗಕ್ಕಾರ ಅವರ (52) ಅರ್ಧಶತಕದ ಬಲದಿಂದ ಲಂಕಾ 17.5 ಓವರ್ಗಳಲ್ಲಿಯೇ ಗುರಿ ಮುಟ್ಟಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಆ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ಭಾರತಕ್ಕೆ ಈ ಸರಣಿಯ ಮೂಲಕ ಉತ್ತಮ ವೇದಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.