ಪ್ರಲ್ಹಾದ ಜೋಶಿಯವರ ಜನ್ಮ ಕುಂಡಲಿಯಲ್ಲಿ ಪ್ರಧಾನವಾದ ಒಂದು ಅಂಶವೆಂದರೆ ಮಂಗಳ ಗ್ರಹ ಮತ್ತು ಚಂದ್ರ ಗ್ರಹದ ಪರಿವರ್ತನಾ ಯೋಗದ ವಿಶಿಷ್ಟತೆಯನ್ನು ಒಳಗೊಂಡಿದೆ. ವಾಸ್ತವಕ್ಕೂ ಇವೆರಡೂ ಗ್ರಹಗಳು ಪರಿವರ್ತನಾ ಸ್ಥಿತಿಯಲ್ಲಿ, ತಮ್ಮ ತಮ್ಮ ಮನೆಗಳನ್ನು ಬದಲಾವಣೆ ಮಾಡಿಕೊಂಡ ಫಲವಾಗಿ ಅತ್ಯಂತ ದುರ್ಬಲ ಸ್ಥಿತಿಯನ್ನು ಪಡೆಯಬೇಕಾದುದು ಅನಿವಾರ್ಯವಾಗಿತ್ತು. ಆದರೆ ಗುರು ಗ್ರಹದ ಕಾರಣದಿಂದಾಗಿ ಈ ಎರಡೂ ಗ್ರಹಗಳು ನೀಚ ಭಂಗ ರಾಜಯೋಗವನ್ನು ಪಡೆದು, ತಮ್ಮ ತಮ್ಮದೇ ಆದ ಬಲಾಢ್ಯತೆಯನ್ನು ಪಡೆದ ಸಂಪನ್ನ ಆರೋಗ್ಯಕರ ಮೇಲ್ಮೆಯನ್ನು ಸಂಪಾದಿಸಿಕೊಂಡಿವೆ. ಜತೆಗೆ ಅಷ್ಟಮ ಸ್ಥಾನದ ಅಧಿಪತಿಯಾಗಿ ತನ್ನ ಆಂತರ್ಯದಲ್ಲಿ ಗುರುಗ್ರಹ ಘಾತಕ ಶಕ್ತಿಯನ್ನು ಪಡೆದಿದ್ದರೂ ಶುಭ ಗ್ರಹವಾಗಿ ಕುಂಭ ರಾಶಿಯಲ್ಲಿ ಕುಳಿತಿರುವುದು, ಇವರ ಜನ್ಮ ಕುಂಡಲಿಯ ಅತ್ಯಂತ ಪ್ರಧಾನ ಗ್ರಹವಾದ ಶುಕ್ರ ಗ್ರಹವನ್ನು ಅದರ ಪಾಪ ಸ್ಥಿತಿಯಿಂದ ಮೇಲೆತ್ತಿ ನಂಬಲಸಾಧ್ಯವಾದ ಅಮೃತತ್ವವನ್ನು ಒದಗಿಸಿದೆ.

ಗುರು ಗ್ರಹದ ದೃಷ್ಟಿ ಸದಾ ಶುಭಕರವಾದುದು. ಜನ್ಮ ಕುಂಡಲಿಯಲ್ಲಿ ಗುರು ಎಷ್ಟೇ ದುಷ್ಟತನ ಪಡೆದಿದ್ದರೂ ಗುರು ಗ್ರಹದ ದೃಷ್ಟಿಗೆ ಮಾತ್ರ ಅಮೃತತ್ವ ಅಬಾಧಿತ. ಹೀಗಾಗಿ ಶುಕ್ರ ಗ್ರಹ, ಪ್ರಲ್ಹಾದ ಜೋಶಿಯವರಿಗೆ, ವೈರಿಗಳಿಂದಲೂ ಸಹಾಯ ದೊರಕುವ ಸಿದ್ಧಿಯನ್ನು ದೊರಕಿಸಿಕೊಟ್ಟಿದೆ. ಈ ಕಾರಣದಿಂದಲೇ ಪ್ರಲ್ಹಾದ ಜೋಶಿಯವರು ಸದ್ಯದ ಕರ್ನಾಟಕ ರಾಜ್ಯದ ರಾಜಕೀಯದಲ್ಲಿ ಒಂದು ಮಹತ್ವದ ಸ್ಥಾನಮಾನ ಪಡೆದು ಕೇಂದ್ರದ ಮಂತ್ರಿ ಮಂಡಲದಲ್ಲಿಯೂ ಪ್ರಮುಖ ಖಾತೆಯನ್ನು ಹೊಂದಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕ ರಾಜ್ಯದ ಆಡಳಿತ ಪಕ್ಷವಾದ ಕಾಂಗ್ರೆಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಧಾನ ಪಾತ್ರ ನಿರ್ವಹಿಸಲು ಸಜ್ಜಾದರೆ ಪ್ರಹ್ಲಾದ ಜೋಶಿಯವರು ಬಹುದೊಡ್ಡ ಯಶಸ್ಸನ್ನು ಸಂಪಾದಿಸಲು ನಿಸ್ಸಂಶಯವಾಗಿ ಶುಕ್ರ ಗ್ರಹ ನಿಚ್ಚಳವಾಗಿಯೇ ಸಹಕರಿಸುತ್ತಾನೆ. ಅಂದರೆ ಇಚ್ಛಾ ಶಕ್ತಿಯ ಪ್ರದರ್ಶನಕ್ಕೆ ಜೋಶಿಯವರ ಕಾರ್ಯ ತಂತ್ರಗಳು ತಮ್ಮ ಬಲಿಷ್ಠ ಚೌಕಟ್ಟನ್ನು ರೂಪಿಸಿಕೊಳ್ಳಬೇಕಿವೆ.

ಇದರ ಅರ್ಥ ಇವರನ್ನು ತಡೆಯುವ ಮತ್ತೊಂದು ನಕಾರಾತ್ಮಕ ಶಕ್ತಿ ಕರ್ನಾಟಕದಲ್ಲಿ ಸದ್ಯ ದುರ್ಬಲವಾಗಿದೆಯೇ ಎಂಬ ಪ್ರಶ್ನೆ ಎದ್ದರೆ ‘ಹೌದು, ದುರ್ಬಲವಾಗಿದೆ’ ಎಂದು ಗಟ್ಟಿಯಾಗಿ ಹೇಳಲು ಸಾಧ್ಯವಿಲ್ಲ. ಅದಾಗ್ಯೂ ಈಗ ಈ ನಕಾರಾತ್ಮಕ ಶಕ್ತಿ ಸಹಜವಾಗಿಯೇ ಎಷ್ಟು ದುರ್ಬಲತೆ ಪಡೆದಿದೆಯೋ ಅದನ್ನೂ ಮೀರಿ ತನ್ನದೇ ಆದ ನೆಲೆಯಲ್ಲಿ ಬಲವನ್ನು ಶೇಖರಿಸಿಕೊಳ್ಳಲು ಜೋಶಿಯವರು ಪ್ರಯತ್ನಕ್ಕೆ
ಮುಂದಾದರೆ ಇವರ ಜನ್ಮ ಕುಂಡಲಿಯ ಶುಕ್ರ ಗ್ರಹ ಸಹಕರಿಸಬಹುದಾಗಿದೆ.

ಚಂದ್ರ ಗ್ರಹ ಮತ್ತು ಶನಿ ಗ್ರಹ ತಿಕ್ಕಾಟ

ಸದ್ಯ ಜೋಶಿಯವರ ಜಾತಕ ಕುಂಡಲಿಯ ಪ್ರಕಾರ ಪಂಚಮ ಶನಿ ಕಾಟದಲ್ಲಿ ಜೋಶಿಯವರ ವರ್ತಮಾನ ಕೆಲವು ಬಿಕ್ಕಳಿಕೆಗಳನ್ನು ಹೊಂದಿವೆ. ಮುಖ್ಯವಾದ ಬಿಕ್ಕಳಿಕೆ ಏನೆಂದರೆ, ಪಕ್ಷದ ಒಳಗೇ ಕೆಲವು ಪ್ರತಿರೋಧಗಳನ್ನು ಎದುರಿಸಲು ಜೋಶಿಯವರು ಸಿದ್ಧರಾಗಬೇಕಾದುದು. ಶನಿಗ್ರಹ ಕಾಟದ ವಿಚಾರವು ಹೆಚ್ಚಿನ ಮಟ್ಟಿಗೆ ತಾಪತ್ರಯದಾಯಕವಾಗುವುದು ಯಾಕೆಂದರೆ ಇವರ ಕುಂಡಲಿಯಲ್ಲಿ ಶನಿ ಗ್ರಹದ ಜತೆಗೇ,ವಿಷಕಾರಕ ಕೇತು ಗ್ರಹ ಸಂಯೋಜನೆ ಆಗಿರುವುದರಿಂದ. ಹೀಗಾಗಿ ಶನಿ ಕಾಟದ ಕಾರಣದಿಂದಾಗಿ (ಚಂದ್ರ ಮತ್ತು ಶನೈಶ್ಚರ ತಿಕ್ಕಾಟದ ನಡುವೆ) ಕೆಲವು ಅಸಹಾಯಕತೆ ತರುವ ಸಂದರ್ಭಗಳು ಜೋಶಿಯವರ ಬೆನ್ನು ಹತ್ತುವ ಸಾಧ್ಯತೆಗಳು ಜಾಸ್ತಿ ಇರುತ್ತವೆ. ಬುದ್ಧಿಮತ್ತೆಯಿಂದ ಹಲವಾರು ಅಸಹಾಯಕ ಸಂದರ್ಭಗಳನ್ನು ನಿವಾರಿಸಿಕೊಳ್ಳುವ ಸೂಕ್ತ ಬಲವನ್ನು ಜೋಶಿ ಪಡೆದಿರುವರಾದರೂ ಸೂರ್ಯ ಹಾಗೂ ಚಂದ್ರರು ತೀರಾ ದೊಡ್ಡ ಅಂತರವನ್ನು ಹೊಂದದೇ ಇರುವ ಏಕ ಗೃಹ ಸಂಯೋಜನೆಯಿಂದಾಗಿ, ಹಲವು ಇಕ್ಕಟ್ಟುಗಳು ಕೆನೆಗಟ್ಟುವ ಸಂಭಾವ್ಯತೆ ಅಧಿಕ.ಹೀಗಾಗಿ ಬರುವ ಮುಂದಿನ ಎರಡೂ ಕಾಲು ವರ್ಷಗಳು ಜೋಶಿಯವರ ಮಟ್ಟಿಗೆ ಹೇಳುವುದಾದರೆ ಪರೀಕ್ಷೆಯ ದಿನಗಳು.

ಆದಾಗ್ಯೂ ಇವರ ಜಾತಕ ಕುಂಡಲಿಯ ಬುಧಾದಿತ್ಯ ಯೋಗವು ಕ್ಲಪ್ತ ಕಾಲಕ್ಕೆ ಅದೃಷ್ಟದ ಆವರಣ ಒದಗಿಸಿ ಸತ್ವ ಪರೀಕ್ಷೆಗಳನ್ನು ತಾಳ್ಮೆಯಿಂದ ಎದುರಿಸುವ ಶಕ್ತಿ ನೀಡುತ್ತದೆ. ಶನಿ ಗ್ರಹವು ಕಾಟದ ಶನಿಯಾದರೂ ಸದ್ಯ ಗೋಚರದ ಕಾಲ ಘಟ್ಟದಲ್ಲಿ ಜಲ ರಾಶಿಯಾದ ಮೀನ ರಾಶಿಯಲ್ಲಿದೆ. ಮೀನ ರಾಶಿಯಲ್ಲಿ ಶನಿ ಗ್ರಹದ ಒಡೆತನದ ಉತ್ತರಾಭಾದ್ರ ನಕ್ಷತ್ರವೂ ಸೇರಿರುವುದರಿಂದ ಇಂದ ಬಿಜೆಪಿ ಪಕ್ಷ ಕರ್ನಾಟಕದಲ್ಲಿ ಎದುರಿಸುತ್ತಿರುವ ಹಲವು ಬಿಕ್ಕಟ್ಟುಗಳನ್ನು ಎಲ್ಲಿ? ಹೇಗೆ? ಎಷ್ಟು ನಿವಾರಿಸಬಹುದು? ಎಂಬುದರ ಬಗೆಗಿನ ಚಾಣಾಕ್ಷತೆಯನ್ನು ಜೋಶಿ ಪ್ರದರ್ಶಿಸಬಹುದಾಗಿದೆ.

ಈ ಹಿಂದೆ ಅನಂತ ಕುಮಾರ್ ಅವರು ರಾಮಕೃಷ್ಣ ಹೆಗಡೆಯವರನ್ನು ತನ್ನ ಪ್ರತಿಸ್ಪರ್ಧಿ ಎಂದು ತಿಳಿದರೇ ವಿನಾ ಅವರ ಮೂಲಕ ಹಲವಕ್ಕೆ ಕೈ ಚಾಚುವ ಸಾಧ್ಯತೆಯ ಬಗ್ಗೆ ಮನಸ್ಸು ಮಾಡಲಿಲ್ಲವೇನೋ ಎಂದು
ಜನರು ಅಲ್ಲಲ್ಲಿ ಹೇಳುವುದನ್ನು ಕೇಳಿದ್ದೇವೆ.

ಜೋಶಿಯವರಿಗೆ ಹಲವಕ್ಕೆ ಕೈ ಚಾಚಲು ಸದ್ಯದ ಕಾಲ ಘಟ್ಟದಲ್ಲಿ ನೀಚಭಂಗ ರಾಜ ಯೋಗ ಪಡೆದಿರುವ ಕುಜ ಗ್ರಹವು ಅನುಕೂಲಕರವಾಗಿದೆ. ಇದರಿಂದಾಗಿ ಪಕ್ಷದ ಬಿಕ್ಕಟ್ಟನ್ನು ಕರ್ನಾಟಕದಲ್ಲಿ ಪರಿಹರಿಸಲು ಬೇಕಾದ ಕೌಶಲ್ಯವನ್ನು ಕೇಂದ್ರ ಸಚಿವ ಜೋಶಿ ಸಾಧ್ಯ ಮಾಡಿಕೊಳ್ಳಲು, 2026 ಜೂನ್ ನಂತರ ಹೆಚ್ಚಿನ ವಿಪುಲ ಅವಕಾಶವನ್ನು ಗುರು ಗ್ರಹ ಒದಗಿಸಲು ಗಟ್ಟಿಯಾದ ಸಾಧ್ಯತೆ ಇದೆ.

ಹಾಗೆಯೇ ಕರ್ನಾಟಕದ ಆಡಳಿತಾರೂಢ ಪಕ್ಷವಾದ ಕಾಂಗ್ರೆಸ್ನ ಅಂತರ್ಗತ ತಲ್ಲಣವಿರುವ ಸದ್ಯದ ಸಂದರ್ಭದಲ್ಲಿ ಜೋಶಿಯವರು ಎನ್ಡಿಎ ಒಕ್ಕೂಟದ ಭಾಗವೇ ಆಗಿರುವ ಜೇಡಿಎಸ್ನ ಕುಮಾರಸ್ವಾಮಿಯವರ ಜತೆಗೂಡಿ ಭವಿಷ್ಯದಲ್ಲಿ ಇಡಬಹುದಾದ ಹೆಜ್ಜೆಗಳಿಗೆ ಜೋಶಿಯವರು ಯೋಚಿಸಬೇಕಿದೆ. ಈ ನಿಟ್ಟಿನಲ್ಲಿ ಜನ್ಮ ಕುಂಡಲಿಯ ಕುಜ ಗ್ರಹ ಒಂದು ಪ್ರಾಬಲ್ಯವನ್ನು ಪ್ರಲ್ಹಾದ ಜೋಶಿ ಬಗ್ಗೆ ಕೊಡಬಹುದಾಗಿದೆ. ಉತ್ತರ ಕರ್ನಾಟಕ ಭಾಗದ ಸದ್ಯದ ರಾಜಕೀಯದ ಒಳ ಹೊರದ ಬಗ್ಗೆ ಪೂರ್ತಿ ಅರಿವು ಹೊಂದಿರುವ ಪ್ರಲ್ಹಾದ ಜೋಶಿ ಸ್ವತಃ ತಾವೇ ಶಕ್ತಿ ಕೇಂದ್ರವಾಗಲು ಇವರ ಜನ್ಮ ಕುಂಡಲಿಯ ಶುಕ್ರ ಗ್ರಹ ಇವರಿಗೆ ಅನುಕೂಲಕರವಾಗಿದೆ. ಭಾಜಪದ ಈಗಾಗಲೇ ಇರುವ ಶಕ್ತಿಯನ್ನು ಇನ್ನೂ ಇಷ್ಟು ಹೆಚ್ಚೇ ಸಂವರ್ಧಿಸಬಹುದಾದ ಕಸುವನ್ನು ಜೋಶಿ ತೋರಬಹುದಾಗಿದೆ.

2019ರಲ್ಲಿ ಕೇಂದ್ರ ಸರಕಾರದಲ್ಲಿ ಮಂತ್ರಿ ಸ್ಥಾನ

ನೀಚ ಭಂಗ ರಾಜ ಯೋಗ ಹೊಂದಿರುವ ಚಂದ್ರ ಗ್ರಹ,ಕುಂಭ ರಾಶಿಯಲ್ಲಿ ಕುಳಿತ ಗುರು ಗ್ರಹದ ಶುಭ ದೃಷ್ಟಿ, ಜೋಶಿಯವರ ಜನ್ಮ ಕುಂಡಲಿಯಲ್ಲಿ ಶುಕ್ರ ಗ್ರಹದ ಮೇಲಿದ್ದುದರಿಂದಲೂ ಜೋಶಿಯವರನ್ನು 2019 ರಲ್ಲಿ ನರೇಂದ್ರ ಮೋದಿ ಅವರ ಹಿರಿತನದ ಎರಡನೇ ಅವಧಿಯ ಕಾಲ ಘಟ್ಟದಲ್ಲಿ ಕೇಂದ್ರ ಸರಕಾರದ ಮಂತ್ರಿ ಮಂಡಳದಲ್ಲಿ ಮಂತ್ರಿಯಾಗಿ, ಅದೂ ಕ್ಯಾಬಿನೆಟ್ ದರ್ಜೆ ಮಂತ್ರಿಯಾಗಿ ಅಧಿಕಾರ ಹಿಡಿಯಲು ಸಾಧ್ಯವಾಗಿಸಿದೆ ಎಂಬುದು ಅತ್ಯಂತ ಗಮನಾರ್ಹ. ಇದೂ ಒಂದು ವಿಶಿಷ್ಟ ಹಾಗೂ ಮಹತ್ವದ ಬೆಳವಣಿಗೆ ಆಗಿದೆ.

ಅದೃಷ್ಟದ ಅಲೆಗಳು ಒಬ್ಬ ವ್ಯಕ್ತಿಯು ಮೇಲೆ ಬರಲು ಹೇಗೆ ಅರ್ಥಪೂರ್ಣ ವಾತಾವರಣ ಒಂದನ್ನು ನಿರ್ಮಿಸಿ ವಾಗಿ ಸಹಕರಿಸುತ್ತವೆ ಎಂಬುದಕ್ಕೆ ಜೋಶಿಯವರು ಬಹು ಸ್ಪಷ್ಟ ಉದಾಹರಣೆಯಾಗಿ ನಿಲ್ಲುತ್ತಾರೆ. ಹಾಗೆಯೇ ಒದಗಿದ ಅವಕಾಶವನ್ನು ಹೇಗೆ ಇನ್ನೂ ಇಷ್ಟು ಮುತುವರ್ಜಿಯಿಂದ ಸಫಲತೆಯ ಇನ್ನೊಂದು ಮಗ್ಗುಲಿಗೆ, ಸರಳ ವಿಧಾನದೊಂದಿಗೆ ವಿವೇಚನೆಯ ಮೂಲಕ ಹೊರಳಿಸಿಕೊಳ್ಳಬಹುದು ಎಂಬ ಚಾಣಾಕ್ಷತೆಯನ್ನು ಜೋಶಿಯವರು ಮುಖ್ಯವಾಗಿ ರಾಹುವಿನಿಂದ ಪಡೆದಿದ್ದಾರೆ. ಈ ಚಾಣಾಕ್ಷತೆಯ ಪೂರ್ಣ ಅನುಷ್ಠಾನಕ್ಕೆ ಜೋಶಿಯವರು ಸದ್ಯ ಮುಂದಾಗಬೇಕು. ಹಾಗಾದರೆ ಈ ವಿಶಿಷ್ಟ ಚಾಣಾಕ್ಷತನ ಹಾಗೆ ಸುಲಭವಾಗಿ ಜೋಶಿಯವರಿಗೆ ದಕ್ಕುತ್ತದೆಯೇ ಎಂಬ ವಿಚಾರ ಎದುರಾಗುತ್ತದೆ. ಈ ವಿಚಾರದ ಸದ್ಯ ಶನಿ ಕಾಟದ ಬೇಗುದಿಯಲ್ಲಿರುವ ಅಡೆತಡೆ ಇವನ್ನೆಲ್ಲ ಜೋಶಿ ನಿಭಾಯಿಸಿದರೆ ಅನೇಕ ಮಹತ್ವದ ಬದಲಾವಣೆಗಳು ಕರ್ನಾಟಕದಲ್ಲಿ ಸಂಭವಿಸಲು ಅವಕಾಶಗಳು ಹೇರಳವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.