ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ಮಹೀಂದ್ರಾದಿಂದ ದೇಶೀಯ ವೆಂಟಿಲೇಟರ್‌, ಬೆಲೆ ₹7,500ಕ್ಕಿಂತಲೂ ಕಡಿಮೆ

Last Updated 28 ಮಾರ್ಚ್ 2020, 8:40 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಾದ್ಯಂತ ಲಾಕ್‌ಡೌನ್‌ ಪರಿಣಾಮ ಈಗಾಗಲೇ ಎಲ್ಲ ಕಾರು ತಯಾರಿಕಾ ಕಂಪನಿಗಳು ಕಾರ್ಯ ಸ್ಥಗಿತಗೊಳಿಸಿವೆ. ತಯಾರಿಕಾ ಘಟಕಗಳಲ್ಲಿ ವೆಂಟಿಲೇಟರ್‌ ಸಿದ್ಧಪಡಿಸುವ ಪ್ರಯತ್ನವನ್ನೂ ಕೆಲವು ಕಂಪನಿಗಳು ನಡೆಸುತ್ತಿದ್ದು, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಅಗ್ಗದ ದರದ ವೆಂಟಿಲೇಟರ್‌ ಪ್ರಸ್ತುತ ಪಡಿಸಿದೆ.

ಆಂಬ್ಯು ಬ್ಯಾಗ್‌ ಎಂದು ಕರೆಯಲಾಗುವ ವೆಂಟಿಲೇಟರ್‌ ಅಥವಾ ಗಾಳಿ ಚೀಲದ ಮಾಸ್ಕ್‌ನ್ನು ಮಹೀಂದ್ರಾ ದೇಶಿಯವಾಗಿ ಸಿದ್ಧಪಡಿಸಿದೆ. ಇದರ ಬೆಲೆ ₹7,500ಕ್ಕೂ ಕಡಿಮೆ ಇರಲಿದೆ ಎಂದು ಕಂಪನಿ ಹೇಳಿದೆ.

ಕೊರೊನಾ ವೈರಸ್‌ ಸೊಂಕು ಉಸಿರಾಟದ ಸಮಸ್ಯೆ ತರುವುದರಿಂದ ರೋಗಿಗಳಿಗೆ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸುವುದು ಅಗತ್ಯವಾಗಲಿದೆ. ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿದ್ದು, ವೆಂಟಿಲೇಟರ್‌ಗಳಿಗೆ ತೀವ್ರ ಬೇಡಿಕೆ ಉಂಟಾಗುವ ಸಾಧ್ಯತೆ ಹೆಚ್ಚಿರುವುದರಿಂದ ಕಾರು ತಯಾರಿಕಾ ಕಂಪನಿಗಳು ಆಂಬ್ಯು ಬ್ಯಾಗ್‌ ಸಿದ್ಧಪಡಿಸುತ್ತಿವೆ. ಮಹೀಂದ್ರಾ ಕಂಪನಿಯ ಮುಂಬೈ ಮತ್ತು ನಾಸಿಕ್‌ನ ಕಾರು ತಯಾರಿಕಾ ಘಟಕಗಳಲ್ಲಿ ಇಂಜಿನಿಯರ್‌ಗಳ ತಂಡ ಕೇವಲ 48 ಗಂಟೆಗಳಲ್ಲಿಯೇ ಆಂಬ್ಯು ಬ್ಯಾಗ್‌ ಮಾದರಿ ಸಿದ್ಧಪಡಿಸಿದೆ ಎಂದು ಮಹಿಂದ್ರಾ ಕಂಪನಿ ಮುಖ್ಯಸ್ಥ ಆನಂದ್‌ ಮಹೀಂದ್ರಾ ಗುರುವಾರ ಟ್ವೀಟ್‌ ಮಾಡಿದ್ದಾರೆ.

'ಐಸಿಯುಗಳಲ್ಲಿ ಬಳಕೆಯಾಗುವ ವೆಂಟಿಲೇಟರ್‌ಗಳು ಅತ್ಯಂತ ಸೂಕ್ಷ್ಮ ಸಾಧನಗಳಾಗಿದ್ದು, ₹5–10 ಲಕ್ಷ ಬೆಲೆ ಇದೆ. ಪ್ರಸ್ತುತ ದೇಶೀಯವಾಗಿ ಸಿದ್ಧ‍ಪಡಿಸಲಾಗುತ್ತಿರುವ ಆಂಬ್ಯು ಬ್ಯಾಗ್‌ಗಳು ಜೀವ ಉಳಿಸಲು ಸಮರ್ಥವಾಗಿವೆ. ಇದಕ್ಕೆ ₹7,500ಕ್ಕೂ ಕಡಿಮೆ ಬೆಲೆ ಇರಲಿದೆ ಹಾಗೂ ಇದರಿಂದಾಗಿ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT