ನವದೆಹಲಿ(ಪಿಟಿಐ): ಮುಂದಿನ ದೀಪಾವಳಿ ವೇಳೆವರೆಗೂ ಚಾಲ್ತಿಯಲ್ಲಿರುವ `ಸಮ್ವತ್ 2069~ (ನರಕ ಚತುರ್ದಷಿ ಮರುದಿನ ಆರಂಭವಾಗಿರುವ ಹಿಂದೂ ಕ್ಯಾಲೆಂಡರ್) ಅವಧಿಯಲ್ಲಿ ಭಾರತೀಯ ಷೇರುಪೇಟೆ ಉತ್ತಮ ಪ್ರಗತಿ ಕಾಣಲಿದೆ. ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ಇ)ದ ಸಂವೇದಿ ಸೂಚ್ಯಂಕ ಮತ್ತೆ 20000 ಅಂಶಗಳ ಗಡಿ ದಾಟಲಿದೆ. ಅಲ್ಲದೆ 22000-24000 ಅಂಶಗಳಲ್ಲಿ ವಹಿವಾಟು ನಡೆಸಲಿದೆ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ.

`ಷೇರುಪೇಟೆಯೀಗ ಭಾರಿ ತೇಜಿಯಲ್ಲಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಹೆಚ್ಚಿನ ಬಂಡವಾಳ ಹರಿದುಬರುತ್ತಿರುವುದೂ ಪೇಟೆಯ ಉತ್ಸಾಹ ಹೆಚ್ಚಿಸಿದೆ. ಕೇಂದ್ರ ಸರ್ಕಾರವೂ ಇನ್ನಷ್ಟು ಸುಧಾರಣೆ ಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆ ಇದ್ದು, ಮಾರುಕಟ್ಟೆ ಇನ್ನಷ್ಟು ಎತ್ತರಕ್ಕೆ ಏರಲಿದೆ. ಮುಂದಿನ ದೀಪಾವಳಿಗೂ ಮುನ್ನ ಸಂವೇದಿ ಸೂಚ್ಯಂಕ 22000ದಿಂದ 24000 ಅಂಶಗಳ ಮಟ್ಟಕ್ಕೆ ಏರಲಿದೆ ಎಂದು `ರಿಲಿಗೇರ್ ಸೆಕ್ಯುರಿಟೀಸ್~ನ ರಾಜೇಶ್ ಜೈನ್ ಆಶಾವಾದ ವ್ಯಕ್ತಪಡಿಸಿದ್ದಾರೆ.

ಆದರೆ, ಈಗ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಇಳಿಮುಖವಾಗಿರುವುದೇ ಚಿಂತೆಗೆ ಕಾರಣವಾಗಿದೆ ಎಂದೂ ಅವರು ಹೇಳಿದ್ದಾರೆ.ಸಂವೇದಿ ಸೂಚ್ಯಂಕ ಸದ್ಯ 18,618 ಅಂಶಗಳಲ್ಲಿದೆ. 2008ರ ಜನವರಿಯಲ್ಲಿ ದಾಖಲೆಯ ಮಟ್ಟವಾದ 21,206ರಲ್ಲಿ ಇದ್ದಿತು.`ಏಂಜೆಲ್ ಬ್ರೋಕಿಂಗ್~ ಸಂಸ್ಥೆ ಅಂದಾಜು ಇನ್ನೊಂದು ರೀತಿ ಇದೆ.

2014ನೇ ಹಣಕಾಸು ವರ್ಷ ಆರಂಭದ ವೇಳೆ, ಷೇರು ಮಾರುಕಟ್ಟೆ 20300 ಅಂಶಗಳ ಮಟ್ಟದಲ್ಲಿರಲಿದೆ ಎಂದಿದೆ ಆ ಸಂಸ್ಥೆ.`ಕೇಂದ್ರ ಸರ್ಕಾರ ಇತ್ತೀಚೆಗೆ ಕೈಗೊಂಡ ಸುಧಾರಣ ಕ್ರಮಗಳಿಗೆ ಮಾರುಕಟ್ಟೆ ಸಕಾರಾತ್ಮಕವಾಗಿ ಸ್ಪಂದಿಸಿದೆ. `ಯೂರೋ~ ವಲಯದಲ್ಲಿಯೂ ಚೇತರಿಕೆ ಕಂಡುಬರುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಆರ್ಥಿಕ ಪರಿಸ್ಥಿತಿಇನ್ನಷ್ಟು ಸುಧಾರಿಸುವ ಸಾಧ್ಯತೆ ಇದ್ದು, ಮಾರುಕಟ್ಟೆಯಲ್ಲಿಯೂ ಉತ್ತಮ ತೇಜಿ ಕಾಣಬಹುದಾಗಿದೆ~ ಎನ್ನುವುದು ಏಂಜೆಲ್ ಬ್ರೋಕಿಂಗ್ ಅಧ್ಯಕ್ಷ ದಿನೇಶ್ ಥಕ್ಕರ್ ಅವರ ವಿಶ್ಲೇಷಣೆ.

ಮಾರುಕಟ್ಟೆ ಸಂಶೋಧನಾ ಸಂಸ್ಥೆ `ಸಿಎನ್ಐ~ನ ಅಧ್ಯಕ್ಷ ಕಿಶೋರ್ ಓಸ್ವಾಲ್ ಅವರೂ, `ಹೊಸ ವರ್ಷವೇ ಷೇರುಪೇಟೆ ಪಾಲಿಗೆ ಹುರುಪು ತರಲಿದೆ. ನಿಫ್ಟಿ 6400 ಮತ್ತು ಸೆನ್ಸೆಕ್ಸ್ 24000 ಅಂಶಗಳ ಮಟ್ಟಕ್ಕೇರಲಿವೆ~ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಏಳು-ಬೀಳು: 2011ರಲ್ಲಿ ದೇಶದ ಷೇರುಪೇಟೆಯಲ್ಲಿನ ಒಟ್ಟಾರೆ ಷೇರುಗಳ ಮೌಲ್ಯ ಶೇ 25ರಷ್ಟು ನಷ್ಟ ಅನುಭವಿಸಿದ್ದರಿಂದ ಹೂಡಿಕೆದಾರರು ಸಾಕಷ್ಟು ಹಣ ಕಳೆದುಕೊಂಡಿದ್ದರು. 2012ರಲ್ಲಿ ಷೇರುಪೇಟೆ ಶೇ 20ರಷ್ಟು ವೃದ್ಧಿ ಕಂಡಿರುವುದು ಹೂಡಿಕೆದಾರರ ಪಾಲಿಗೆ ಆಶಾವಾದ ಮೂಡಿಸಿದೆ ಎನ್ನುವುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.