ಗುರುವಾರ , ಜನವರಿ 30, 2020
22 °C

‘ಎಚ್‌ಐವಿ, ಏಡ್ಸ್: ತಿಳಿವಳಿಕೆ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಎಚ್‌ಐವಿ ಏಡ್ಸ್‌ನಂತಹ ಮಾರಕ ಕಾಯಿಲೆಯ ಕುರಿತು ಪ್ರಜ್ಞಾವಂತರು ಜಾಗೃತರಾಗಿ, ಇತ­ರರಲ್ಲೂ ತಿಳಿವಳಿಕೆ ಮೂಡಿಸುವ ಮೂಲಕ, ಕಾಯಿಲೆ ಹರಡದಂತೆ ನೋಡಿಕೊಳ್ಳುವ ಅಗತ್ಯವಿದೆ ಎಂದು ಜಿಲ್ಲಾ ನ್ಯಾಯಾಧೀಶ ಡಿ. ವಿಶ್ವೇಶ್ವರ ಭಟ್ ಅಭಿಪ್ರಾಯಪಟ್ಟರು.ಆರೋಗ್ಯ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಘಟಕಗಳ ಸಹಯೋಗದಲ್ಲಿ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಭಾನುವಾರ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ‘ಜಾಗೃತಿ ಜಾಥಾ’ಗೆ ಚಾಲನೆ ನೀಡಿ ಅವರು ಮಾತನಾಡಿದರು.ಸುರಕ್ಷಿತ ಲೈಂಗಿಕ ಕ್ರಿಯೆ ಕುರಿತು ಪ್ರತಿಯೊಬ್ಬರಲ್ಲೂ ತಿಳಿವಳಿಕೆ ಮೂಡಿ­ಸುವ ಮೂಲಕ ಏಡ್ಸ್‌ ತಡೆಗಟ್ಟಲು ಆರೋಗ್ಯ ಇಲಾಖೆ ಹಾಗೂ ಸಂಘ–ಸಂಸ್ಥೆಗಳು ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು.ನಗರದ ಶ್ರೀರಾಮಪುರ ಕಾಲೋನಿ, ರೂಪನಗುಡಿ ರಸ್ತೆ, ವಡ್ಡರಬಂಡೆ, ಅಯ್ಯಪ್ಪನ ಗುಡಿ, ಬೆಂಗಳೂರು ರಸ್ತೆ, ಕಾಳಮ್ಮ ಬೀದಿ, ಮೋತಿ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದ ಜಾಥಾದಲ್ಲಿ ಎಂಎಸ್‌ಡಬ್ಲ್ಯೂ ವಿದ್ಯಾರ್ಥಿಗಳು, ಎನ್‌ಸಿಸಿ ಕೆಡೆಟ್‌ಗಳು, ಎನ್ಎಸ್ಎಸ್ ಕಾರ್ಯಕರ್ತರು, ನೆಹರೂ ಯುವ ಕೇಂದ್ರ, ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕುಟುಂಬ ಯೋಜನಾ ಸಂಸ್ಥೆಯ  ಪದಾಧಿಕಾರಿಗಳು ಪಾಲ್ಗೊಂಡಿದ್ದರು.ನ್ಯಾಯಾಧೀಶೆ ಎಂ.ಎಚ್. ಶಾಂತಾ, ವಕೀಲರ ಸಂಘದ ಕಾರ್ಯದರ್ಶಿ ರಾಮಕೃಷ್ಣ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಕೆ. ಪಾಟೀಲ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಂಪಾಪತಿ, ಡಾ. ವೆಂಕಟೇಶಮೂರ್ತಿ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ನರಸಿಂಹಮೂರ್ತಿ, ವಿಮುಕ್ತಿ, ನಿತ್ಯಜೀವನ ಮತ್ತಿತರ ಸಂಘ– ಸಂಸ್ಥೆಗಳ ಪದಾಧಿಕಾರಿಗಳು ಈ ಸಂದರ್ಭ ಹಾಜರಿದ್ದರು.ಜಾಗೃತಿ ಅಭಿಯಾನ

ಬಳ್ಳಾರಿ:
ಎಚ್‌ಐವಿ ಏಡ್ಸ್‌ನಂತಹ ಮಾರಕ ಕಾಯಿಲೆಯ ಕುರಿತು ಪ್ರಜ್ಞಾವಂತರು ಜಾಗೃತರಾಗಿ, ಇತ­ರರಲ್ಲೂ ತಿಳಿವಳಿಕೆ ಮೂಡಿಸುವ ಮೂಲಕ, ಕಾಯಿಲೆ ಹರಡದಂತೆ ನೋಡಿಕೊಳ್ಳುವ ಅಗತ್ಯವಿದೆ ಎಂದು ಜಿಲ್ಲಾ ನ್ಯಾಯಾಧೀಶ ಡಿ. ವಿಶ್ವೇಶ್ವರ ಭಟ್ ಅಭಿಪ್ರಾಯಪಟ್ಟರು.ಆರೋಗ್ಯ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಘಟಕಗಳ ಸಹಯೋಗದಲ್ಲಿ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಭಾನುವಾರ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ‘ಜಾಗೃತಿ ಜಾಥಾ’ಗೆ ಚಾಲನೆ ನೀಡಿ ಅವರು ಮಾತನಾಡಿದರು.ಸುರಕ್ಷಿತ ಲೈಂಗಿಕ ಕ್ರಿಯೆ ಕುರಿತು ಪ್ರತಿಯೊಬ್ಬರಲ್ಲೂ ತಿಳಿವಳಿಕೆ ಮೂಡಿ­ಸುವ ಮೂಲಕ ಏಡ್ಸ್‌ ತಡೆಗಟ್ಟಲು ಆರೋಗ್ಯ ಇಲಾಖೆ ಹಾಗೂ ಸಂಘ–ಸಂಸ್ಥೆಗಳು ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು.ನಗರದ ಶ್ರೀರಾಮಪುರ ಕಾಲೋನಿ, ರೂಪನಗುಡಿ ರಸ್ತೆ, ವಡ್ಡರಬಂಡೆ, ಅಯ್ಯಪ್ಪನ ಗುಡಿ, ಬೆಂಗಳೂರು ರಸ್ತೆ, ಕಾಳಮ್ಮ ಬೀದಿ, ಮೋತಿ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದ ಜಾಥಾದಲ್ಲಿ ಎಂಎಸ್‌ಡಬ್ಲ್ಯೂ ವಿದ್ಯಾರ್ಥಿಗಳು, ಎನ್‌ಸಿಸಿ ಕೆಡೆಟ್‌ಗಳು, ಎನ್ಎಸ್ಎಸ್ ಕಾರ್ಯಕರ್ತರು, ನೆಹರೂ ಯುವ ಕೇಂದ್ರ, ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕುಟುಂಬ ಯೋಜನಾ ಸಂಸ್ಥೆಯ  ಪದಾಧಿಕಾರಿಗಳು ಪಾಲ್ಗೊಂಡಿದ್ದರು.ನ್ಯಾಯಾಧೀಶೆ ಎಂ.ಎಚ್. ಶಾಂತಾ, ವಕೀಲರ ಸಂಘದ ಕಾರ್ಯದರ್ಶಿ ರಾಮಕೃಷ್ಣ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಕೆ. ಪಾಟೀಲ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಂಪಾಪತಿ, ಡಾ. ವೆಂಕಟೇಶಮೂರ್ತಿ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ನರಸಿಂಹಮೂರ್ತಿ, ವಿಮುಕ್ತಿ, ನಿತ್ಯಜೀವನ ಮತ್ತಿತರ ಸಂಘ– ಸಂಸ್ಥೆಗಳ ಪದಾಧಿಕಾರಿಗಳು ಈ ಸಂದರ್ಭ ಹಾಜರಿದ್ದರು.ಜಾಗೃತಿ ಅಭಿಯಾನ

ಹಗರಿಬೊಮ್ಮನಹಳ್ಳಿ:
ವಿಶ್ವ ಏಡ್ಸ್‌ ದಿನಾಚರಣೆ ನಿಮಿತ್ತ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ತಾಲ್ಲೂಕು ಘಟಕ ಭಾನುವಾರ ಪಟ್ಟಣದಲ್ಲಿ ಏಡ್ಸ ಜನ ಜಾಗೃತಿ ಅಭಿಯಾನ ಹಮ್ಮಿಕೊಂಡಿತ್ತು.ಪಟ್ಟಣದ ನೀರಾವರಿ ಇಲಾಖೆಯ ಆವರಣದಲ್ಲಿ ವೃತ್ತ ನಿರೀಕ್ಷಕ ಮಲ್ಲೇಶ ದೊಡ್ಡಮನಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ದೇಹದ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುವ ಮಹಾಮಾರಿ ಏಡ್ಸ್‌ ಬಗ್ಗೆ ಯುವಕರು ಜಾಗೃತರಾಗಬೇಕು. ನಮ್ಮಲ್ಲಿನ ಅಜ್ಞಾನ ಮತ್ತು ಅಜಾಗೃತಿಯಿಂದಾಗಿ ಎಲ್ಲೆಡೆ ರೋಗ ಹರಡುತ್ತಿದೆ ಎಂದು ತಿಳಿಸಿದರು.ಸಮಿತಿಯ ತಾಲ್ಲೂಕು ಅಧ್ಯಕ್ಷ ತ್ಯಾವರೆನಾಯ್ಕ ಅಭಿಯಾನದ ನೇತೃತ್ವ ವಹಿಸಿದ್ದರು. ಪ್ರಕಾಶ್‌ ಸಕ್ರಗೌಡ, ಶೇಖರಗಿರೆಡ್ಡಿ, ಕೆ.ಜನಾರ್ಧನ, ಎಸ್‌.ಕೊಟ್ರೇಶ್‌, ಗುಡ್ಡಪ್ಪ, ಎಲ್‌. ರೆಡ್ಡಿನಾಯ್ಕ, ಎಚ್‌.ಎಂ.ಉಮಾಪತಿ, ಬಿ.ಚಂದ್ರಪ್ಪ, ಕೆ.ಪಿ.ರಘುಕುಮಾರ್‌, ಎನ್‌. ಸುರೇಶ್‌, ಕೆ.ಎಸ್‌.ವೀರೇಶ್‌, ಕೊಟಗಿ ಕೊಟ್ರಪ್ಪ, ಪಂಚಪ್ಪ, ಎಚ್‌. ಜಯಪ್ಪ, ಸಿ. ರವಿ, ಎನ್‌.ಎಂ. ಶಿಲ್ಪಿ, ಶಿವಲಿಂಗಸ್ವಾಮಿ, ಪಿ.ಜಿ. ಸಕಲೇಶ್ವರ, ಉಸ್ಮಾನಸಾಹೇಬ್‌, ಎ.ಕರಿಬಸಪ್ಪ, ಯು. ಹಾಲಪ್ಪ, ಜಿ. ಉಮೇಶ್‌ ಹಾಗೂ ಮತ್ತಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು. ‘ವಿಶ್ವದ ಸಮಸ್ಯೆ’

ಹೊಸಪೇಟೆ:
ಸಮಾಜದ ಮುಖ್ಯ­ವಾಹಿನಿಯಲ್ಲಿರುವ ಪ್ರತಿ­ಯೊಬ್ಬರು ವಿಶ್ವದ ಸಮಸ್ಯೆಯಾಗಿರುವ ಏಡ್ಸ್‌ ಕುರಿತು ಮಾಹಿತಿ ಅರಿಯಬೇಕಾಗಿದೆ ಎಂದು ಸೋಮಶೇಖರ ಹಿರೇಮಠ ಹೇಳಿದರು.ಹೊಸಪೇಟೆ ಗೃಹ ರಕ್ಷಕ ದಳದಲ್ಲಿ ವಿಶ್ವ ಏಡ್ಸ್‌ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.  ಚಿಕಿತ್ಸೆಗೆ ಬದಲಾಗಿ ರೋಗವೇ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಉತ್ತಮ ಎಂದರು.ಘಟಕಾಧಿಕಾರಿ ಎಸ್‌.ಎಂ.ಗಿರೀಶ್ ಜ್ಯೋತಿ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು, ಬಿ.ಪಾಂಡುರಂಗ, ಎಸ್.ಹನುಮಂತಪ್ಪ, ಕಮಾಂಡರ್‌ ವಿ.ಪರಶುರಾಮ, ಕೆ.ವಿರೂಪಾಕ್ಷಪ್ಪ, ಟಿ.ಹುಲುಗಪ್ಪ ಹಾಜರಿದ್ದರು. ವಿಶ್ವ ಏಡ್ಸ್‌ ದಿನಾಚರಣೆ ನಿಮಿತ್ತ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ತಾಲ್ಲೂಕು ಘಟಕ ಭಾನುವಾರ ಪಟ್ಟಣದಲ್ಲಿ ಏಡ್ಸ ಜನ ಜಾಗೃತಿ ಅಭಿಯಾನ ಹಮ್ಮಿಕೊಂಡಿತ್ತು.ಪಟ್ಟಣದ ನೀರಾವರಿ ಇಲಾಖೆಯ ಆವರಣದಲ್ಲಿ ವೃತ್ತ ನಿರೀಕ್ಷಕ ಮಲ್ಲೇಶ ದೊಡ್ಡಮನಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ದೇಹದ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುವ ಮಹಾಮಾರಿ ಏಡ್ಸ್‌ ಬಗ್ಗೆ ಯುವಕರು ಜಾಗೃತರಾಗಬೇಕು. ನಮ್ಮಲ್ಲಿನ ಅಜ್ಞಾನ ಮತ್ತು ಅಜಾಗೃತಿಯಿಂದಾಗಿ ಎಲ್ಲೆಡೆ ರೋಗ ಹರಡುತ್ತಿದೆ ಎಂದು ತಿಳಿಸಿದರು.ಸಮಿತಿಯ ತಾಲ್ಲೂಕು ಅಧ್ಯಕ್ಷ ತ್ಯಾವರೆನಾಯ್ಕ ಅಭಿಯಾನದ ನೇತೃತ್ವ ವಹಿಸಿದ್ದರು. ಪ್ರಕಾಶ್‌ ಸಕ್ರಗೌಡ, ಶೇಖರಗಿರೆಡ್ಡಿ, ಕೆ.ಜನಾರ್ಧನ, ಎಸ್‌.ಕೊಟ್ರೇಶ್‌, ಗುಡ್ಡಪ್ಪ, ಎಲ್‌. ರೆಡ್ಡಿನಾಯ್ಕ, ಎಚ್‌.ಎಂ.ಉಮಾಪತಿ, ಬಿ.ಚಂದ್ರಪ್ಪ, ಕೆ.ಪಿ.ರಘುಕುಮಾರ್‌, ಎನ್‌. ಸುರೇಶ್‌, ಕೆ.ಎಸ್‌.ವೀರೇಶ್‌, ಕೊಟಗಿ ಕೊಟ್ರಪ್ಪ, ಪಂಚಪ್ಪ, ಎಚ್‌. ಜಯಪ್ಪ, ಸಿ. ರವಿ, ಎನ್‌.ಎಂ. ಶಿಲ್ಪಿ, ಶಿವಲಿಂಗಸ್ವಾಮಿ, ಪಿ.ಜಿ. ಸಕಲೇಶ್ವರ, ಉಸ್ಮಾನಸಾಹೇಬ್‌, ಎ.ಕರಿಬಸಪ್ಪ, ಯು. ಹಾಲಪ್ಪ, ಜಿ. ಉಮೇಶ್‌ ಹಾಗೂ ಮತ್ತಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು. ‘ವಿಶ್ವದ ಸಮಸ್ಯೆ’

ಹೊಸಪೇಟೆ:
ಸಮಾಜದ ಮುಖ್ಯ­ವಾಹಿನಿಯಲ್ಲಿರುವ ಪ್ರತಿ­ಯೊಬ್ಬರು ವಿಶ್ವದ ಸಮಸ್ಯೆಯಾಗಿರುವ ಏಡ್ಸ್‌ ಕುರಿತು ಮಾಹಿತಿ ಅರಿಯಬೇಕಾಗಿದೆ ಎಂದು ಸೋಮಶೇಖರ ಹಿರೇಮಠ ಹೇಳಿದರು.ಹೊಸಪೇಟೆ ಗೃಹ ರಕ್ಷಕ ದಳದಲ್ಲಿ ವಿಶ್ವ ಏಡ್ಸ್‌ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.  ಚಿಕಿತ್ಸೆಗೆ ಬದಲಾಗಿ ರೋಗವೇ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಉತ್ತಮ ಎಂದರು.ಘಟಕಾಧಿಕಾರಿ ಎಸ್‌.ಎಂ.ಗಿರೀಶ್ ಜ್ಯೋತಿ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು, ಬಿ.ಪಾಂಡುರಂಗ, ಎಸ್.ಹನುಮಂತಪ್ಪ, ಕಮಾಂಡರ್‌ ವಿ.ಪರಶುರಾಮ, ಕೆ.ವಿರೂಪಾಕ್ಷಪ್ಪ, ಟಿ.ಹುಲುಗಪ್ಪ ಹಾಜರಿದ್ದರು.

ಪ್ರತಿಕ್ರಿಯಿಸಿ (+)