ಶನಿವಾರ, ಜೂನ್ 19, 2021
23 °C

‘ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಸತ್ಯ ಮತ್ತು ಶ್ರಮದ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಶ್ರೀನಿವಾಸಮೂರ್ತಿ ಹೇಳಿದರು.ಇಲ್ಲಿನ ಬಿಇಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಗುರು, ಹಿರಿಯರಿಗೆ ಗೌರವ ನೀಡಬೇಕು. ಸತತವಾಗಿ ಅಧ್ಯಯನ ನಡೆಸಿ ಜ್ಞಾನ ಸಂಪಾದಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಸವರಾಜ ಪಾಟೀಲ ಅಟ್ಟೂರ್ ಮಾತನಾಡಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಈ ಪ್ರದೇಶದ ಯುವಕರು ಉತ್ತಮ ವಿದ್ಯಾಭ್ಯಾಸ ಪಡೆದು ಮುನ್ನಡೆ ಸಾಧಿಸಬೇಕು ಎಂದು ಹೇಳಿದರು.ಡಾ.ಅನಂತರಾಜು ಮಾತ­ನಾಡಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ದಿಲೀಪಕುಮಾರ ತಾಳಂಪಳ್ಳಿ, ಸಂಸ್ಥೆ ಖಜಾಂಚಿ ಲಿಂಗರಾಜ ಪಾಟೀಲ ಅಟ್ಟೂರ್, ಸಂತೋಷ ತಾಳಂಪಳ್ಳಿ, ವೀರಶೆಟ್ಟಿ ಖೇಣಿ, ವಿಮಲಾಬಾಯಿ ಬಿರಾದಾರ ಇದ್ದರು.ಪ್ರಾಚಾರ್ಯ ಜಿ.ಎಂ.ಪಾಟೀಲ ಸ್ವಾಗತಿಸಿದರು. ಸುವರ್ಣಲತಾ ಹಿರೇಮಠ ನಿರೂಪಿಸಿದರು. ವಿನೋದಾ­ರೆಡ್ಡಿ ವಂದಿಸಿದರು. ಅರುಣಕುಮಾರ ಯಲಾಲ್ ಮತ್ತು ಸಂತೋಷ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.