ಮಂಗಳವಾರ, ಜೂನ್ 22, 2021
27 °C

ಸೀಮಾಂಧ್ರ: ಕೋಪ ಶಮನಕ್ಕೆ ಕಾಂಗ್ರೆಸ್‌ನಿಂದ ಬಸ್‌ ಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |


ಹೈದರಾಬಾದ್‌ (ಪಿಟಿಐ): ಪಕ್ಷದ ಕಾರ್ಯ­­ಕರ್ತರು ಮತ್ತು ಮತ­ದಾರರನ್ನು ಭೇಟಿ ಮಾಡಲು ಕೇಂದ್ರ ಸಚಿವ ಚಿರಂಜೀವಿ ಮತ್ತು ಸೀಮಾಂಧ್ರ ಭಾಗದ ಕಾಂಗ್ರೆಸ್‌ ನಾಯಕರು ಕರಾವಳಿ ಆಂಧ್ರ ಮತ್ತು ರಾಯಲಸೀಮಾ ಪ್ರದೇಶ­­­ದಲ್ಲಿ ‘ಬಸ್ ಯಾತ್ರೆ’ ಕೈಗೊಳ್ಳಲಿ­ದ್ದಾರೆ. 

 

ಆಂಧ್ರವಿಭಜನೆಗೆ ಕೈಗೊಂಡ ಏಕ­ಪಕ್ಷೀಯ ನಿರ್ಧಾರದಿಂದ ಸಿಟ್ಟಿಗೆದ್ದಿ­ರುವ ಜನರ ಕೋಪ ಶಮನ ಮಾಡಲು ಕೈಗೊಂಡಿರುವ ಯಾತ್ರೆ ಇದಾಗಿದೆ. 

 

‘ಶ್ರೀಕಾಕುಳಂದಿಂದ ಅನಂತಪುರದ­ವರೆಗೆ ಇದೇ 21ರಿಂದ 27ರ ವರೆಗೆ ಪಕ್ಷದ ಕಾರ್ಯಕರ್ತರ ಸಭೆ ಸಂಘಟಿಸ­ಲಾಗಿದೆ.  ಆ ಸಭೆಯಲ್ಲಿ ಪಕ್ಷದ ಕಾರ್ಯ­ಕರ್ತರ ನೈತಿಕ ಸ್ಥೈರ್ಯ ಹೆಚ್ಚಿಸಲಾಗು­ವುದು’ ಎಂದು ಪಕ್ಷ ಹೇಳಿದೆ.

 

‘ ಆಂಧ್ರಪ್ರದೇಶ ವಿಭಜನೆ ನಿರ್ಧಾರದ ಉದ್ದೇಶ ಮತ್ತು ವಿಭಜನೆಯಿಂದ ಯಾವ ಪ್ರಯೋಜನ ಆಗಲಿದೆ ಎನ್ನುವುದನ್ನು ನಾವು 

ಜನರಿಗೆ ತಿಳಿಸುತ್ತೇವೆ’ ಎಂದು ಸೀಮಾಂಧ್ರ  ಕಾಂಗ್ರೆಸ್‌ ಪ್ರಚಾರ ಸಮಿತಿಯ ಅಧ್ಯಕ್ಷ ಚಿರಂಜೀವಿ ಸುದ್ದಿಗಾರರಿಗೆ ತಿಳಿಸಿದರು.

 

‘ಸೀಮಾಂಧ್ರದ ಪ್ರತಿ ಜಿಲ್ಲೆಗೆ ಹೋಗಿ ಕಾರ್ಯಕರ್ತರನ್ನು ಭೇಟಿ ಮಾಡಿ ಈಗಿನ ಬೆಳವಣಿಗೆ ಮತ್ತು ಮುಂದೆ ಕೈಗೊಳ್ಳುವ ನಿರ್ಧಾರ ಅವರಿಗೆ ತಿಳಿಸಲು ಈ ಬಸ್‌ ಯಾತ್ರೆ ಕೈಗೊಳ್ಳಲಾಗಿದೆ’ ಎಂದು ಹಿರಿಯ ಕಾಂಗ್ರೆಸ್‌ ನಾಯಕ 

ಅನಂ ರಾಮನಾರಾಯಣ ರೆಡ್ಡಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.