ಶುಕ್ರವಾರ, ಜನವರಿ 17, 2020
24 °C
ಜಿಲ್ಲಾ ಸಮಾಚಾರ

10 ಹಿರಿಯರಿಗೆ ವಿಶ್ವ ನುಡಿಸಿರಿ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡುಬಿದಿರೆ: ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013ರ ಅಂಗವಾಗಿ ನಾಡಿನ ಹಿರಿಯ ಸಾಹಿತಿಗಳು, ನಾಡು ನುಡಿಗಾಗಿ ಜೀವನವನ್ನು ಮುಡಿಪಾಗಿಟ್ಟ ಸಾಧಕರು ಸೇರಿದಂತೆ 10 ಮಂದಿ ಗಣ್ಯರನ್ನು ಸನ್ಮಾನಿಸಲಾಗುವುದು.90 ವರ್ಷ ದಾಟಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಈ ಕಾರ್ಯಕ್ರ­ಮವು ಡಿಸೆಂಬರ್ 20ರಂದು ರತ್ನಾಕರ­ವರ್ಣಿ ವೇದಿಕೆಯಲ್ಲಿ ನೆರವೇರಲಿದೆ.ಖ್ಯಾತ ನಿಘಂಟು ತಜ್ಞ ಜಿ. ವೆಂಕಟ­ಸುಬ್ಬಯ್ಯ,  ಹಿರಿಯ ಸಾಹಿತಿಗಳಾದ ದೇ. ಜವರೇ­ಗೌಡ,  ಕಯ್ಯಾರ ಕಿಂಞಣ್ಣ ರೈ,  ಚನ್ನವೀರ ಕಣವಿ, ಹಿರಿಯ ಪತ್ರಕರ್ತ,  ಪಾಟೀಲ ಪುಟ್ಟಪ್ಪ,  ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.­ದೊರೆಸ್ವಾಮಿ ಹಾಗೂ    117 ವರುಷ ವಯಸ್ಸಿನ ಪಂಡಿತ ಸುಧಾಕರ ಚತುರ್ವೇದಿ, ಸಾಲುಮರದ ತಿಮ್ಮಕ್ಕ, ಹಿರಿಯ ಯಕ್ಷಗಾನ ಕಲಾವಿದ ಕಡಂದೇಲು ಪುರುಷೋತ್ತಮ ಭಟ್ ಅವರು ಈ ವಿಶೇಷ ಗೌರವ ಸನ್ಮಾನ ಪಡೆಯುವರು. ಸನ್ಮಾನವು ಪ್ರಶಸ್ತಿ ಹಾಗೂ ₨ 50,000ದ ಗೌರವ ಸಂಭಾವನೆಯನ್ನು ಹೊಂದಿದೆ.ರಜಾ ಸೌಲಭ್ಯ

ಮಂಗಳೂರು: ಮೂಡುಬಿದಿರೆಯಲ್ಲಿ ಇದೇ 19ರಿಂದ 22ರರೆಗೆ ನಡೆಯಲಿ­ರುವ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಸಮ್ಮೇಳನದಲ್ಲಿ ಭಾಗವಹಿಸುವ ರಾಜ್ಯದ ಎಲ್ಲ ಪ್ರಾಥಮಿಕ–ಪ್ರೌಢ ಶಾಲಾ ಶಿಕ್ಷಕರು, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ  ಎಲ್ಲ ವಿಶ್ವವಿದ್ಯಾನಿಲಯಗಳ ಉಪನ್ಯಾಸಕ­ರಿಗೆ ಆಯಾ ಇಲಾಖಾ ಮುಖ್ಯಸ್ಥರು ಅನ್ಯ ಕಾರ್ಯನಿಮಿತ್ತ (ಒಒಡಿ) ರಜಾ ಸೌಲಭ್ಯ ಮಂಜೂರು ಮಾಡಿರುವುದಾಗಿ ಡಾ.ಎಂ.ಮೋಹನ ಆಳ್ವ  ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)