ಭಾನುವಾರ, ಜೂನ್ 20, 2021
26 °C

‘ಜಾನಪದ ಉಳಿವಿಗೆ ಪ್ರೋತ್ಸಾಹ ಅವಶ್ಯ’

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ‘ವಿನಾಶದ ಅಂಚಿನ­ಲ್ಲಿ­ರುವ ಮೂಲ ಜಾನಪದ ಕಲೆ ಮತ್ತು ಕಲಾ­ವಿದರನ್ನು ಬೆಳೆಸಲು ಸರ್ಕಾರ ಮತ್ತು ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡಬೇಕು’ ಎಂದು ಕೆಪಿಸಿಸಿ ಸದಸ್ಯ ಎ.ಮಂಜುನಾಥ ಹೇಳಿದರು.ತಾಲ್ಲೂಕಿನ ತೂಬಿನಕೆರೆ ಗ್ರಾಮ­ದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ತಾಲ್ಲೂಕು ಮಟ್ಟದ ಜಾನಪದ ಮತ್ತು ಸಾಂಸ್ಕೃತಿಕ ಕಲಾ ಮೇಳ ಉದ್ಘಾಟಿಸಿ ಅವರು ಮಾತ­ನಾಡಿದರು.‘ಸಾಂಸ್ಕೃತಿಕ ಕಲಾ ಪ್ರಕಾರವಾಗಿರುವ ಜನಪದದ ಉಳಿವಿಗೆ ಕಲಾವಿದರ ಸಹಕಾರ ಕೂಡ ಅವಶ್ಯ’ ಎಂದು ತಿಳಿಸಿ­ದರು. ‘ಹಿರಿಯ ಜಾನಪದ ಕಲಾ­ವಿದೆ ಗಂಗನರಸಿಂಹಯ್ಯಸಿದ್ದಲಿಂಗಯ್ಯ ಮಾತನಾಡಿ, ‘ಇಂದು ಜಾನಪದ ಕಲಾ ಪ್ರಕಾರಗಳು ಅಳಿವಿನ ಅಂಚಿನಲ್ಲಿದೆ.  ಮಕ್ಕಳಿಗೆ ಜಾನಪದದ ಕುರಿತು ಅರಿವು ಬೆಳೆಸಬೇಕು’ ಎಂದರು. ಪುರಸಭಾ ಸದಸ್ಯರಾದ ಎಂ.ಎನ್.ಮಂಜು­ನಾಥ, ಕೆ.ವಿ.ಬಾಲು, ಗ್ರಾ.ಪಂ ಮಾಜಿ ಸದಸ್ಯ ಈಶ್ವರಪ್ಪ, ನಿವೃತ್ತ ಶಿಕ್ಷಕ ಲಂಕಪ್ಪ, ಹಿರಿಯ ಕಲಾವಿದ ಚಂದ್ರಯ್ಯ, ಮುನಿಭೈರಯ್ಯ, ಕಮಲಮ್ಮನಿಂಗಪ್ಪ, ಅಶ್ವತ್ಥನಾರಾಯಣ ಮಾತನಾಡಿದರು.ಗಜಾನನ ಜಾನಪದ ಕಲಾ ಸಂಘದ ವತಿಯಿಂದ ಪಟದ ಕುಣಿತ, ಗಂಗಯ್ಯ ತಂಡದವರಿಂದ ಸೋಮನ ಕುಣಿತ, ಅಮೂಲ್ಯ ತಂಡದವರಿಂದ ಕೋಲಾಟ, ಗಂಗಾಪರಮೇಶ್ವರಿ ಜಾನಪದ ಕಲಾ ಸಂಘದವರಿಂದ ಚಿಲಿಪಿಲಿ ಗೊಂಬೆ, ರವಿ ತಂಡದವರಿಂದ ಪೂಜಾ ಕುಣಿತ, ವಿ.ಸಿ. ಮಾದಯ್ಯ ವೀರಗಾಸೆ ಕುಣಿತ, ಶಿವಣ್ಣ ತಮಟೆ ಮೇಳ, ಅರಸಯ್ಯ ತಂಡದವರ ರಾಮಭಜನೆ, ನರಸಿಂಹಯ್ಯ ತಂಡದಿಂದ ತತ್ವಪದ, ಜಯಲಕ್ಷ್ಮಮ್ಮ ತಂಡದವ­ರಿಂದ ಸೋಬಾನೆ ಪದ, ಗಂಗನರಸಮ್ಮ ತಂಡದಿಂದ ಬೀಸೊಕಲ್ಲಿನ ಪದ, ಕೃಷ್ಣಪ್ಪ ತಂಡದವರು ಜಾನಪದ ಗೀತ ಗಾಯನ ನಡೆಸಿಕೊಟ್ಟರು .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.