ಶನಿವಾರ, ಜನವರಿ 18, 2020
26 °C

ಹೋಸ್ನಿ ಮುಬಾರಕ್‌ಗೆ ಮರಣದಂಡನೆ: ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಐಎಎನ್‌ಎಸ್):  ದುರಾಡಳಿತದ ವಿರುದ್ಧ ಚಳವಳಿ ನಡೆಸಿದವರನ್ನು ಹತ್ಯೆ ಮಾಡಿಸಿರುವ ಪದಚ್ಯುತ ಅಧ್ಯಕ್ಷ ಹೋಸ್ನಿ ಮುಬಾರಕ್‌ಗೆ ಮರಣ ದಂಡನೆವಿಧಿಸಬೇಕು ಎಂದು ಪ್ರಾಸಿಕ್ಯೂಟರ್ ನ್ಯಾಯಾಲಯದಲ್ಲಿ ಒತ್ತಾಯಿಸಿದ್ದಾರೆ.ಜನರನ್ನು ರಕ್ಷಿಸುವುದು ಅಧ್ಯಕ್ಷರ ಕರ್ತವ್ಯ. ಆದರೆ ಅಧ್ಯಕ್ಷರಾಗಿದ್ದುಕೊಂಡು ಮುಬಾರಕ್, ಜನರನ್ನು ಕೊಲ್ಲಲು ಆದೇಶಿಸಿರುವುದರಿಂದ  ಅಪರಾಧವೆಸಗಿದ್ದಾರೆ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)