ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಕಾರಕತ್ವ ತುಂಬಾ ಮುಖ್ಯವಾದುದು. ಎಂದರೆ ಪ್ರತಿ ಗ್ರಹವೂ ಕೆಲವು ನಿರ್ದಿಷ್ಟ ಅಂಶಗಳು, ಸಂಬಂಧಗಳು ಮತ್ತು ಜೀವನದ ಘಟನೆಗಳನ್ನು ಸಂಕೇತಿಸುವುದೇ ಅದರ ಕಾರಕತ್ವ. ಉದಾಹರಣೆಗೆ, ಸೂರ್ಯನು ತಂದೆ ಅಥವಾ ರಾಜನ ಸಂಕೇತವಾದರೆ, ಚಂದ್ರನು ತಾಯಿಯ ಸಂಕೇತ. ಈ ಕಾರಕತ್ವಗಳು ಜಾತಕದ ವಿಶ್ಲೇಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಏಕೆಂದರೆ ಅವು ನಿರ್ದಿಷ್ಟ ವಿಷಯಗಳ ಸಂಭವನೀಯತೆಯನ್ನು ಮತ್ತು ಅವುಗಳ ಫಲಿತಾಂಶಗಳನ್ನು ನಿರ್ಧರಿಸಲು ಸಹಾಯ ಮಾಡುತ್ತವೆ. ಈ ಕಾರಕತ್ವದ ಆಧಾರದಲ್ಲಿ ಮತ್ತು ಜಾತಕದಲ್ಲಿ ಅನ್ಯ ರಾಶಿಗಳ ಸ್ಥಿತಿಗತಿಯ ಆಧಾರದಲ್ಲಿ ಜ್ಯೋತಿಷ್ಯದ ಲೆಕ್ಕಾಚಾರ ನಡೆಯುತ್ತದೆ. ಕಳೆದ ಲೇಖನದಲ್ಲಿ ಸಿಂಹ ರಾಶಿಯ ಅಧಿಪತಿಯಾಗಿರುವ ರವಿಯು ಮನುಷ್ಯನ ಜಾತಕದ ಮೇಲೆ ಹೇಗೆ ಪ್ರಭಾವ ಬೀರುತ್ತಾನೆ ಎಂದು ತಿಳಿಸಲಾಗಿತ್ತು. ಈಗ ಕಟಕ ರಾಶಿಯ ಅಧಿಪತಿಯಾಗಿರುವ ಚಂದ್ರ ಮನುಷ್ಯನ ಜಾತಕದ ಮೇಲೆ ಪ್ರಭಾವ ಬೀರಬಹುದಾದ ಗುಣಗಳನ್ನು ತಿಳಿದುಕೊಳ್ಳೋಣ.
.ರವಿ ಗ್ರಹ ಕಾರಕತ್ವ: ಸಿಂಹ ರಾಶಿಯ ಅಧಿಪತಿ ಗುಣಗಳು, ಶಕ್ತಿಗಳ ಬಗ್ಗೆ ತಿಳಿದುಕೊಳ್ಳಿ.
ಚಂದ್ರ ಗ್ರಹ: ಚಂದ್ರನು ಕಟಕ ರಾಶಿಯ ಅಧಿಪತಿಯಾಗಿರುತ್ತಾನೆ. ಇದು ಜಲತತ್ವದ ಗ್ರಹವಾಗಿದೆ. ಇದೊಂದು ಶಾಂತ ಸ್ವಭಾವದ ಗ್ರಹವಾಗಿದೆ. ಈ ರಾಶಿಯವರು ಸುಂದರ ಕಣ್ಣುಗಳನ್ನು ಹೊಂದಿರುತ್ತಾರೆ. ಕರುಣೆ ಉಳ್ಳವರಾಗಿರುತ್ತಾರೆ. ಇದೊಂದು ಸ್ತ್ರೀ ಗ್ರಹವಾಗಿದ್ದು, ಸಭ್ಯತೆ ಜಾಸ್ತಿ ಇರುತ್ತದೆ. ಮಾತೃ ಹೃದಯ ಹೊಂದಿರುತ್ತಾರೆ. ಈ ಗ್ರಹದವರು ಚಂದ್ರ ಹಾಗೂ ಸೂರ್ಯನಂತೆ ಅಧಿಕಾರ ಮಾಡುತ್ತಿರುತ್ತಾರೆ. ಇವರು ದಕ್ಷ ಆಡಳಿತಕಾರರು ಹಾಗೂ ಹೊಂದಾಣಿಕೆಯಿಂದ ಇರುತ್ತಾರೆ. ಪರರಿಗೆ ಉಪಕಾರವನ್ನ ಮಾಡುವವರಾಗಿದ್ದು, ಶ್ರೀಮಂತ, ಜ್ಞಾನವಂತ, ಹಾಗೂ ವಿದ್ಯಾವಂತ ಗ್ರಹ ಇವರದ್ದಾಗಿದೆ. ಓದದೇನೇ ಜ್ಞಾನ ಪಡೆಯುವ ಶಕ್ತಿ ಈ ಗ್ರಹಕ್ಕಿದೆ. ಎಲ್ಲಾ ವಿಷಯಗಳಲ್ಲಿ ಒಳ್ಳೆಯ ಮಾಹಿತಿ ಇರುತ್ತದೆ.

ಬಹಳ ಮುಖ್ಯವಾಗಿ ಇವರು ಆಭರಣ ಪ್ರಿಯರು ಆಗಿರುತ್ತಾರೆ. ವೈಭವ ಜೀವನವನ್ನ ನಡೆಸುವವರು. ವಾಹನ ಎಂದರೆ ಈವರಿಗೆ ಇಷ್ಟ. ಆದರೆ ಆ ವಾಹನವನ್ನು ಚಲಾಯಿಸಲು ಸೇವಕರನ್ನು ಹೊಂದಿರುತ್ತಾರೆ. ಇವರಲ್ಲಿ ಹೆಚ್ಚಾಗಿ ಸ್ವತಂತ್ರ ಮನೋಭಾವನೆ ಇರುತ್ತದೆ. ಇವರು ಕುಟುಂಬ ನಿರ್ವಹಣೆಯಲ್ಲಿ ನಿಸ್ಸೀಮರು. ಒಂದೊಂದು ರೂಪಾಯಿ ಲೆಕ್ಕ ಹಾಕುತ್ತಾರೆ. ಒಳ್ಳೆಯ ಆಹಾರವನ್ನ ತಯಾರಿಸುತ್ತಾರೆ. ಎಲ್ಲೆಂದರಲ್ಲಿ ತಿನ್ನಲು ಇಷ್ಟಪಡುವುದಿಲ್ಲ. ಇವರಿಗೆ ಅಡುಗೆ ರುಚಿಯಾಗಿರಬೇಕು. ಇವರಲ್ಲಿ ಶಕ್ತಿ ಹೀನತೆ, ಅಜೀರ್ಣತೆ, ಆಗಾಗ ಮಲ ವಿಸರ್ಜನೆಗೆ ಹೋಗುತ್ತಿರುತ್ತಾರೆ. ಹೊಟ್ಟೆ ಸಂಬಂಧಿತ, ಅಂದರೆ ಜಲ ಸಂಬಂಧಿತ ಕಾಯಿಲೆಗಳು ಜಾಸ್ತಿ ಇರುತ್ತದೆ. ಅದೇ ಚಂದ್ರ ಕೆಟ್ಟಿದ್ದಲ್ಲಿ ವಾಮಾಚಾರಕ್ಕೆ ಇಳಿಯುತ್ತಾರೆ. ಇವರು ಚಂದ್ರನಂತೆ ಬಳುಕು ದೇಹವನ್ನು ಹೊಂದಿರುತ್ತಾರೆ.

ಚಂದ್ರನ ಸಂಖ್ಯೆ : 2

ಚಂದ್ರನ ಮಿತ್ರರು : ರವಿ, ಬುಧ ಹಾಗೂ ಕೇತು

ಶತ್ರು ಗ್ರಹ : ರಾಹು

ಸಮ ಗ್ರಹಗಳು: ಕುಜ, ಗುರು, ಶುಕ್ರ, ಮತ್ತು ಶನಿ

ಉಚ್ಚ ಸ್ಥಾನ : ವೃಷಭ ರಾಶಿ

ನೀಚ ಸ್ಥಾನ : ವೃಶ್ಚಿಕ ರಾಶಿ

ದಶವರ್ಷ : 10 ವರ್ಷಗಳು

ಮೂಲ ತ್ರಿಕೋ : ಕರ್ಕ ರಾಶಿ

ಉಚ್ಚಾರಾಂಶ : 3

ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಅವಧಿ 2ವರೇ ದಿನ

ದಿಕ್ಕು : ವಾಯುವ್ಯ

ಕಾರಕ : ಕಫ

ಲೋಹ : ಬೆಳ್ಳಿ

ಅಂಗಾಂಗ : ರಕ್ತ

ಇಂದ್ರಿಯ : ನಾಲಿಗೆ

ಧಾನ್ಯ : ಅಕ್ಕಿ

ಇವರ ರತ್ನ: ಮುತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.