ಜನವರಿ 25ರ ಭಾನುವಾರದಂದು ರಥಸಪ್ತಮಿ ಅಥವಾ ಸೂರ್ಯ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನ ಸೂರ್ಯನಾರಾಯಣ ಜನಿಸಿದನೆಂದು ಪುರಾಣ ಕಥೆಗಳು ಹೇಳುತ್ತವೆ. ಬೆಳಿಗ್ಗೆ ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ ಸೂರ್ಯನಿಗೆ ಪೂಜೆ ಸಲ್ಲಿಸುವುದು ಶ್ರೇಷ್ಠವೆಂಬ ನಂಬಿಕೆ ಇದೆ.

ಉತ್ತರಾಯಣ ಪುಣ್ಯಕಾಲದ ಆರಂಭದ ನಂತರ, ಸೂರ್ಯನು ತನ್ನ ಏಳು ಕುದುರೆಗಳ ರಥವನ್ನು ಉತ್ತರ ದಿಕ್ಕಿನತ್ತ ತಿರುಗಿಸಿ ಸಂಚರಿಸುವ ದಿನವೇ ರಥಸಪ್ತಮಿಯಾಗಿದೆ.

ಏಳು ಕುದುರೆಗಳು ಏಳು ವಾರಗಳನ್ನು ಹಾಗೂ ರಥದ ಹನ್ನೆರಡು ಚಕ್ರಗಳು ವರ್ಷದ 12 ರಾಶಿಗಳನ್ನು ಸಂಕೇತಿಸುತ್ತವೆ.
.ವಸಂತ ಪಂಚಮಿ: ವಿದ್ಯೆ, ಬುದ್ಧಿಗಾಗಿ ಸರಸ್ವತಿ ಆರಾಧಿಸಲು ಈ ಶ್ಲೋಕ ಪಠಿಸಿ.
ಸ್ನಾನಕ್ಕೆ ಬಿಳಿ ಎಕ್ಕ ಶ್ರೇಷ್ಠ

ಈ ದಿನ ನೀರಿಗೆ ಬಿಳಿ ಎಕ್ಕದ ಏಳು ಎಲೆ ಹಾಗೂ ಸ್ವಲ್ಪ ಅರಿಸಿಣ ಸೇರಿಸಿ ಸ್ನಾನ ಮಾಡುವ ರೂಢಿಯಿದೆ. ನಂತರ ತಲೆಯ ಮೇಲೆ ಒಂದು ಎಕ್ಕದ ಎಲೆ, ಎರಡೂ ಭುಜಗಳ ಮೇಲೆ ಒಂದೊಂದು, ಮುಂಗಾಲಿನ ಮೇಲೆ ಎಲೆ ಇಟ್ಟುಕೊಂಡು ಸ್ನಾನ ಮಾಡುವುದು ಶ್ರೇಷ್ಠವಾಗಿದೆ.

ಸೂರ್ಯೋದಯದ ಸಮಯದಲ್ಲಿ ಸೂರ್ಯನಾರಾಯಣನಿಗೆ ದೀಪವನ್ನು ಬೆಳಗಿಸಿದರೆ ವರ್ಷ ಪೂರ್ತಿ ಸುಖ, ಶಾಂತಿ ಹಾಗೂ ನೆಮ್ಮದಿ ಲಭಿಸುತ್ತದೆ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ರಥಸಪ್ತಮಿಯನ್ನು ಶ್ರದ್ಧೆ ಭಕ್ತಿಯಿಂದ ಆಚರಿಸುವುದರಿಂದ ನಾರಾಯಣ ಹಾಗೂ ಲಕ್ಷ್ಮೀ ದೇವಿಯ ಕೃಪೆ ಪ್ರಾಪ್ತವಾಗುತ್ತದೆ. ಈ ದಿನ ಗೋಧಿ, ಸಕ್ಕರೆ ಹಾಗೂ ವಸ್ತ್ರ ದಾನದಿಂದ ಶುಭಪಲ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.