ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಕಾರಕತ್ವ ತುಂಬಾ ಮುಖ್ಯವಾದುದು. ಎಂದರೆ ಪ್ರತಿ ಗ್ರಹವೂ ಕೆಲವು ನಿರ್ದಿಷ್ಟ ಅಂಶಗಳು, ಸಂಬಂಧಗಳು ಮತ್ತು ಜೀವನದ ಘಟನೆಗಳನ್ನು ಸಂಕೇತಿಸುವುದೇ ಅದರ ಕಾರಕತ್ವ. ಉದಾಹರಣೆಗೆ, ಸೂರ್ಯನು ತಂದೆ ಅಥವಾ ರಾಜನ ಸಂಕೇತವಾದರೆ, ಚಂದ್ರನು ತಾಯಿಯ ಸಂಕೇತ. ಈ ಕಾರಕತ್ವಗಳು ಜಾತಕದ ವಿಶ್ಲೇಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಏಕೆಂದರೆ ಅವು ನಿರ್ದಿಷ್ಟ ವಿಷಯಗಳ ಸಂಭವನೀಯತೆಯನ್ನು ಮತ್ತು ಅವುಗಳ ಫಲಿತಾಂಶಗಳನ್ನು ನಿರ್ಧರಿಸಲು ಸಹಾಯ ಮಾಡುತ್ತವೆ. ಈ ಕಾರಕತ್ವದ ಆಧಾರದಲ್ಲಿ ಮತ್ತು ಜಾತಕದಲ್ಲಿ ಅನ್ಯ ರಾಶಿಗಳ ಸ್ಥಿತಿಗತಿಯ ಆಧಾರದಲ್ಲಿ ಜ್ಯೋತಿಷ್ಯದ ಲೆಕ್ಕಾಚಾರ ನಡೆಯುತ್ತದೆ. ಮಕರ ಮತ್ತು ಕುಂಭದ ಅಧಿಪತಿಯಾಗಿರುವ ಶನಿ ಗ್ರಹ ಮನುಷ್ಯನ ಜಾತಕದ ಮೇಲೆ ಪ್ರಭಾವ ಬೀರಬಹುದಾದ ಗುಣಗಳನ್ನು ತಿಳಿದುಕೊಳ್ಳೋಣ.

ಶನಿ ಗ್ರಹ: ಮಕರ ಮತ್ತು ಕುಂಭದ ಅಧಿಪತಿ ಶನಿ ದೇವ. ಶನಿ ಗ್ರಹ ಇಲ್ಲಿ ಪೃಥ್ವಿ ತತ್ವ ಹಾಗೂ ವಾಯು ತತ್ವದ ಅಧಿಪತಿಯಾಗಿದ್ದಾನೆ. ಇಲ್ಲಿ ಕುಂಭದ ಶನಿಗೆ ಬಹಳ ಮಹತ್ವ ಉಂಟು. ಅಂದರೆ ವಾಯು ತತ್ವದ ಶನಿ ದೇವನಿಗೆ. ಹಾಗೆಯೇ ಮಿಥುನದ ವಾಯು ತತ್ವದ ಬುಧನಿಗೆ ಮಹತ್ವ ಇದೆ. ಇವರುಗಳು ಬಡಕಲು ಶರೀರದವರು ಆಗಿರುತ್ತಾರೆ. ಇವರದ್ದು ಬಣ್ಣ ಕಪ್ಪು. ರೋಗಗ್ರಸ್ಥರಾಗಿ ಕಾಣಿಸುತ್ತಾರೆ. ಒಳ್ಳೆಯ ಶ್ರಮ ಜೀವಿಗಳು ಆಗಿರುತ್ತಾರೆ. ಕುಂಭ ರಾಶಿಯವರು ತತ್ವಜ್ಞಾನಿಗಳು ಆಗಿರುತ್ತಾರೆ.

ಇವರು ಸಿದ್ಧಾಂತದ ಮೇಲೆ ನಂಬಿಕೆಯನ್ನು ಇಡುವವರು. ಯಾರೂ ಮಾಡದ ಕೆಲಸವನ್ನು ಇವರು ಮಾಡುತ್ತಾರೆ. ಇವರು ತಾಂತ್ರಿಕ ವರ್ಗದಲ್ಲಿ ಕೆಲಸವನ್ನು ಮಾಡುವವರು ಆಗಿರುತ್ತಾರೆ. ಯಾವಾಗಲೋ ಮನೆಗೆ ಬರುತ್ತಾರೆಂದರೆ, ಅವರುಗಳು ಶನಿ ತತ್ವದವರು. ಇವರುಗಳು ಒಳ್ಳೆಯ ಸಮಾಜ ಸೇವಕರು ಆಗಿದ್ದಾರೆ. ಅದೇ ಗುರು ತತ್ವದವರು, ಸಮಾಜ ಕಲ್ಯಾಣಕ್ಕೆ ಪ್ರಾತಿನಿಧ್ಯ ಕೊಡುವವರು ಆಗಿದ್ದಾರೆ. ಬಹಳ ಮುಖ್ಯವಾಗಿ ಇವರುಗಳು ಒಳ್ಳೆಯ ನ್ಯಾಯವಾದಿಗಳು. ಗೆಲ್ಲುವ ತನಕ ಹೋರಾಟವನ್ನು ಮಾಡುವಂತಹ ನಿಧಾನಿಗಳು. ಕಾರಣ ಶನಿಯು ಮಂದ ಗ್ರಹ. ತಾಳ್ಮೆ ಬಹಳ ಇರುತ್ತದೆ. ಅದೇ ಬುಧ ಗ್ರಹ ಬೇಗ ಹೋಗಿ ಕೆಲಸವನ್ನು ಮುಗಿಸಿಯೇ ಬಿಡುತ್ತಾರೆ.
.ವೃಷಭ, ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹ: ಶಕ್ತಿ, ಗುಣಗಳ ಬಗ್ಗೆ ತಿಳಿದುಕೊಳ್ಳಿ.ಗುರು ಗ್ರಹ ಕಾರಕತ್ವ: ಧನಸ್ಸು, ಮೀನ ರಾಶಿಯ ಅಧಿಪತಿ ಗುಣಗಳ ಬಗ್ಗೆ ತಿಳಿದುಕೊಳ್ಳಿ.
ತಾಳ್ಮೆಯ ಗ್ರಹ ಆಗಿದ್ದರಿಂದ ಕೆಟ್ಟ ಶನಿ ಇದ್ದಲ್ಲಿ ಅವರು ಬಹಳ ಮೋಸಗಾರರು ಆಗಿರುತ್ತಾರೆ. ಕಳ್ಳತನ ಮಾಡುವವರು, ಕೆಟ್ಟ ಚಟಗಳಿಗೆ ಬಲಿಯಾಗುವವರು, ಇವರುಗಳು ಕೆಟ್ಟದ್ದನ್ನು ಮಾಡಲೂ ತಾಳ್ಮೆಯಿರುತ್ತದೆ. ತಂತ್ರಜ್ಞಾನ ಒಳ್ಳೆಯ ರೀತಿಯಲ್ಲಿ ನಿಭಾಯಿಸುವವರು, ಹಾಗೂ ಸಂಶೋಧನೆಯನ್ನು ಮಾಡುವವರು ಆಗಿರುತ್ತಾರೆ. ಬಡಕಲು ಶರೀರವಾದರೂ ಒಳ್ಳೆಯ ಬಲವಿರುವಂತಹ ಮೂಳೆಗಳನ್ನ ಹೊಂದಿದವರು. ಆದರೆ ಅದೇ ಮೂಳೆಯಲ್ಲಿ ಶಕ್ತಿ ಹೀನತೆಯನ್ನೂ ಕಾಣುವವರು.

ಇವರಿಗೆ ಮೊಣಕಾಲಿನ ನೋವು ಕಾಣಿಸಿಕೊಳ್ಳುತ್ತವೆ. ಹೊಟ್ಟೆ ಸಂಬಂಧಿತ ತೊಂದರೆಗಳು ಸರ್ವೇ ಸಾಮಾನ್ಯ. ಜನ ಸಂಘಟನೆಯನ್ನು ಮಾಡುವವರು ಆಗಿರುತ್ತಾರೆ. ಅದೇ ಮುಷ್ಕರವನ್ನೂ ಮಾಡುವವರು ಆಗಿರುತ್ತಾರೆ. ಕೊಳಕು ವಸ್ತ್ರವನ್ನು ಧರಿಸುವವರು. ಕೊಳಕು ಮನೆಯಲ್ಲಿ ನೆಲೆಸುತ್ತಾ ಇರುತ್ತಾರೆ. ಯಾರಿಗೆ ಶನಿಯು ಪ್ರಬಲವಾಗಿದ್ದಾನೋ, ಅವರುಗಳು ಕಲ್ಲಿನ ಇಟ್ಟಿಗೆಯ ಮನೆಯನ್ನ ಕಟ್ಟುವವರು. ಅದೇ ಕೆಟ್ಟ ಶನಿ ಇದ್ದಲ್ಲಿ, ಹಂಚಿನ ಮನೆಯಲ್ಲಿ ತಂಗುವವರು. ಬಾಗಿಲು ತೂತಾಗಿ ಕಾಣಿಸುತ್ತದೆ.

ಇನ್ನು, ಕುಜ (ಮಂಗಳ) ಗ್ರಹದಷ್ಟೇ ಪ್ರಭಾವ ಹೊಂದಿರುವ ಗ್ರಹವಾಗಿದೆ. ಕುಜನ ತತ್ವವನ್ನು ಹೊಂದಿರುವ ಗೃಹ ಕೇತು. ರಾಹು ಗ್ರಹವು ಶನಿ ತತ್ವದ ಮೇಲೆಯೇ ನಿರ್ಧರಿಸಿದೆ. ಅಂದರೆ ರಾಹುವಿನ ತತ್ವಗಳೆಲ್ಲಾ ಶನಿಯ ತತ್ವದ್ದು. ಅದೇ ಕೇತು ಗ್ರಹವು, ಕುಜ ಗ್ರಹದ ಮೇಲೆಯೇ ನಿರ್ಧರಿಸಿದೆ. ಕೇತುವಿನ ತತ್ವಗಳೆಲ್ಲಾ ಕುಜನ ತತ್ವದ್ದು ಆಗಿರುತ್ತದೆ.

ಲೋಹ: ಕಬ್ಬಿಣ

ಸಂಖ್ಯೆ: 8

ಕಾರಕತ್ವ: ಆಯುಷ್ಯ

ಉಚ್ಚರಾಶಿ: ತುಲಾ

ನೀಚ ರಾಶಿ: ಮೇಷ

ಉಚ್ಚಾಂಷ: 2೦

ದಿಕ್ಕು: ಪಶ್ಚಿಮ

ಅಂಗಾಂಗ: ಸ್ನಾಯು

ಇಂದ್ರಿಯ: ಚರ್ಮ

ಧಾನ್ಯ: ಎಳ್ಳು

ಕಾರಕ: ವಾತ

ದೃಷ್ಟಿ: 3, 7, ಮತ್ತು 10

ಮಿತ್ರ ಗ್ರಹಗಳು: ಶುಕ್ರ ಮತ್ತು ಬುಧ

ಶತ್ರು ಗ್ರಹ: ಸೂರ್ಯ ಮತ್ತು ಕುಜ

ದಶಾವರ್ಷ: 19 ವರ್ಷಗಳು

ಸಮ ಗ್ರಹ: ಚಂದ್ರ ಮತ್ತು ಗುರು
.ಚಂದ್ರ ಗ್ರಹ ಕಾರಕತ್ವ: ಕಟಕ ರಾಶಿಯ ಅಧಿಪತಿ ಗುಣಗಳು, ಶಕ್ತಿ ಬಗ್ಗೆ ತಿಳಿದುಕೊಳ್ಳಿ.ಕುಂಡಲಿಯಲ್ಲಿ ಗ್ರಹಗಳು ಪ್ರಬಲವಾಗಿದ್ದರೆ ಮಾತ್ರ ರಾಜ ಯೋಗ: ಇಲ್ಲವಾದಲ್ಲಿ ಅಧೋಗತಿ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.