ಗಜೇಂದ್ರಗಡ: ‘ಗ್ರಾಮೀಣ ಅಭಿವೃದ್ಧಿ ಕಲ್ಪನೆಯನ್ನಿಟ್ಟುಕೊಂಡು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಾಕಷ್ಟು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸಿವೆ. ಅವುಗಳ ಸದುಪ ಯೋಗಪಡಿಸಿಕೊಂಡು ನಾಗರಿಕರು ಸರ್ವಾಂಗೀಣ ಅಭಿವೃದ್ಧಿ ಹೊಂದ ಬೇಕಾದ ಅನಿವಾರ್ಯತೆ ಇದೆ’ ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಲ್.ಎಲ್.ಮಾನೆ ಅಭಿಪ್ರಾಯ ಪಟ್ಟರು.

ರಾಜೂರ ಗ್ರಾಮ ಪಂಚಾಯ್ತಿ ಕಾರ್ಯಾಲಯದ ವತಿಯಿಂದ ಭೈರಾ ಪುರ ತಾಂಡಾದಲ್ಲಿ ಆಯೋಜಿಸಲಾ ಗಿದ್ದ ‘ವಾರ್ಡ್ ಸಭೆ’ಯಲ್ಲಿ ಮಾತ ನಾಡಿದ ಅವರು, ಬಡ ಹಾಗೂ ಹಿಂದು ಳಿದ ವರ್ಗಗಳ ನಾಗರಿಕರ ಅಭಿವೃದ್ಧಿ ಗಾಗಿ ವಿಶೇಷ ಯೋಜನೆಗಳು ಅನು ಷ್ಠಾನಗೊಂಡಿವೆ. ಆದರೆ ಗ್ರಾಮೀಣರ ಅನಕ್ಷರತೆ ಸಮಸ್ಯೆಯಿಂದಾಗಿ ಯೋಜನೆ ಗಳ ಸದುಪಯೋಗ ಸಾಧ್ಯವಾಗುತ್ತಿಲ್ಲ ಎಂದರು.

ಇತ್ತೀಚಿನ ದಿನಗಳಲ್ಲ ಗ್ರಾಮೀಣ ಪ್ರದೇಶದಲ್ಲಿ ಭಯಾನಕ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿರುವವರ ಸಂಖ್ಯೆ ಅಧಿಕಗೊಂಡಿದೆ. ಇದಕ್ಕೆ ಪ್ರಮುಖ ಕಾರಣ ಗ್ರಾಮೀಣರು ಸ್ವಚ್ಛತೆಗೆ ಆದ್ಯತೆ ನೀಡದೇ ಇರುವುದು. ಹೀಗಾಗಿ ನಾಗರಿಕರನ್ನು ಭಯಾನಕ ಸಾಂಕ್ರಾಮಿಕ ಕಾಯಿಲೆಗಳು ಹಿಂಡಿ ಹಿಪ್ಪೆ ಮಾಡಿವೆ. ಸ್ಥಳೀಯ ಆಡಳಿತ ಹಾಗೂ ಆರೋಗ್ಯ ಇಲಾಖೆಗಳು ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಗ್ರಾಮಸ್ಥರು ರಸ್ತೆ ಬದಿಗಳಲ್ಲಿ ತಿಪ್ಪೆ ಹಾಕುವುದು, ವೈಯ ಕ್ತಿಕ ಶೌಚಾಲಯ ನಿರ್ಮಿಸಿ ಕೊಳ್ಳದೆ ಬಯಲು ಮಲವಿಸರ್ಜನೆಗೆ ಮುಂದಾ ಗುವುದು ಹಾಗೂ ಸುತ್ತಲಿನ ಪರಿಸರವನ್ನು ಸುಂದರವಾಗಿಟ್ಟುಕೊಳ್ಳು ತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಗ್ರಾ.ಪಂ ಸದಸ್ಯೆ ದೇವವ್ವ ರಾಠೊಡ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಅಧ್ಯಕ್ಷ ಕಳಕಪ್ಪ ಕಂಬಳಿ, ಉಪಾಧ್ಯಕ್ಷೆ ಈರಮ್ಮ ಹಾದಿಮನಿ, ಹಿರಿಯ ಆರೋಗ್ಯ ಸಹಾಯಕ ವಿ.ಡಿ.ಬೆನ್ನೂರ, ಕೃಷಿ ಅಧಿಕಾರಿ ಕೆ.ಎಚ್. ಗಂಗೂರ, ಗ್ರಾ.ಪಂ ಸದಸ್ಯರಾದ ಶಿವಕುಮಾರ ಜಾಧವ್, ಪರಶುರಾಮ ಚಿಲ್ಝರಿ, ಯಮನೂರಪ್ಪ ಮೂಗನೂರ, ಮೂಕವ್ವ ಭೂಮದ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.