ಬೆಂಗಳೂರು: ನಗರದಲ್ಲಿ ಬೇಸಿಗೆಯಲ್ಲಿ ಸುಮಾರು 400 ದಶಲಕ್ಷ ಲೀಟರ್ನಷ್ಟು ಕಾವೇರಿ ನೀರಿನ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವುದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಸುಮಾರು 80 ಲಕ್ಷ ಜನತೆಗೆ ಪ್ರತಿ ನಿತ್ಯ ನೀರು ಪೂರೈಸಲು 1250ರಿಂದ 1350 ದಶಲಕ್ಷ ಲೀಟರ್ ನೀರಿನ ಬೇಡಿಕೆಯಿದೆ. ಆದರೆ, ಪ್ರಸ್ತುತ 900ರಿಂದ 950 ದಶಲಕ್ಷ ಲೀಟರ್ನಷ್ಟು ನೀರು ಲಭ್ಯವಾಗುತ್ತಿದೆ. ಇದರಿಂದ ಮುಖ್ಯವಾಗಿ ಕೊಳವೆ ಬಾವಿಗಳನ್ನೇ ಅವಲಂಬಿಸಿರುವ, ಅದರಲ್ಲೂ ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಜಲಮಂಡಳಿ ಟ್ಯಾಂಕರ್ಗಳ ಮೊರೆ ಹೋಗಿದೆ.

ಈ ಉದ್ದೇಶಕ್ಕಾಗಿ ಜಲಮಂಡಳಿಯು ತನ್ನ ಬಳಿಯಿರುವ 42 ಟ್ಯಾಂಕರ್ಗಳ ಜತೆಗೆ, 131 ಖಾಸಗಿ ಟ್ಯಾಂಕರ್ಗಳನ್ನು ಬಾಡಿಗೆಗೆ ಪಡೆದಿದೆ. ಖಾಸಗಿ ಟ್ಯಾಂಕರ್ಗೆ ದಿನಕ್ಕೆ 1650 ರೂಪಾಯಿ ಬಾಡಿಗೆ ನೀಡಲಾಗುತ್ತದೆ. ಆರು ಸಾವಿರ ಲೀಟರ್ ಸಾಮರ್ಥ್ಯದ ಈ ಟ್ಯಾಂಕರ್ಗಳು ದಿನ ಐದು `ಟ್ರಿಪ್~ ನೀರು ಪೂರೈಸಬೇಕಾಗುತ್ತದೆ.

ಅಂತೆಯೇ, ಮೂರು ಸಾವಿರ ಲೀಟರ್ ಸಾಮರ್ಥ್ಯದ ಟ್ರ್ಯಾಕ್ಟರ್ಗಳಿಗೆ ದಿನಕ್ಕೆ 825 ರೂಪಾಯಿ ಬಾಡಿಗೆ ನಿಗದಿಪಡಿಸಲಾಗಿದೆ. ನಾಗರಿಕರಿಗೆ ಟ್ಯಾಂಕರ್ಗಳ ಮೂಲಕ ನಿತ್ಯ 4 ದಶಲಕ್ಷ ಲೀಟರ್ ನೀರು ಪೂರೈಸಲಾಗುತ್ತಿದೆ ಎಂದು ಜಲಮಂಡಳಿಯ ಪ್ರಧಾನ ಮುಖ್ಯ ಎಂಜಿನಿಯರ್ ವೆಂಕಟರಾಜು `ಪ್ರಜಾವಾಣಿ~ಗೆ ತಿಳಿಸಿದರು.

ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾದ ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯ ವಾರ್ಡ್ಗಳಲ್ಲಿ ಕಾವೇರಿ ನೀರು ಪೂರೈಸುವುದಕ್ಕಾಗಿ ಪೈಪುಗಳನ್ನು ಅಳವಡಿಸುವ ಕೆಲಸ ಬಹುತೇಕ ಮುಗಿದಿದೆ. ಜೂನ್ ವೇಳೆಗೆ ಕಾವೇರಿ ನಾಲ್ಕನೇ ಹಂತದ ಎರಡನೇ ಘಟ್ಟ ಅನುಷ್ಠಾನಗೊಳ್ಳಲಿದೆ. ಆನಂತರ ಹೊಸ ವಾರ್ಡ್ಗಳಿಗೆ ಕಾವೇರಿ ನೀರು ಸರಬರಾಜು ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ಒಂದೆಡೆ ನಗರೀಕರಣದಿಂದ ಬೆಂಗಳೂರು ಮಿತಿ ಮೀರಿ ಬೆಳೆಯುತ್ತಿದ್ದರೂ ನಗರಕ್ಕೆ ಪೂರೈಕೆಯಾಗುವ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿಲ್ಲ. 2002-03ನೇ ಸಾಲಿನಿಂದ ನಗರಕ್ಕೆ 950 ದಶಲಕ್ಷ ಲೀಟರ್ ಕಾವೇರಿ ನೀರು ಲಭ್ಯವಾಗುತ್ತಿದ್ದು, ಅಷ್ಟೇ ನೀರನ್ನು ಈಗಲೂ ಎಲ್ಲ ಬಡಾವಣೆಗಳಿಗೂ ಪೂರೈಸುವಂತಾಗಿದೆ.

ಕಾವೇರಿ ನಾಲ್ಕನೇ ಹಂತದ ಎರಡನೇ ಘಟ್ಟ ಅನುಷ್ಠಾನಗೊಂಡಲ್ಲಿ 500 ದಶಲಕ್ಷ ಲೀಟರ್ ಹೆಚ್ಚುವರಿ ನೀರು ಲಭ್ಯವಾಗಲಿದೆ. ಆನಂತರ ಕೊಳವೆಬಾವಿಗಳನ್ನು ಅವಲಂಬಿಸಿರುವ ಹೊಸ ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವ ಸಾಧ್ಯತೆಯಿದೆ.

ಅಂತರ್ಜಲ ಮಟ್ಟ ಕುಸಿತ:
ಇನ್ನು, ದಿನದಿಂದ ದಿನಕ್ಕೆ ನಗರದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಪರಿಣಾಮ 1000ದಿಂದ 1200 ಅಡಿ ಕೊಳವೆಬಾವಿ ಕೊರೆದರೂ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಇದು ಕೂಡ ಜಲಮಂಡಳಿಗೆ ಆತಂಕವಾಗಿ ಪರಿಣಮಿಸಿದೆ.

ನಗರದಲ್ಲಿ 12 ಸಾವಿರ ಕೊಳವೆಬಾವಿಗಳಿವೆ. ಇದರಲ್ಲಿ ನಾಲ್ಕು ಸಾವಿರದಷ್ಟು ಕೈಪಂಪುಗಳಿವೆ. ಇವುಗಳಲ್ಲಿ ಶೇ 20ರಷ್ಟು ವಿಫಲವಾಗಿವೆ. ಅಂತರ್ಜಲ ಮಟ್ಟ ಕುಸಿತದಿಂದ ಕೊಳವೆಬಾವಿಗಳಲ್ಲಿ ಲಭ್ಯತೆ ನೀರಿನ ಪ್ರಮಾಣ ಶೇ 10ರಷ್ಟು ಕಡಿಮೆಯಾಗಿದೆ. ಇದರಿಂದ ದಿನನಿತ್ಯ ಆರು ಗಂಟೆ ಪಂಪ್ ಮಾಡುತ್ತಿದ್ದಂತಹ ಕೊಳವೆಬಾವಿಗಳಲ್ಲಿ ಬೇಸಿಗೆಯಲ್ಲಿ ಮೂರು ಗಂಟೆ ಕೂಡ ಪಂಪ್ ಮಾಡುವುದು ಕಷ್ಟವಾಗಿದೆ.

ಇದರ ಜತೆಗೆ, ಹಲವೆಡೆ ಅನಧಿಕೃತ ಸಂಪರ್ಕಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಇಂತಹ ಅನಧಿಕೃತ ಸಂಪರ್ಕಗಳನ್ನು ಪತ್ತೆ ಮಾಡಲು ಜಲಮಂಡಳಿ ಇದೀಗ ಮುಂದಾಗಿದೆ. ವಿಶೇಷವಾಗಿ ನಗರದ ಪೂರ್ವ ಹಾಗೂ ಉತ್ತರ ಭಾಗಗಳಲ್ಲಿ ಈ ಸಮಸ್ಯೆ ತಲೆದೋರಿದೆ.

ಜಲಮಂಡಳಿಗೆ 7.5 ಕೋಟಿ ಬಿಡುಗಡೆ
ಈ ಮಧ್ಯೆ, 30 ಹೊಸ ಟ್ಯಾಂಕರ್ಗಳನ್ನು ಖರೀದಿಸುವುದಕ್ಕಾಗಿ ಬಿಬಿಎಂಪಿಯು ಬುಧವಾರ ಏಳೂವರೆ ಕೋಟಿ ರೂಪಾಯಿಗಳ ಚೆಕ್ ಅನ್ನು ಜಲಮಂಡಳಿಗೆ ಹಸ್ತಾಂತರಿಸಿತು.

ಇತ್ತೀಚೆಗೆ ನಡೆದ ಪಾಲಿಕೆ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಮೇಯರ್ ಪಿ. ಶಾರದಮ್ಮ ಈ ಚೆಕ್ ನೀಡಿದರು. ಪಾಲಿಕೆ ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ, ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಉಪಸ್ಥಿತರಿದ್ದರು.

ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ
ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಿಗೆ ಕುಡಿಯುವ ನೀರು ಹಾಗೂ ಒಳಚರಂಡಿ ಸೌಲಭ್ಯ ಕಲ್ಪಿಸುವುದಕ್ಕಾಗಿ ಜಲಮಂಡಳಿಯು 2037 ಕೋಟಿ ರೂಪಾಯಿಗಳ ಪ್ರಸ್ತಾವವನ್ನು ಕೇಂದ್ರಕ್ಕೆ ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.