ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಸ್ತ್ರಚಿಕಿತ್ಸೆಗೆ ಶಕ್ತಿ ನೀಡಿದ ‘ಅರಿವಳಿಕೆ’

Last Updated 16 ಅಕ್ಟೋಬರ್ 2014, 6:42 IST
ಅಕ್ಷರ ಗಾತ್ರ

೧೮ನೇ ಶತಮಾನಕ್ಕಿಂತ ಪೂರ್ವದಲ್ಲಿ ಯಾವುದೇ ಶಸ್ತ್ರಚಿಕಿತ್ಸೆಯನ್ನು ಈಗಿನ ಹಾಗೆ ಪ್ರಜ್ಞೆ ತಪ್ಪಿಸಿ ನೋವಿಲ್ಲದೆ ಮಾಡು­­­ತ್ತಿರಲಿಲ್ಲ. ಕೈ,ಕಾಲುಗಳನ್ನು ಕಟ್ಟಿ ಹಾಕಿ ರೋಗಿಗಳ ಆಕ್ರಂದನದ ನಡುವೆ ಶಸ್ತ್ರ­ಚಿಕಿತ್ಸೆ ನೆರವೇರಿಸಲಾಗುತ್ತಿತ್ತು ಎಂದರೆ ನಂಬಲು ಕಷ್ಟ.

ಇದ­ಕ್ಕಿಂತ ಮುಂಚೆ ಕ್ರಿ.ಪೂ. ೫೦೦ರಲ್ಲ ನಮ್ಮ ದೇಶದ ಮಹಾನ್‌  ಶಸ್ತ್ರಚಿಕಿತ್ಸಕ ಶುಶ್ರೂ­ತನ ಕಾಲದಲ್ಲಿ ಅರಿವಳಿಕೆ ಔಷಧಿ­ಯಾಗಿ ಓಪೀಯಮ್, ವೈನ್, ಇಂಡಿ­ಯನ್ ಹಂಪ್ ಕೊನೆಗೆ ಕೈ-ಕಾಲುಗಳನ್ನು ಕಟ್ಟಿ ಹಾಕಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಉಲ್ಲೇಖವಿದೆ. ೫೨೭ ಎ.ಡಿ. ರಾಜ ಭೋಜ­­­ನಿಗೆ ಭೋಜ ಪ್ರಭಂದ ಎಂಬಾತ ತಲೆ ಬುರುಡೆಯ ಶಸ್ತ್ರ ಚಿಕಿತ್ಸೆಯನ್ನು ಸಮ್ಮೋ­ಹಿನಿ ಮತ್ತು ಸಂಜೀವಿನಿ ಎಂಬ ತಂತ್ರಗಳನ್ನು ಬಳಸಿದ್ದ. ನಂತರ ಅಲ್ಕೋ­ಹಾಲ್‌ ಬಳಕೆ ಮಹಮ್ಮದೀಯರ ಆಳ್ವಿಕೆ­ಯ ವೇಳೆಯಲ್ಲಿ ಬಳಕೆಗೆ ಬಂತು. (೧೯೬೨ರಲ್ಲಿ ವೈದ್ಯಲೋಕಕ್ಕೆ ಕೊಡುಗೆ­ಯಾಗಿ ಪ್ರೊ. ಎಚ್. ವಾಸ್ತಿ ಲಾಹೋರ (ಪಾಕಿಸ್ತಾನ) ಅವರು ಬರೆದ ಪುಸ್ತಕ­ದಲ್ಲಿ ಉಲ್ಲೇಖವಿದೆ) ನಂತರ ಸಮ್ಮೋ­ಹನ ಮೂಲಕ ಪ್ರಜ್ಞೆ ತಪ್ಪಿಸುವ ತಂತ್ರ ಪ್ರಚಲಿತ­ವಾಗಿತ್ತು. ಇವೆಲ್ಲಾ ತೊಂದರೆ­ಗಳಿಗೆ ಕೊನೆಯಾದ ದಿನ ೧೬ ಅಕ್ಟೋಬರ್‌ ೧೮೪೬.

ಇದಕ್ಕಿಂತ ಪೂರ್ವದಲ್ಲಿ ಅರಿವಳಿಕೆ ಬಗ್ಗೆ ಅನೇಕ ಪ್ರಯೋಗಗಳು ಯಶಸ್ವಿಯಾಗಿದ್ದರೂ,  ಅಧಿಕೃತ­ವಾ­ಗಿರಲಿಲ್ಲ. ಆದ್ದರಿಂದ ಅಧಿಕೃತವಾಗಿ ಅರಿವಳಿಕೆ ದ್ರಾವಣವನ್ನು ಬಳಸಿ ಸ್ಪರ್ಶ ಮತ್ತು ನೋವು ಇಲ್ಲದೇ ಶಸ್ತ್ರಚಿಕಿತ್ಸೆ ನೆರವೇರಿಸಿ ತೋರಿಸಿದ ಪ್ರಥಮ ವೈದ್ಯ ಡಾ. ಡಬ್ಲ್ಯೂ.ಟಿ.ಜಿ. ಮೋರ್ಟಾನ್. ಅವರ ಗೌರವಾರ್ಥ ಅ. 16ರಂದು ಜಗತ್ತಿನಾದ್ಯಂತ ಅರಿವಳಿಕೆ ದಿನ ಎಂಬುದಾಗಿ ಆಚರಿಸಲಾಗುತ್ತದೆ.

ಅರಿವಳಿಕೆ ಶಾಸ್ತ್ರವನ್ನು ಪ್ರಥಮವಾಗಿ ಜಗತ್ತಿಗೆ ಪರಿ­ಚಯಿಸಿದ ವೈದ್ಯ ಡಾ. ಡಬ್ಲ್ಯೂ.ಟಿ.ಜಿ. ಮೋರ್ಟಾನ್ ಬೋಸ್ಟಾನ್- ಅಮೆರಿಕ ಎಂಬುವವರು ಈ ದಿನ ಗಿಲ್ಬರ್ಟ್ ಅಬಟ್ಟೊ ಎಂಬ ರೋಗಿಯ ಬಾಯಲ್ಲಿನ ಸಣ್ಣ ಗಡ್ಡೆ­ಯನ್ನು ತೆಗೆಯುವುದಕ್ಕಾಗಿ ಈಥರ್ ಎಂಬ ದ್ರಾವಣ­ವನ್ನು ಬಳಸಿ ನೋವಿ­ಲ್ಲದೇ ಗಡ್ಡೆಯನ್ನು ತೆಗೆದಾಗ ವೈದ್ಯ ಲೋಕ­ಕ್ಕಾದ ಸಂಚಲನ ಅಪಾರ.

ಅನೇಕ ಸಂದರ್ಭದಲ್ಲಿ ವೈದ್ಯರು ತಮ್ಮ ಮೇಲೆಯೇ ಅರಿ­ವಳಿಕೆ ಮದ್ದಿನ ಪ್ರಯೋಗ ಮಾಡಿಕೊಂಡು ತೊಂದರೆ ಅನು­ಭವಿಸಿದ ನಿದರ್ಶನಗಳಿವೆ. ಇನ್ನೂ ಕೆಲ ವೈದ್ಯರು ಅರಿವಳಿಕೆ ಔಷಧಗಳ ವ್ಯಸನಿಗಳಾಗಿ  ತೊಂದರೆ ಅನುಭವಿಸಿದ್ದಾರೆ.
ಕೆಲವು ಅರಿವಳಿಕೆ ವೈದ್ಯ ವಿಜ್ಞಾನಿಗಳ ಪರಿ­­ಚಯ ಮತ್ತು ಕೊಡುಗೆ ಕೆಳಗಿನಂತಿದೆ.

ಹೊರೆಸ್‌ ವೆಲ್ಸ್:- ನೈಟ್ರಸ್ ಆಕ್ಸೈಡ್ ನಿಲ­ವನ್ನು ಅರಿ­ವಳಿ­ಕೆಗೆ ಬಳಸು­ವು­ದನ್ನು ತೋರಿಸಿಕೊಟ್ಟ ಮೊದಲ ವೈದ್ಯ.
ಜೇಮ್ಸ್ ಯಂಗ್‌ ಸಿಮ್ಸನ್:- ಕ್ಲೋರೊ­ಫಾರ್ಮ್ ದ್ರಾವಣ ಬಳಸು­ವುದನ್ನು ಜಗತ್ತಿಗೆ ಪರಿಚಯಿಸಿದ  ಮೊದಲ ವಿಜ್ಞಾನಿ.
ಸರ್ ಇವಾನ್‌ ಮ್ಯಾಗಿಲ್:- ನೇರವಾಗಿ ಶ್ವಾಸಕೋಶಕ್ಕೆ ಅರಿ­ವಳಿಕೆ ಮದ್ದು ತಲುಪುವಂತೆ ನಳಿಕೆಗಳನ್ನು (ಎಂಡೋ ಟ್ರಕಿಯಲ್ ಟ್ಯೂಬ್‌) ತಯಾ­ರಿಸಿ­ದ ಮೊದಲ ವೈದ್ಯ.

ಕಾರ್ಲ ಕ್ವಾಲರ್:- ಎಂಬ ನೇತ್ರ ಚಿಕಿತ್ಸಾ ತಜ್ಞ, ಶಸ್ತ್ರಚಿಕಿತ್ಸೆಗೆ ಒಳ­ಗಾ­ಗುವ ದೇಹದ ಭಾಗದಲ್ಲಿ ಸ್ಪರ್ಶ ಜ್ಞಾನ ಇಲ್ಲ­ದಂತೆ ಮಾಡುವ ಔಷಧ ಕೊಕೇನ್ ಅನ್ನು ಕಂಡುಹಿಡಿದ ವೈದ್ಯ.

ಆಗಸ್ಟ್‌ ಬೀಯರ್:- ಬೆನ್ನು ಹುರಿಯ ಮೂಲಕ ಅರಿ­ವ­ಳಿಕೆ ಚುಚ್ಚು ಮದ್ದು ಕಂಡು ಹಿಡಿದ ವೈದ್ಯ.
ಕ್ರೀಮಿಯಾ ವಾರ್ ಎಂಬ ಯುದ್ಧ­ದಲ್ಲಿ ಗಾಯಗೊಂಡ  ಸೈನಿಕರಿಗೆ ಶಸ್ತ್ರ­ಚಿಕಿತ್ಸೆ ನೆರವೇರಿಸುವ ಸಂದರ್ಭದಲ್ಲಿ ಮೊದಲ ಬಾರಿಗೆ ಕ್ಲೋರೋಫಾರ್ಮ್‌  ದ್ರಾವಣ­ವನ್ನು ಆಮ್ಲಜನಕದೊಂದಿಗೆ    ಬೆರಸಿ, ಸಿದ್ಧಪಡಿಸಿದ ಅರಿವಳಿಕೆಯನ್ನು ಬಳಸಿದರು. ಭಾರತದಲ್ಲಿ ೧೯೨೦ರಿಂದ ಕ್ಲೋರೋ­ಫಾರ್ಮ್‌ ಬಳಕೆ ಆರಂಭ­ವಾಯಿತು. ಮಹಾತ್ಮ ಗಾಂಧೀಜಿ ಅವರಿಗೆ ಅಪೆಂಡಿಕ್ಸ್‌ ಶಸ್ತ್ರಚಿಕಿತ್ಸೆ ನೆರವೇರಿಸಿದ  ಡಾ. ದಾಟೆ ಎಂಬ ವೈದ್ಯರು  (೧೨ ಜನವರಿ ೧೯೨೫, ಪುಣೆಯ ಸಸೂನ್ ಆಸ್ಪತ್ರೆ) ಕ್ಲೋರೋ­ಫಾರ್ಮ್‌ ಅನ್ನು ಬಳಸಿದ್ದರು. ನಂತರ, ಪ್ರಥಮ ಜಾಗತಿಕ ಯುದ್ಧದಲ್ಲಿ ಅರಿ­ವಳಿಕೆ ನೀಡುವ ಬಾಯಲ್ಸ್ ಯಂತ್ರ­ವನ್ನು ಸಂಶೋಧಿಸಲಾಯಿತು.

ಸದ್ಯ ಅರಿವಳಿಕೆಶಾಸ್ತ್ರದಲ್ಲಿ ಸಾಕಷ್ಟು ಸಂಶೋಧನೆ ನಡೆದಿದ್ದು, ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ.  ರೋಗಿಗೆ ಒಂದು ವೇಳೆ ಅಪಾಯವಾದಲ್ಲಿ ಹೆಚ್ಚಿನ ಸಮಯ­ದಲ್ಲಿ ವೈದ್ಯರ ನಿರ್ಲಕ್ಷ್ಯವೇ ಕಾರಣ  ಹೊರತು ಈಗಿರುವ ಯಾವುದೇ ಅರಿವಳಿಕೆ ಮದ್ದು ಅಪಾಯ­ಕಾರಿ ಅಲ್ಲ ಎಂದು ಹೇಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT