ಗುರುವಾರ , ಜೂನ್ 24, 2021
29 °C

ಹಂಪಾಪುರ ಜಾತ್ರೆಗೆ ಅದ್ಧೂರಿ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀರೂರು: ಕಡೂರು ತಾಲ್ಲೂಕು ಸಿಂಗಟಗೆರೆ ಹೋಬಳಿ ಹಂಪಾಪುರದಲ್ಲಿ ನಡೆಯಲಿರುವ ಲಕ್ಷ್ಮಿನರಸಿಂಹಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಜಾತ್ರಾ ಮಹೋತ್ಸವಕ್ಕೆ ತೆರಳುವ ಭಕ್ತರಿಗೆ ಬುಧವಾರ ಬೀರೂರು ಪಟ್ಟಣದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.ಬೀರೂರು ಹೋಬಳಿ ಹುಲ್ಲೇಹಳ್ಳಿ, ಜೋಡಿ ತಿಮ್ಮಾಪುರ, ಗಾಳಿಹಳ್ಳಿ, ದೋಗೇಹಳ್ಳಿ, ಇಂಗ್ಲಾರನಹಳ್ಳಿ, ದೊಡ್ಡಘಟ್ಟ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ತೆಲುಗು ಗೌಡ ಜನಾಂಗದವರು ಕುಟುಂಬ ಸಮೇತ, ತಿಮ್ಮಾಪುರ ಬಸವೇಶ್ವರ, ಬೋಕಿಕೆರೆ ಹನುಮಂತಸ್ವಾಮಿ, ಇಂಗ್ಲಾರನಹಳ್ಳಿ ಮೈಲಾರಲಿಂಗಸ್ವಾಮಿ, ಗಾಳಿಹಳ್ಳಿ ರಂಗನಾಥಸ್ವಾಮಿ, ಸೋಮನಹಳ್ಳಿ ಅಂತರಘಟ್ಟಮ್ಮ ಸೇರಿದಂತೆ ಆಯಾ ಗ್ರಾಮದೇವರುಗಳೊಡನೆ ಎತ್ತಿನ ಬಂಡಿ, ಟ್ರ್ಯಾಕ್ಟರ್, ಆಟೊ, ಟೆಂಪೋಗಳಲ್ಲಿ ಸಾಗಿ ಬೀರೂರಿಗೆ ಬಂದು ತಲುಪಿದಾಗ ಪುರಸಭೆ ವತಿಯಿಂದ ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು.ಮಂಗಳವಾರ ಆರಂಭಗೊಂಡಿರುವ ಜಾತ್ರಾ ಮಹೋತ್ಸವದಲ್ಲಿ ತಾಲ್ಲೂಕಿನ ಎಲ್ಲ ತೆಲುಗುಗೌಡ ಮನೆತನದವರು ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದು ಗುರುವಾರ ವಿಗ್ರಹ ಪ್ರತಿಷ್ಠಾಪನಾ ಕಾರ್ಯ ನಡೆಯಲಿದೆ.

ಜಾತ್ರೆಯಲ್ಲಿ ಪಾಲ್ಗೊಳ್ಳಲು ಬಹುತೇಕ ಕುಟುಂಬಗಳು ಎತ್ತಿನಬಂಡಿಯಲ್ಲಿ ಆಗಮಿಸಿದ್ದು ಮೆರವಣಿಗೆಯಿಂದ ಸುಮಾರು ಒಂದು ಗಂಟೆ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.ಸ್ವಾಗತ ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷ ಎಸ್.ರಮೇಶ್,ಜಿ.ಪಂ.ಸದಸ್ಯ ಬಿ.ಪಿ.ನಾಗರಾಜ್,ಪುರಸಭೆ ಸದಸ್ಯರಾದ ದಯಾನಂದ್, ಶಶಿಧರ್, ಪ್ರಕಾಶ್, ಯತೀಶ್, ರುದ್ರಪ್ಪ ಸೇರಿದಂತೆ ಪಟ್ಟಣದ ನಾಗರಿಕರು ಪಾಲ್ಗೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.