ಸೋಮವಾರ, ಮೇ 23, 2022
26 °C

ಸ್ಟೀಫನ್ ಫ್ಲೆಮಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೋನಿ ಒಬ್ಬ ‘ಗೇಮ್ ಚೇಂಜರ್’ನಾನು ಮಹೇಂದ್ರ ಸಿಂಗ್ ದೋನಿ ಅವರನ್ನು ಮೊದಲ ಬಾರಿಗೆ ಟಿವಿನಲ್ಲಿ ಯಾವುದೋ ಪಂದ್ಯದ ಹೈಲೈಟ್ಸ್ ಶೋದಲ್ಲಿ ನೋಡಿದ್ದು. ಅದು ಯಾವಾಗ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ. ಅಂದು ಅವರು ಹೊಂದಿದ್ದ ಹೇರ್ ಸ್ಟೈಲ್ ಈಗಲೂ ನನಗೆ ಚೆನ್ನಾಗಿ ನೆನಪಿದೆ. ನೀಳಕೂದಲು ಅವರ ಭುಜದ ತನಕ ಇತ್ತು. ಅಂತರರಾಷ್ಟ್ರೀಯ ಕ್ರಿಕೆಟಿಗನೊಬ್ಬ ಅಂತಹ ಹೇರ್‌ಸ್ಟೈಲ್ ಹೊಂದಿರುವುದು ಅಪರೂಪವಾಗಿತ್ತು.ಜಿಂಬಾಬ್ವೆಯ ಹರಾರೆಯಲ್ಲಿ 2005 ರಲ್ಲಿ ನಡೆದ ತ್ರಿಕೋನ ಏಕದಿನ ಸರಣಿಯಲ್ಲಿ ನಾನು ಅವರ ವಿರುದ್ಧ ಮೊದಲ ಬಾರಿ ಆಡಿದೆ. ಅವರ ಬ್ಯಾಟಿಂಗ್ ಶೈಲಿ ಅಸಾಂಪ್ರದಾಯಿಕ ಎಂಬುದು ಹಲವರ ಹೇಳಿಕೆ. ಆದರೆ ನನಗೆ ಅಂತದ್ದೇನೂ ಕಂಡುಬರಲಿಲ್ಲ. ಚೆಂಡನ್ನು ಕೊನೆಯ ಕ್ಷಣದಲ್ಲಿ ಬಡಿದಟ್ಟುವುದು ಅವರು ಅಳವಡಿಸಿಕೊಂಡಿರುವ ಶೈಲಿ.

ಬ್ಯಾಟಿಂಗ್ ವೇಳೆ ಅವರ ಕಾಲುಗಳಲ್ಲಿ ಹೆಚ್ಚಿನ ಚಲನೆ ಕಂಡುಬರುವುದಿಲ್ಲ. ಚೆಂಡನ್ನು ಸೂಕ್ಷ್ಮವಾಗಿ ಗಮನಿಸಿ ಕೊನೆಯ ಕ್ಷಣದಲ್ಲಿ ಬಲವಾಗಿ ಬಡಿದಟ್ಟುವರು. ಚೆಂಡಿನ ಚಲನೆಯನ್ನು ಚೆನ್ನಾಗಿ ಗುರುತಿಸಬಲ್ಲ ಸಾಮರ್ಥ್ಯ ಅವರಿಗಿದೆ. ವಿಕೆಟ್ ಕೀಪರ್‌ನ ಜವಾಬ್ದಾರಿಯನ್ನೂ ನಿರ್ವಹಿಸುವ ಕಾರಣ ಅವರು ಈ ಕಲೆಯನ್ನು ಕರಗತಮಾಡಿಕೊಂಡಿದ್ದಾರೆ.ಅವರೊಬ್ಬ ‘ಗೇಮ್ ಚೇಂಜರ್’ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಪಂದ್ಯದ ಪರಿಸ್ಥಿತಿಯನ್ನು ಬಹಳ ಬೇಗನೇ ಅಂದಾಜಿಸಿ ಅದಕ್ಕೆ ತಕ್ಕಂತೆ ಆಡುವುದು ಅವರಿಗೆ ತಿಳಿದಿದೆ. ದೋನಿ ಕ್ರಿಕೆಟ್‌ನ ಎಲ್ಲ ಪ್ರಕಾರಗಳಲ್ಲೂ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿದ್ದಾರೆ. ಇದೇ ಕಾರಣ ಅವರು ತಂಡದ ಬೆಲೆಯುಳ್ಳ ಆಟಗಾರ ಎನಿಸಿದ್ದಾರೆ. ಒತ್ತಡವನ್ನು ಸಮರ್ಥವಾಗಿ ಮೆಟ್ಟಿನಿಂತು ಬಳಿಕ ಮರುಹೋರಾಟ ನಡೆಸುವ ತಾಕತ್ತನ್ನು ಹೊಂದಿದ್ದಾರೆ.ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಆಗಿರುವ ಕಾರಣ ನನಗೆ ಅವರು ಅಭ್ಯಾಸ ನಡೆಸುವುದನ್ನು ಹತ್ತಿರದಿಂದ ನೋಡಲು ಸಾಧ್ಯವಾಗಿದೆ. ದೋನಿ ಕಠಿಣ ಪ್ರಯತ್ನ ನಡೆಸುವ ಆಟಗಾರ.

-ಗೇಮ್ ಪ್ಲಾನ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.