ಸೋಮವಾರ, ಜೂನ್ 21, 2021
29 °C

‘ಮೋದಿಯದು ಸಂಕುಚಿತ ಬುದ್ಧಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರದು ಸಂಕುಚಿತ ಬುದ್ಧಿ ಎಂದು ಕೇಂದ್ರ ಕೃಷಿ ಸಚಿವ, ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್‌ ಪವಾರ್‌ ಆರೋಪಿಸಿದ್ದಾರೆ.‘ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಬರ ಇದ್ದಾಗ ಗುಜರಾತ್‌ನ ಕೃಷಿಕರು 34 ತಿಂಗಳವರೆಗೆ ದನಕರುಗಳಿಗೆ ಮೇವು ಪೂರೈಸಿದರು. ಆದರೆ

ಗುಜ­ರಾತ್‌ ಸರ್ಕಾರ ಇದನ್ನು ‘ಭ್ರಷ್ಟಾಚಾರ’ ಎಂದು ಪರಿಗಣಿಸಿ ತಮ್ಮದೇ ರಾಜ್ಯ­ದವರ ಮೇಲೆ ಪ್ರಕರಣ ದಾಖಲಿಸಿತು’ ಎಂದು ಪವಾರ್‌ ದೂರಿದರು.‘ದೇಶವನ್ನು ಮುನ್ನಡೆಸಬೇಕಾದ ವ್ಯಕ್ತಿಗೆ ಎಲ್ಲ ರಾಜ್ಯಗಳ ಹಿತಾಸಕ್ತಿಯೂ ಅಷ್ಟೇ ಪ್ರಮುಖವಾಗಬೇಕು, ಇಂತಹ ಸಂಕುಚಿತ ವ್ಯಕ್ತಿಗಳು ಹೇಗೆ ದೇಶದ ನಾಯಕತ್ವ ವಹಿಸಿಕೊಳ್ಳಬಲ್ಲರು?’ ಎಂದು ಪ್ರಶ್ನಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.